ಕೃಷಿ ಕಾನೂನು ಹಿಂಪಡೆಯದಿದ್ದರೆ ಖೇಲ್ ರತ್ನ ಪ್ರಶಸ್ತಿ ಮರಳಿಸುವೆ- ವಿಜೇಂದರ್ ಸಿಂಗ್

0
416

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೃಷಿ ಕಾನೂನು ವಿರುದ್ಧ ರೈತ ಪ್ರತಿಭಟನೆಗೆ ಬಂದ ಬಾಕ್ಸರ್, ಖೇಲ್ ರತ್ನ ಪ್ರಶಸ್ತಿ ವಿಜೇತ ವಿಜೇಂದರ್ ಸಿಂಗ್ ರೈತ ವಿರೋಧಿ ಕಾನೂನುಗಳನ್ನು ಪಾಪಸು ಪಡೆಯದಿದ್ದರೆ ತನಗೆ ಕೊಟ್ಟಿರುವ ಪರಮೋಚ್ಚ ಕ್ರೀಡಾ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮರಳಿಸುವೆ ಎಂದು ಘೋಷಿಸಿದರು. ರೈತರಿಗೆ ಬೆಂಬಲ ಸಾರಿದ ವಿಜೇಂದರ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತಾಡಿದರು.

ಒಲಿಂಪಿಕ್ಸ್ ಬಾಕ್ಸಿಂಗ್‍ನಲ್ಲಿ ಭಾರತಕ್ಕಾಗಿ ಮೆಡಲ್ ಗಳಿಸಿದ ಮೊದಲ ಬಾಕ್ಸರ್ ವಿಜೇಂದರ್ ಹರಿಯಾಣದವರು. 2019ರ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ದಿಲ್ಲಿಯಿಂದ ಕಾಂಗ್ರೆಸ್ ಟಿಕೇಟಿನಲ್ಲಿ ಸ್ಪರ್ಧಿಸಿ ಸೋಲುಂಡಿದ್ದರು. ದಿಲ್ಲಿ ಗಡಿಯಲ್ಲಿ ರೈತರ ಪ್ರತಿಭಟನೆ ಹನ್ನೊಂದನೇ ದಿನಕ್ಕೆ ಕಾಲಿಟ್ಟಿದೆ. ರೈತರನ್ನು ಹಲವಾರು ಕ್ರೀಡಾ ಪಟುಗಳು ಬೆಂಬಲಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಈ ಹಿಂದೆ ಪಂಜಾಬಿನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಪದ್ಮವಿಭೂಷಣ ಪ್ರಶಸ್ತಿಯನ್ನು ಮರಳಿಸಿದ್ದಾರೆ.