ಸೆಂಟ್ರಲ್ ಅಮೇರಿಕಾ ವಿಶ್ವವಿದ್ಯಾಲಯದಿಂದ ಎಸ್.ಎಂ ರಶೀದ್ ಅವರಿಗೆ ಗೌರವ ಡಾಕ್ಟರೇಟ್

0
305

ಸನ್ಮಾರ್ಗ ವಾರ್ತೆ

ಮಂಗಳೂರು: ಮೆಲ್ಕಾರ್ ಮಹಿಳಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಜಿ ಎಸ್‌.ಎಂ.ರಶೀದ್ ಅವರಿಗೆ ಯೂನಿವರ್ಸಿಟಿ ಆಫ್ ಸೆಂಟ್ರಲ್ ಅಮೆರಿಕ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಸಾಮಾಜಿಕ, ಶಿಕ್ಷಣ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಅವರ ನಿರಂತರ ಮತ್ತು ಸಮರ್ಪಿತ ಸೇವೆಗಳನ್ನು ಗುರುತಿಸಿ, ಎಸ್‌.ರಾಧಾಕೃಷ್ಣನ್‌ ಟೀಚರ್ಸ್ ವೆಲ್ಫೇರ್ ಅಸೋಸಿಯೇಷನ್ ಆಫ್ ಇಂಡಿಯಾ ಸೆಂಟ್ರಲ್ ಅಮೇರಿಕಾ ವಿಶ್ವವಿದ್ಯಾನಿಲಯಕ್ಕೆ ಎಸ್‌.ಎಂ ರಶೀದ್‌‌ರನ್ನು ಗೌರವ ಡಾಕ್ಟರೇಟ್‌ಗೆ ಶಿಫಾರಸು ಮಾಡಿತ್ತು. ಇದೇ ತಿಂಗಳ ಆರಂಭದಲ್ಲಿ ಅವರಿಗೆ ಪ್ರಶಸ್ತಿ ನೀಡಲಾಗಿತ್ತು.