ಇಸ್ರೇಲಿನ ವಿರೋಧದ ನಡುವೆಯೂ ಪೂರ್ವ ಜರುಸಲೇಮ್, ವೆಸ್ಟ್ ಬ್ಯಾಂಕಿನ ಯುದ್ಧಾಪರಾಧ ತನಿಖೆಗೆ ಐಸಿಸಿ‌ ಯಿಂದ ಹಸಿರು ನಿಶಾನೆ

0
512

ಸನ್ಮಾರ್ಗ ವಾರ್ತೆ

ಜೆರುಸಲೇಂ: ಅತಿಕ್ರಮಿತ ಫೆಲಸ್ತೀನ್ ಭೂಭಾಗದಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿ ನ್ಯಾಯ ಪಾಲನೆಗೆ ಸಿದ್ಧ ಎಂದು ಅಂತಾರಾಷ್ಟ್ರೀಯ ಕೋರ್ಟು(ಐಸಿಸಿ) ತೀರ್ಮಾನಿಸಿದ್ದು ಫೆಲಸ್ತೀನಿನ ಮಾನವಹಕ್ಕು ಸಂಘಟನೆಗಳು ಸ್ವಾಗತಿಸಿ ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕೆಂದು ಆಗ್ರಹಿಸಿದೆ.

ಫೆಲಸ್ತೀನ್ ಪ್ರದೇಶಗಳು, ಗಾಝ ಪಟ್ಟಿಯಲ್ಲಿ ಇಸ್ರೇಲಿನ ಸೇನೆ ಮಾಡಿದ ಯುದ್ಧ ಅಪರಾಧಗಳ ಕುರಿತು ಐಸಿಜೆಗೆ ತನಿಖೆ ನಡೆಸುವುದಕ್ಕೆ ಅವಕಾಶ ಲಭಿಸಿದೆ. 2014ರಲ್ಲಿ ಇಸ್ರೇಲ್ ಫೆಲಸ್ತೀನಿನ ನಡುವೆ ಪರಸ್ಪರ 50 ದಿನಗಳ ಯುದ್ಧ ನಡೆದು 2251 ಫೆಲಸ್ತೀನಿಯರು ಕೊಲ್ಲಲ್ಪಟ್ಟಿದ್ದರು. 73 ಇಸ್ರೇಲಿನ ಸೈನಿಕರೂ ಮೃತಪಟ್ಟಿದ್ದರು. ಪೂರ್ವ ಜೆರುಸಲೇಮ್‍ನ ವೆಸ್ಟ್ ಬ್ಯಾಂಕ್ ಗಾಝದಲ್ಲಿ ಇಸ್ರೇಲ್ ನಡೆಸಿದ ಯುದ್ಧ ಅಪರಾಧಕ್ಕೆ ಸಾಕ್ಷ್ಯವಿದೆಯೆಂದು ಐಸಿಸಿ ಪ್ರಾಸಿಕ್ಯೂಟರ್ ಫತುಬಿನ್ ಸೌದ್ ಬೆಟ್ಟು ಮಾಡಿದ್ದಾರೆ.

ಇಸ್ರೇಲಿನ ಸೈನ್ಯದೊಂದಿಗೆ ಫೆಲಸ್ತೀನಿ ಸಶಸ್ತ್ರ ವಿಭಾಗ ಫತಹ್‍ನ ಪಾತ್ರವಿರುವುದನ್ನು ಅವರು ಎತ್ತಿ ತೋರಿಸಿದರು. ತನಿಖೆ ಆರಂಭವಾಗುವ ಮೊದಲೇ ಈ ಕ್ಷೇತ್ರವನ್ನು ಐಸಿಜೆಯ ಕಾನೂನು ಪಾಲನೆಯ ಅಧೀನಕ್ಕೊಳಪಡಿಸಬೇಕೆಂದು ಅವರು ಆಗ್ರಹಿಸಿದರು.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೋರ್ಟು ತೀರ್ಪನ್ನು ತಳ್ಳಿಹಾಕಿದ್ದಾರೆ. ಐಸಿಸಿಯಲ್ಲಿ ಇಸ್ರೇಲ್ ಸದಸ್ಯನಾಗಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ. ಫೆಲಸ್ತೀನ್ ಐಸಿಸಿಯ ತೀರ್ಪನ್ನು ಐತಿಹಾಸಿಕವೆಂದು ಬಣ್ಣಿಸಿದೆ.