ಅಮೆರಿಕದ ಮೈತ್ರಿಗಳನ್ನು ಒಗ್ಗೂಡಿಸುವ ಅಗತ್ಯವಿದೆ: ಕಮಲಾ ಹ್ಯಾರಿಸ್

0
337

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್‌‌: ನಾವು ದೇಶದ ಜನರ ಪರವಾಗಿ ಕೆಲಸ ಮಾಡಲು ಸಿದ್ಧರಿದ್ಧೇವೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಮೈತ್ರಿಗಳನ್ನು ಒಗ್ಗೂಡಿಸುವ ಅಗತ್ಯವಿದೆ ಎಂದಿರುವ ಕಮಲಾ ಹ್ಯಾರಿಸ್, ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಗಳನ್ನು ಮರುಸ್ಥಾಪಿಸಿ, ಅವುಗಳನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕಾಗಿದೆ ಎಂದಿದ್ದಾರೆ.

ವಿಶ್ವದಲ್ಲಿ ಅಮೆರಿಕದ ನಾಯಕತ್ವ ಮರು ಸ್ಥಾಪಿಸಲು ದೇಶಿಯವಾಗಿ ನಾವು ಎದುರಿಸುತ್ತಿರುವ ಸವಾಲುಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕಾದ ಅಗತ್ಯವಿದೆ ಎಂದು ಇದೇ ವೇಳೆ ತಿಳಿಸಿರುವ ಅವರು, ನಾವು ಚುನಾಯಿತರಾಗಿ ಶ್ವೇತಭವನಕ್ಕೆ ಕಾಲಿಟ್ಟಾಗ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂಬುದರ ಬಗ್ಗೆ ನಮಗೆ ತಿಳಿದಿತ್ತು’ ಎಂದು ಕಮಲಾ ತಿಳಿಸಿದರು.

ಕೋವಿಡ್‌ ಪಿಡುಗನ್ನು ಹತೋಟಿಗೆ ತರುವುದು ನಮ್ಮ ಮುಂದಿರುವ ಮೊದಲ ಸವಾಲು. ಇದರೊಂದಿಗೆ ದೇಶದ ಆರ್ಥಿಕತೆಯನ್ನು ಜವಾಬ್ದಾರಿಯುತವಾಗಿ ತೆರೆಯಬೇಕಾಗಿದೆ ಎಂದು ಅಮೆರಿಕದ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್‌ ಮಾಧ್ಯಮಕ್ಕೆ ತಿಳಿಸಿದ್ದಾರೆ.