ಸನ್ಮಾರ್ಗ ವಾರ್ತೆ
ವಾಷಿಂಗ್ಟನ್,ಸೆ. 15: ಅನಧಿಕೃತವಾಗಿ ಬಂದೂಕು ಇರಿಸಿದ್ದಕ್ಕಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ರ ಪುತ್ರ ಹಂಡರ್ ಬೈಡನ್ ವಿರುದ್ದ ಅಮೆರಿಕದ ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್ ಕೇಸು ದಾಖಲಿಸಿದೆ.
2018ರಲ್ಲಿ ಮಾದಕ ವಸ್ತು ಅಡಿಕ್ಟ್ ಆಗಿದ್ದ ಸಮಯದಲ್ಲಿ ಬಂದೂಕು ಖರೀದಿಸಿ ಇಟ್ಟುಕೊಂಡಿದ್ದ ಎಂದು ಹಂಡರ್ ವಿರುದ್ಧ ಕೇಸು ದಾಖಲಾಗಿದೆ.
ಅಮೆರಿಕದ ಕಾನೂನು ಪ್ರಕಾರ ಮಾದಕ ವಸ್ತು ಅಡಿಕ್ಟ್ ಆಗಿರುವವರಿಗೆ ಬಂದೂಕು ತಮ್ಮ ಬಳಿ ಇರಿಸಿಕೊಳ್ಳುವ ಅಧಿಕಾರವಿಲ್ಲ. ಇನ್ನೆರಡು ಕೇಸುಗಳಾದ ಹಂಡರ್ ವಿರುದ್ಧ ಮಾದಕ ವಸ್ತು ಮಾರುವಾಗ ಮಧ್ಯಸ್ಥಿತಿಕೆ ವಹಿಸಿದ್ದು, ತೆರಿಗೆ ವಂಚಿಸಿದ್ದು ಹಂಡರ್ ವಿರುದ್ಧ ದಾಖಲಾದ ಪ್ರಕರಣಗಳಾಗಿವೆ. 2024ರಲ್ಲಿ ಅಧ್ಯಕ್ಷೀಯ ಚುನಾವಣೆಗಾಗಿ ಪುನಃ ಸ್ಪರ್ಧಿಸಲು ಹೊರಟಿರುವ ಜೋ ಬೈಡ್ಗೆ ಇದು ಹಿನ್ನಡೆಯೆಂದು ಅಮೆರಿಕದ ವರದಿಗಳು ಹೇಳಿವೆ.
ಹಂಡರ್ ಬಂದೂಕು ಪಡೆಯುವ ಅರ್ಜಿಯಲ್ಲಿ ಸುಳ್ಳು ಮಾಹಿತಿ ನೀಡಿದ್ದಲ್ಲದೇ, ಫೆಡರಲ್ ಸರಕಾರದೊಂದಿಗೆ ಸಹಿ ಹಾಕಿದ ಒಪ್ಪಂದದಲ್ಲಿಯೂ ತಪ್ಪು ವಿವರ ನೀಡಿದ್ದಾನೆ. ಅನಧಿಕೃತವಾಗಿ ಆಯುಧ ಹೊಂದಿದ್ದು ಅಪರಾಧ ಹಂಡರ್ ವಿರುದ್ದವಿದ್ದು ಈ ಅಪರಾಧಿಗಳಿಗೆ ಅಮೆರಿಕದ ಕಾನೂನು ಪ್ರಕಾರ ಗರಿಷ್ಠ 25 ವರ್ಷ ಜೈಲು ಶಿಕ್ಷೆ ಸಿಗಬಹುದಾಗಿದೆ. 750,000 ಡಾಲರ್ ದಂಡ ಕಟ್ಟಬೇಕಾಗುತ್ತದೆ.












