ರೈಲ್ವೆ ಟ್ರ್ಯಾಕ್ ಮೇಲೆ ಮಲಗಿದ್ದ 16 ಕಾರ್ಮಿಕರ ಮೇಲೆ ಹರಿದ ಗೂಡ್ಸ್ ರೈಲು: ದೇಶವೇ ಬೆಚ್ಚಿಬಿದ್ದ ಘಟನೆ

0
1175

ಸನ್ಮಾರ್ಗ ವಾರ್ತೆ

ಔರಂಗಾಬಾದ್,ಮೇ,8:ಕಾಲ್ನಡಿಗೆಯಲ್ಲಿ 40 ಕಿ.ಮೀ ನಡೆದು ದಣಿದಿದ್ದ 16 ವಲಸೆ ಕಾರ್ಮಿಕರು ಔರಂಗಾಬಾದ್ ಬಳಿ ಸರಕು ರೈಲು ಡಿಕ್ಕಿ ಹೊಡೆದು ದಾರುಣ ಸಾವಿಗೀಡಾದ ಘಟನೆ ಇಡೀ ದೇಶವನ್ನೇ ಬಿಚ್ಚಿ ಬೀಳಿಸಿದೆ. ಕಾರ್ಮಿಕರೆಲ್ಲರೂ ಮಧ್ಯಪ್ರದೇಶಕ್ಕೆ ಹೋಗುತ್ತಿದ್ದರು. ಔರಂಗಾಬಾದ್‌ನ ಕರಮದ್ ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದ್ದು, ರೈಲ್ವೆ ಹಳಿ ಮೇಲೆ ಕಾರ್ಮಿಕರು ಮಲಗಿದ್ದಾಗ ಈ ಘಟನೆ ನಡೆದಿದೆ. ಗಾಯಗೊಂಡ 5 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಈ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.

ಬದ್ನಾಪುರ ಮತ್ತು ಕರ್ನಾಡ್ ನಿಲ್ದಾಣದ ನಡುವೆ ಈ ಘಟನೆ ನಡೆದಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಈ ಪ್ರದೇಶವು ರೈಲ್ವೆಯ ಪರಭಾನಿ-ಮನ್ಮದ್ ವಿಭಾಗದ ಅಡಿಯಲ್ಲಿ ಬರುತ್ತದೆ. ಕಾರ್ಮಿಕರು ಶುಕ್ರವಾರ ಮುಂಜಾನೆ ರೈಲ್ವೆ ಹಳಿ ಮೇಲೆ ಮಲಗಿದ್ದರು. ಸರಕು ರೈಲಿನ ಚಾಲಕ ಅವರನ್ನು ನೋಡಿದ್ದನಲ್ಲದೇ, ಅವರನ್ನು ಉಳಿಸಲು ಸಹ ಪ್ರಯತ್ನಿಸಿದ್ದನು ಆದರೂ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ.

ಕಾರ್ಮಿಕರು ಜಾಲನಾದ ಎಸ್‌ಆರ್‌ಜೆ ಸ್ಟೀಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ರೈಲು ರಂಗಾಬಾದ್‌ನಿಂದ ಗುರುವಾರ ಮಧ್ಯಪ್ರದೇಶದ ಕೆಲವು ಜಿಲ್ಲೆಗಳಿಗೆ ತೆರಳಿತ್ತು. ಈ ಕಾರಣಕ್ಕಾಗಿ, ಜಾಲನಾದಿಂದ ಬಂದ ಈ ಕಾರ್ಮಿಕರು ಔರಂಗಾಬಾದ್‌ಗೆ ತೆರಳಿದರು. ರೈಲ್ವೆ ಹಳಿಯ ಪಕ್ಕದಲ್ಲಿ 40 ಕಿ.ಮೀ ನಡೆದ ನಂತರ, ಅವ ಕರ್ಮದ್ ಬಳಿ ಹಲಿಯಲ್ಲಿಯೇ ನಿದ್ರೆಗೆ ಜಾರಿದರು. ಅಪಘಾತದಲ್ಲಿ 14 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಔರಂಗಾಬಾದ್ ಗ್ರಾಮೀಣ ಎಸ್ಪಿ ಮೋಕ್ಷದಾ ಪಾಟೀಲ್ ಹೇಳಿದ್ದಾರೆ. ನಂತರ ಇನ್ನೂ 2 ಮಂದಿ ಸಾವನ್ನಪ್ಪಿದರು. ಉಳಿದ 4 ಜನರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. “ಕಾರ್ಮಿಕರು ಮಧ್ಯಪ್ರದೇಶದ ಶಹ್ದೋಲ್ ಮತ್ತು ಉಮರಿಯಾ ಮೂಲದವರು ಎಂದು ತಿಳಿಸಿದ್ದಾರೆ.