ಚೀನದಲ್ಲಿ ರಾಷ್ಟ್ರೀಯ ಭಾವನೆಗಳಿಗೆ ಧಕ್ಕೆ ತರುವ ಉಡುಪು ಧರಿಸಿದರೆ ಶಿಕ್ಷೆ  

0
398

ಬೀಜಿಂಗ್: ರಾಷ್ಟ್ರೀಯ ಭಾವನೆಗಳಿಗೆ ಧಕ್ಕೆ ತರುವ ಬಟ್ಟೆ ಬರೆ ಉಡುಪುಗಳನ್ನು ನಿಯಂತ್ರಿಸಲಿಕ್ಕಾಗಿಯೇ ಕಾನೂನು ನಿರ್ಮಿಸಲು ಚೀನಾ ಸರಕಾರ ಮುಂದಾಗಿದೆ. ಈ ಕಾನೂನು ಉಲ್ಲಂಘಿಸಿದರೆ ಜೈಲು ಮತ್ತು ದಂಡ ವಿಧಿಸುವುದು ಸರಕಾರದ ಗುರಿಯಾಗಿದೆ.

ದೇಶ ವಿರೋಧಿ ಭಾಷಣ ಮತ್ತು ಬಟ್ಟೆಗಳನ್ನು ನಿಷೇಧಿಸುವ ಕರಡು ಮಸೂದೆಯನ್ನು ಚೀನಾ ಸಿದ್ಧಪಡಿಸುತ್ತಿದೆ ಎಂದು ವರದಿಯಾಗಿದೆ. ಈ ಸಂಬಂಧ ಕರಡು ಮಸೂದೆ ಸಿದ್ಧಗೊಂಡಿದ್ದರೂ, ಯಾವ ರೀತಿಯ ಬಟ್ಟೆಗಳನ್ನು ನಿಷೇಧಿಸಲಾಗುವುದು ಎಂಬುದು ಸ್ಪಷ್ಟವಾಗಿಲ್ಲ.

ಸಾರ್ವಜನಿಕ ಅಭಿಪ್ರಾಯಕ್ಕಾಗಿ ಇದಕ್ಕೆ ಸಂಬಂಧಿಸಿದ ಕರಡನ್ನು ಬಿಡುಗಡೆ ಮಾಡಲಾಗಿತ್ತು. ಚೀನಾದ ಹಲವು ಕಾನೂನು ತಜ್ಞರು ಹೊಸ ಕಾನೂನಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ವಿಷಯದ ಬಗ್ಗೆ ಸಾರ್ವಜನಿಕ ಅಭಿಪ್ರಾಯಗಳ ಅವಧಿಯು ಸೆಪ್ಟೆಂಬರ್ 30 ರಂದು ಕೊನೆಗೊಳ್ಳುತ್ತದೆ.

ಈ ತಿಂಗಳ ಆರಂಭದಲ್ಲಿ ಸ್ಕರ್ಟ್ ಧರಿಸಿ ಸ್ಟ್ರೀಮಿಂಗ್ ಮಾಡುತ್ತಿದ್ದ ಯುವಕನನ್ನು ಪೊಲೀಸರು ವಿಚಾರಣೆ ನಡೆಸುತ್ತಿರುವ ವಿಡಿಯೋ ಹರಿದಾಡಿತ್ತು. ನಂತರ ಜನರ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆಯೂ ಚರ್ಚೆಗಳು ನಡೆದವು. ಕಳೆದ ವರ್ಷ ಚೀನಾದಲ್ಲಿ ಕಿಮೋನೊ ಧರಿಸಿದ್ದಕ್ಕಾಗಿ ಮಹಿಳೆಯೊಬ್ಬರನ್ನು ಬಂಧಿಸಲಾಗಿತ್ತು.