ಕ್ರಿಕೆಟಿಗರು ಒತ್ತಡದ ಬಗ್ಗೆ ಮಾತಾಡುವುದರಿಂದ ದೂರ ಸರಿಯುತ್ತಾರೆ: ಮಾನಸಿಕ ಆರೋಗ್ಯದ ಬಗ್ಗೆ ಎಂ.ಎಸ್. ಧೋನಿ

0
422

ಸನ್ಮಾರ್ಗ ವಾರ್ತೆ

ನವದೆಹಲಿ,ಮೇ,7: ಮೈದಾನದಲ್ಲಿ ಸದಾ ಶಾಂತವಾಗಿರುವ ಭಾರತೀಯ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಭಯಭೀತರಾಗುವುದಾಗಿಯೂ ಮತ್ತು ಅವರು ಒತ್ತಡವನ್ನೂ ಅನುಭವಿಸುತ್ತಿರುವುದಾಗಿಯೂ ಹೇಳಿಕೊಂಡಿದ್ದು, ಭಾರತೀಯ ಕ್ರಿಕೆಟಿಗರು ಮಾನಸಿಕ ಸಮಸ್ಯೆಗಳ ಬಗ್ಗೆ ಮಾತನಾಡುವುದರಿಂದ ದೂರ ಸರಿಯುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ತಂಡದೊಂದಿಗೆ ಯಾವಾಗಲೂ ಮಾನಸಿಕ ತರಬೇತುದಾರರು ಇರಬೇಕಾದ ಅಗತ್ಯವಿದೆ ಎಂದು ಧೋನಿ ಹೇಳಿದ್ದಾರೆ.

ಮಾಜಿ ಕ್ರಿಕೆಟಿಗ ಎಸ್.ಬದ್ರೀನಾಥ್ ಅವರ ಮಾನಸಿಕ ಆರೋಗ್ಯದ ಆನ್‌ಲೈನ್ ಅಧಿವೇಶನದಲ್ಲಿ ಕ್ರಿಕೆಟ್, ವಾಲಿಬಾಲ್, ಟೆನಿಸ್‌ನ ಉನ್ನತ ತರಬೇತುದಾರರೊಂದಿಗೆ ನಡೆಸಿದ ಚರ್ಚೆಯ ವೇಳೆ ಧೋನಿ ಈ ವಿಷಯವನ್ನು ಬಹಿರಂಗಪಡಿಸಿದರು.

ಮಾನಸಿಕ ತರಬೇತುದಾರರು ಹೆಚ್ಚು ದಿನಗಳವರೆಗೆ ತಂಡದೊಂದಿಗೆ ಸಂಪರ್ಕ ಹೊಂದಿದ್ದರೆ, ಇದರಿಂದ ಹೆಚ್ಚಿನ ಲಾಭ ದೊರೆಯುವುದಿಲ್ಲ ಎಂದು ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಧೋನಿ ಹೇಳಿದ್ದಾರೆ.

ಏಕೆಂದರೆ ಮಾನಸಿಕ ತರಬೇತುದಾರರು ತಮ್ಮ ಅನುಭವಗಳನ್ನು ಆಟಗಾರರೊಂದಿಗೆ ಕೆಲವು ದಿನಗಳವರೆಗೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ನಿರಂತರವಾಗಿ ತಂಡದೊಂದಿಗೆ ಇದ್ದರೆ, ಆಟಗಾರನ ಆಟದ ಮೇಲೆ ಪರಿಣಾಮ ಬೀರುವ ಕ್ಷೇತ್ರಗಳು ಯಾವುವು ಎಂಬುದನ್ನು ಒಬ್ಬರು ಅರ್ಥಮಾಡಿಕೊಳ್ಳಬಹುದು. ಇಂದಿಗೂ ಮಾನಸಿಕ ಸಮಸ್ಯೆಗಳನ್ನು ಒಪ್ಪಿಕೊಳ್ಳುವುದು ಭಾರತದಲ್ಲಿ ದೊಡ್ಡ ವಿಷಯವಾಗಿದೆ ಎಂದು ಧೋನಿ ಹೇಳಿದರು.

ವಿಶೇಷವಾಗಿ ಆಟಗಾರರೊಂದಿಗೆ ನಾನು ನಿಜವಾಗಿಯೂ ಬ್ಯಾಟಿಂಗ್‌ಗೆ ಹೋದಾಗ, ಮೊದಲ 5 ರಿಂದ 10 ಎಸೆತಗಳನ್ನು ಆಡುವಾಗ ಹೃದಯ ಬಡಿತ ಬಹಳ ವೇಗವಾಗಿರುತ್ತದೆ. ಇದನ್ನು ಯಾರೂ ಹೇಳುವುದಿಲ್ಲ‌. ಆದರೆ ನಾನು ಈ ಒತ್ತಡವನ್ನು ಅನುಭವಿಸಿದ್ದೇನೆ, ನನಗೆ ಸ್ವಲ್ಪ ಭಯವಾಗುತ್ತದೆ. ಎಲ್ಲರೂ ಹಾಗೆ ಭಾವಿಸುತ್ತಾರೆ. ಆದರೆ ಅದನ್ನು ಹೇಗೆ ಎದುರಿಸಬೇಕೆಂದು ಯಾರೂ ಹೇಳುತ್ತಿಲ್ಲವೇಕೆ? ಎಂದವರು ಹೇಳಿದರು.

ಇದು ಒಂದು ಸಣ್ಣ ಸಮಸ್ಯೆಯಾದರೆ ಹೆಚ್ಚಿನ ಸಂದರ್ಭಗಳಲ್ಲಿ ಆಟಗಾರನು ಅದರ ಬಗ್ಗೆ ತರಬೇತುದಾರನೊಂದಿಗೆ ಮಾತನಾಡುವುದಿಲ್ಲ. ಆಟಗಾರ ಮತ್ತು ತರಬೇತುದಾರರ ನಡುವಿನ ಸಂಬಂಧ ಬಹಳ ಮುಖ್ಯ ಎಂದು ಧೋನಿ ಹೇಳಿದರು.

ಈ ಆನ್ ಲೈನ್ ಅಧಿವೇಶನದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಭಾಗವಹಿಸಿದ್ದರು. ಮಾನಸಿಕ ಆರೋಗ್ಯವು ಕ್ರೀಡೆಯಲ್ಲಿ ಮಾತ್ರವಲ್ಲ ಜೀವನದಲ್ಲಿಯೂ ಮುಖ್ಯವಾಗಿದೆ ಎಂದು ಕೊಹ್ಲಿ ಹೇಳಿದರು.