ಹಿಂದುತ್ವದ ಭಾಷಣ ಮಾಡುವವರು ಬೀಫ್ ಕಟ್ಲೇಟ್, ಮದ್ಯ ಸೇವಿಸುತ್ತಾರೆ- ಬಿಜೆಪಿ ನಾಯಕರ ವಿರುದ್ಧ ಸಂಜಯ್ ರಾವುತ್ ಆರೋಪ

0
168

ಸನ್ಮಾರ್ಗ ವಾರ್ತೆ

ಮುಂಬಯಿ: ಮಹಾರಾಷ್ಟ್ರದ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಬವನ್ಕುಲೆಯವರ ಪುತ್ರ ಸಂಕೇತ್ ಬವನ್‍ಕುಲೆಯವರ ವಿರುದ್ಧ ಶಿವಸೇನೆ ಸಂಸದ ಸಂಜಯ್ ರಾವುತ್ ಕಟು ಟೀಕೆ ಮಾಡಿದ್ದಾರೆ.

ಶ್ರಾವಣ ಮಾಸ, ಗಣಪತಿ ಉತ್ಸವದಲ್ಲಿ ಹಿಂದುತ್ವ ಭಾಷಣ ಮಾಡುವವರು ಬೀಫ್ ತಿನ್ನುತ್ತಾರೆ ಇದು ಸಮ್ಮತಾರ್ಹವೇ ಎಂದು ರಾವುತ್ ಪ್ರಶ್ನಿಸಿದ್ದಾರೆ. ಸಂಕೇತ್ ಮತ್ತು ಗೆಳೆಯರು ಒಂದು ಹೊಟೇಲಿನಲ್ಲಿ ಬೀಫ್ ಕಟ್ಲೇಟ್ ತಿಂದ ಬಿಲ್ಲನ್ನು ಶೇರ್ ಮಾಡಿ ರಾವುತ್ ಈ ಆರೋಪ ಹೊರಿಸಿದ್ದಾರೆ. ಮದ್ಯದ ಜೊತೆಗೆ ಬೀಫ್ ತಿಂದಿದ್ದಾರೆ ಎಂದವರು ಹೇಳಿದರು.

ನಾಗಪುರದ ಕಾನೂನು ವ್ಯವಸ್ಥೆಯ ಕುರಿತು ರಾವುತ್ ಕಠುವಾಗಿ ಟೀಕಿಸಿದರು. ನಾಗಪುರದಲ್ಲಿ ಕಳೆದ ದಿವಸ ಸಂಕೇತ್ ಮತ್ತು ಸಂಗಡಿಗರು ಸಂಚರಿಸಿದ ಕಾರು ಅಪಘಾತಕ್ಕೊಳಗಾಗಿತ್ತು. ಹದಿನೆಂಟು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬ ಸಾಮಾನ್ಯ ವ್ಯಕ್ತಿಯಿಂದ ಇಂತಹ ಘಟನೆ ನಡೆದಿದ್ದರೆ ಪೊಲೀಸರು ಆತನ ಕುಟುಂಬ ಸದಸ್ಯರು ಮತ್ತು ಗೆಳೆಯರ ಜೊತೆ ಅವನನ್ನೂ ರಸ್ತೆಯಲ್ಲಿ ಮೆರವಣಿಗೆ ಮಾಡಿಸುತ್ತಿದ್ದರು ಎಂದು ರಾವುತ್ ಹೇಳಿದರು.

ಸಂಕೇತ್ ಮತ್ತು ಸಂಗಡಿಗರು ಆಹಾರ ತಿಂದ ಹೊಟೇಲಿನಲ್ಲಿ ಬೀಫ್ ಇಲ್ಲ , ಚಿಕನ್ ಮಟನ್ ಇದೆ ಎಂದು ಬಿಜೆಪಿ ಹೇಳಿದೆ.

ಸೋಮವಾರ ಸಂಕೆತ್ ಅತೀ ವೇಗದಿಂದ ಆಡಿ ಕಾರನ್ನು ಚಲಾಯಿಸಿ ಬಂದು ಢಿಕ್ಕಿ ಹೊಡೆದಿದ್ದ. ಬಿಜೆಪಿ ನಾಯಕನ ಮಗನ ನಿರ್ಲಕ್ಷ್ಯದ ವರ್ತನೆಗೆ ಕಣ್ಣು ಮುಚ್ಚಿ ನಾಲ್ಕು ವರ್ಷ ಹಿಂದಿನ ಅನಿಲ್ ದೇಶ್‍ಮುಖ್‍ರ ಬಂಧನಕ್ಕೆ ಫಡ್ನವಿಸ್ ಯತ್ನಿಸುತ್ತಿದ್ದಾರೆ ಎಂದು ರಾವುತ್ ಹೇಳಿದರು. ಸಂಕೇತ್ ಢಿಕ್ಕಿ ಹೊಡೆದು ಅಪಘಾತ ನಡೆಸಿದರೂ ಎಫ್‌ ಐಆರ್ ನಲ್ಲಿ ವಾಹನ ಮಾಲಿಕನ ಹೆಸರಿಲ್ಲ. ಯಾಕೆ ಹೀಗೆ ಎಂದು ರಾವುತ್ ಪ್ರಶ್ನಿಸಿದ್ದಾರೆ.