ಬಂಧುಗಳೇ ಇಲ್ಲ; ಅಂತ್ಯ ಸಂಸ್ಕಾರಕ್ಕೆ ಹಣವೂ ಇಲ್ಲ: ಅಮೇರಿಕದಲ್ಲಿ ಫ್ರೀಝರ್‌ನಲ್ಲಿಯೇ ಉಳಿದ ನೂರಾರು ಕೊರೋನ ರೋಗಿಗಳ ಮೃತದೇಹಗಳು!

0
464

ಸನ್ಮಾರ್ಗ ವಾರ್ತೆ

ನ್ಯೂಯಾಕ್: ನ್ಯೂಯಾರ್ಕಿನಲ್ಲಿ ಕೊರೋನದಿಂದ ಮೃತಪಟ್ಟಿರುವ ನೂರಾರು ಮೃತದೇಹಗಳು ಈಗಲೂ ದೊಡ್ಡ ಫ್ರೀಝರ್ ಟ್ರಕ್‍ಗಳಲ್ಲಿ ಇರಿಸಲಾಗಿದೆ ಎಂದು ನ್ಯೂಯಾಕ್ ಸಿಟಿ ಅಧಿಕಾರಿಗಳು ತಿಳಿಸಿದ್ದಾರೆ. ಎಪ್ರಿಲ್ ತಿಂಗಳ ನಂತರ ಮೃತರಾಗಿರುವ 650 ಮೃತದೇಹಗಳ ಹಕ್ಕುದಾರರನ್ನು ಕಂಡು ಹುಡುಕಲು ಸಾಧ್ಯವಾಗಿಲ್ಲ. ಶವಸಂಸ್ಕಾರಕ್ಕೆ ಹಣವನ್ನು ಹೊಂದಿಸಲು ಆಗದೆ ಟ್ರಕ್‍ಗಳಲ್ಲಿಯೇ ಮೃತದೇಹಗಳನ್ನು ಇರಿಸಲಾಗಿದೆ. ಕೊರೋನ ಹೆಚ್ಚಳದ ಬಳಿಕ ಮೃತರ ದೇಹವನ್ನು ಸರಿಯಾಗಿ ರಕ್ಷಿಸಿಡುವ ವ್ಯವಸ್ಥೆಗಳು ಇಲ್ಲ ಎಂದು ಚೀಫ್ ಮೆಡಿಕಲ್ ಎಕ್ಸಾಮಿನರ್ಸ್ ಕಚೇರಿ ತಿಳಿಸಿದೆ.

ನೂರಾರು ಮೃತದೇಹಗಳನ್ನು ಇಷ್ಟರಲ್ಲೇ ಹಾರ್ಟ್ ರೇ ಐಲೆಂಡಿನಲ್ಲಿ ಸಂಸ್ಕರಿಸಲಾಯಿತು ಎಂದು ಮೇಯರ್ ಬಿಲ್ಲ್ ಡಿಬ್ಲೊಸಿಯೊ ತಿಳಿಸಿದರು. ಕೊರೋನ ಪೂರ್ಣವಾಗಿ ಹೋಗುವವರೆಗೆ ಸ್ಟೋರೇಜ್ ಸ್ಪೆಷಲಿಟಿಗಳಲ್ಲಿಯೇ ಮೃತದೇಹ ರಕ್ಷಿಸುವ ವ್ಯವಸ್ಥೆ ಮಾಡಲಾಗಿದೆ ಎಂದೂ ಮೇಯರ್ ಹೇಳಿದರು. ಎಪ್ರಿಲ್ ಒಂದಕ್ಕೆ 1941 ಸಾವುಗಳು ನ್ಯೂಯಾರ್ಕಿನಲ್ಲಿ ನಡೆದಿತ್ತು.

ಹಾರ್ಟ್ ರೇ ಐಲೆಂಡಿನಲ್ಲಿ ಸಾಮೂಹಿಕವಾಗಿ ಮೃತದೇಹ ಸಂಸ್ಕಾರ ನಡೆಸಲಾಗಿದೆ ಎಂಬ ವರದಿ ಬಹಿರಂಗವಾಗುವುದರೊಂದಿಗೆ ಇನ್ನೂ ಇಂತಹ ಘಟನೆಗಳು ಆಗದಿರುವಂತೆ ಕ್ರಮ ಸ್ವೀಕರಿಸಿದ್ದೇವೆ ಎಂದು ಮೇಯರ್ ಭರವಸೆ ನೀಡಿದರು. ಮೃತದೇಹಗಳ ಸಂಸ್ಕಾರಕ್ಕೆ ಕನಿಷ್ಠ ವೆಚ್ಚ 6500 ಡಾಲರಾಗಿದೆ ಎಂದು ನ್ಯೂಯಾರ್ಕ್ ಸ್ಟೇಟ್ ಫ್ಯೂನರಲ್ ಡೈರಕಟರ್ಸ್ ಅಸೋಸಿಯೇಶನ್ ತಿಳಿಸಿದೆ.