ಎಸ್‍ಎಂಎ ರೋಗ ಪೀಡಿತ ಆರು ತಿಂಗಳ ಮಗು ಇಮ್ರಾನ್ ನಿಧನ; ಇನ್ನು ಬೇಡ ಕೋರ್ಟ್‌ನ ತೀರ್ಮಾನ, 18 ಕೋಟಿ ರೂ. ಮದ್ದು….

0
775

ಸನ್ಮಾರ್ಗ ವಾರ್ತೆ

ಕಲ್ಲಿಕೋಟೆ,ಜು.21: ಎಸ್‍ಎಂಎ ರೋಗ ಪೀಡಿತಾರು ತಿಂಗಳ ಹಸುಗೂಸು ಇಮ್ರಾನ್ ಕೋಝಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಅಸುನೀಗಿದೆ. ಕಳೆದ ತಿಂಗಳಿನಿಂದ ಮಲಪ್ಪುರಂ ಪೆರಿಂದಲ್ ಮಣ್ಣದ ಆರಿಫ್‍ರ ಪುತ್ರ ಇಮ್ರಾನ್ ಅಹ್ಮದ್ ಎಂಬ ಮಗು ಸಂರಕ್ಷಣಾ ಕೇಂದ್ರದ ವೆಂಟಿಲೇಟರ್‌ನಲ್ಲಿತ್ತು.

ಹೃದಯಾಘಾತದಿಂದ ಮಗು ಮೃತಪಟ್ಟಿದೆ. ಎಸ್‌ಎಂಎ ರೋಗದ ಹದಿನೆಂಟು ಕೋಟಿ ರೂಪಾಯಿಯ ಚಿಕಿತ್ಸೆಗೆ ಸರಕಾರಿ ಸಹಾಯ ಅಗತ್ಯವನ್ನು ಕೋರಿ ಹೈಕೋರ್ಟಿಗೆ ಇಮ್ರಾನ್ ತಂದೆ ಆರಿಫ್ ಅರ್ಜಿ ಸಲ್ಲಿಸಿದ್ದರು. ಈ ದೂರಿನಲ್ಲಿ ತೀರ್ಪು ಪ್ರಕಟವಾಗುವ ಮೊದಲೇ ಮಗು ನಿಧನಹೊಂದಿದೆ.

ಚಿಕಿತ್ಸೆಗೆ 18 ಕೋಟಿ ರೂಪಾಯಿ ಸಂಗ್ರಹಿಸಲು ತಂದೆ ಮತ್ತು ಗೆಳೆಯರು ಊರವರು ಸೇರಿ ಹಣ ಹೊಂದಿಸುವ ಯತ್ನ ಅಂತಿಮ ಹಂತದಲ್ಲಿರುವಾಗ ಮಗುವು ನಿಧನವಾಯಿತು. ಮಂಗಳವಾರ ಬೆಳಗ್ಗೆಯವರೆಗೆ ಇವರ ಖಾತೆ 16.10 ಕೋಟಿ ರೂಪಾಯಿ ಬಂದಿತ್ತು. ಇದರೊಂದಿಗೆ ಉಳಿದ ಎರಡು ಕೋಟಿ ಸಂಗ್ರಹವಾಗು ನಿರೀಕ್ಷೆಯಲ್ಲಿ ಚಿಕಿತ್ಸೆಗೆ ನಿರ್ಧರಿಸಿ ಜನಪರ ಸಮಿತಿ ಮತ್ತು ಊರವರು ಮುಂದೆ ಬಂದಿದ್ದರು. ಕಳೆದ ಕೆಲವು ತಿಂಗಳಿನಿಂದ ಖಾಸಗಿ ಆಸ್ಪತ್ರೆಯಲ್ಲಿ ಮತ್ತು ಕೋಝಿಕ್ಕೋಡ್ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಮಗು ವೆಂಟಿಲೇಟರ್‌ನಲ್ಲಿ ತೀವ್ರ ಉಪಚಾರದಲ್ಲಿತ್ತು. ಔಷಧಿ ಲಭಿಸಿದರೆ ಮಗುವಿನ ಆರೋಗ್ಯ ಚೇತರಿಸಬಹುದೆನ್ನುವ ವಿಶ್ವಾಸ ಜನರಲ್ಲಿತ್ತು. ಆದ್ದರಿಂದ ಸ್ವಯಂಸೇವಾ ಸಂಘಟನೆಗಳು ಮತ್ತು ಯುವಕರು ವಿವಿಧ ಸಂಘಟನೆಗಳು ಹಣ ಹೊಂದಿಸುವ ತೀವ್ರ ಪರಿಶ್ರಮ ನಡೆಸುತ್ತಿದ್ದರು. ಜೂನ್ 30ಕ್ಕೆ ಮಂಕಡ ಫೆಡರಲ್ ಬ್ಯಾಂಕಿನ ಖಾತೆ ತೆರೆದು ಹಣ ಸಂಗ್ರಹಿಸುವ ಕಾರ್ಯ ಆರಂಭವಾಗಿತ್ತು. ಕೇರಳ ಮತ್ತು ಗಲ್ಫ್‌ನಿಂದ ಹಣದ ಸಹಾಯ ಲಭಿಸತೊಡಗಿತ್ತು.ಈ ನಡುವೆ ಮಗುವು ನಿಧನಹೊಂದಿದೆ.