ಭಾರತದ ರಾಜತಾಂತ್ರಿಕ ಪ್ರತಿನಿಧಿಯನ್ನು ಹೊರ ಹಾಕಿದ ಕೆನಡ

0
458

ಸನ್ಮಾರ್ಗ ವಾರ್ತೆ

ಒಟ್ಟಾವ, ಸೆ. 19: ಕೆನಡ ಭಾರತದ ನಡುವೆ ರಾಜತಾಂತ್ರಿಕ ಸಂಬಂಧವು ತೀರ ಹದಗೆಟ್ಟಿದ್ದು ಖಾಲಿಸ್ತಾನಿ ನಾಯಕ ಹರದೀಪ್ ಸಿಂಗ್ ನಿಜ್ಜರ್ ರ ಕೊಲೆ ಕೃತದಲ್ಲಿ ಭಾರತದ ಪಾತ್ರ ಇದೆ ಎಂದು ಆರೋಪಿಸಿ ಹಿರಿಯ ಭಾರತೀಯ ರಾಜತಾಂತ್ರಿಕ ಅಧಿಕಾರಿ ಪವನ್ ಕುಮಾರ್ ರಾಯ್‍ರನ್ನು ಕೆನಡ ಬಹಿಷ್ಕರಿಸಿತು.

ಇವರು ಕೆನಡದ ಭಾರತೀಯ ದೂತವಾದ ಅಧಿಕಾರಿಯಾಗಿದ್ದು ಕೂಡಲೇ ದೇಶಬಿಟ್ಟು ಹೋಗಿ ಎಂದು ಕೆನಡ ಸೂಚಿಸಿದ್ದು ಈ ಕುರಿತು ಈ ಘಟನೆಗೆ ಸಂಬಂಧಪಟ್ಟಂತೆ ಭಾರತೀಯ ದೂತವಾಸ ಪ್ರತಿಕ್ರಿಯೆ ನೀಡಿಲ್ಲ.

ಜೂನ್‍ನಲ್ಲಿ ಬ್ರಿಟಿಷ್ ಕೊಲಂಬಿಯದಲ್ಲಿ ಖಾಲಿಸ್ತಾನಿ ನಾಯಕ ಕೊಲೆಯಾಗಿದ್ದು ಇದರಲ್ಲಿ ಭಾರತದ ಏಜೆಂಟುಗಳಿದ್ದರು ಎಂದು ನಂಬಲರ್ಹ ಮಾಹಿತಿ ಇದೆ ಎಂದು ಕೆನಡದ ಪ್ರಧಾನಿ ಜಸ್ಟಿನ್ ಟ್ರೂಡೊ ಪಾರ್ಲಿಮೆಂಟಿನ ತುರ್ತು ಅಧಿವೇಶನದಲ್ಲಿ ತಿಳಿಸಿದರು. ಕೆನಡದ ಮಣ್ಣಿನಲ್ಲಿ ಯಾವ ಕೆನಡದ ಪ್ರಜೆಯನ್ನು ಕೊಲೆ ನಡೆದು ಅದರಲ್ಲಿ ಒಂದು ವಿದೇಶಿ ಸರಕಾರದ ಪಾತ್ರ ಇದ್ದರೆ ನಮ್ಮ ಸಾರ್ವಭೌಮಾಧಿಕಾರದ ಮೇಲೆ ಹಸ್ತಕ್ಷೇಪ ನಡೆದಂತೆ ಎಂದು ಟ್ರುಡೊ ಹೇಳಿದ್ದರು. ಈ ವಿಷಯವನ್ನು ಜಿ20 ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಹೇಳಿದ್ದೆ ಎಂದು ಟ್ರುಡೊ ಪಾರ್ಲಿಮೆಂಟಿಗೆ ತಿಳಿಸಿದ್ದರು.

ಖಾಲಿಸ್ತಾನ್ ವಾದಿ ಹರ್ದೀಪ್ ಸಿಂಗ್ ನಿಜ್ಜರ್ ರ ಕೊಲೆಯಲ್ಲಿ ಭಾರತದ ಸ್ಪಷ್ಟ ಪಾತ್ರವಿದೆ. ಈ ಹಿನ್ನೆಲೆಯಲ್ಲಿ ಕೆನಡದ ವಿದೇಶ ಸಚಿವ ಮೆಲಾನಿ  ಜೋಳಿ ನೀಡಿದ ಹೇಳಿಕೆ ವಿವಿಧ ಮಾಧ್ಯಮಗಳಲ್ಲಿ ಬಂದಿದೆ. ಜಿ20ಯಲ್ಲಿ ನರೇಂದ್ರ ಮೋದಿ ಜಸ್ಟಿನ್ ಟ್ರುಡೊಗೆ ಕೆನಡದ ಭಾರತ ವಿರುದ್ಧ ಚಟುವಟಿಕೆ ತಡೆಯುವಲ್ಲಿ ತೋರಿಸುತ್ತಿರುವ ನಿರ್ಲಕ್ಷ್ಯವನ್ನು ಕಟುವಾಗಿ ವಿರೋಧ ವ್ಯಕ್ತಪಡಿಸಿದ್ದೂ ನಡೆದಿತ್ತು. ಜಿ20ಗೆ ಬಂದ ಟ್ರುಡೊರ ವಿರುದ್ದ ಮತ್ತು ಇತರ ದೇಶಗಳನ್ನು ಕಡೆಗಣಿಸುವ ನಿಲುವು ಸ್ವೀಕರಿಸಲಾಗಿದೆ ಎಂಬ ವಿವಾದ ಎದ್ದಿತ್ತು.

ಕಳೆದ ಜೂನಿನಲ್ಲಿ ಖಾಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜಾರ್ ರನ್ನು ಕೆನಡದಲ್ಲಿ ಗುರುದ್ವಾರದ ಒಳಗೆ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಇದರಲ್ಲಿ ಭಾರತದ ಏಜೆನ್ಸಿಗಳ ಕೈವಾಡ ಇದೆ ಎಂದು ಕೆನಡ ಹೇಳುತ್ತಿದೆ. ಮೃತ ಹರ್‍ದೀಪ್ ಸಿಂಗ್‍ರಿಗೆ 46 ವರ್ಷ ವಯಸ್ಸು. ಗುರು ನಾನಕ್ ಸಿಖ್ ಗುರದ್ವಾರ ಸಾಹಿಬ್ ಮುಖ್ಯಸ್ಥರಾಗಿ ಅವರು ಸೇವೆ ಸಲ್ಲಿಸುತ್ತಿದ್ದರು. ಖಾಲಿಸ್ತಾನ್ ಟೈಗರ್ ಪೋರ್ಸ್ ಚೀಫ್ ಕೂಡ ಆಗಿದ್ದು ಸಿಖ್ ಫಾರ್ ಜಸ್ಟಿಸ್‍ನ ಕಾರ್ಯಕರ್ತ ಆಗಿದ್ದರು. ಪಂಜಾಬಿನ ಜಲಂಧರಿನ ದರ್‍ಸಿಂಗ್ ಪುರ ಗ್ರಾಮದವರು. ಖಾಲಿಸ್ತಾನ್ ಟೈಗರ್ ಫೋರ್ಸ್ ಗೆ ಇವರೇ ತರಬೇತಿ, ಧನ ಸಹಾಯ, ನೆಟ್‍ವರ್ಕಿಂಗ್ ಮುಂತಾದವರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಎನ್‍ಐಎ ಹರ್‍ದೀಪ್ ಸಿಂಗ್ ವಿರುದ್ಧ ಒಂದು ಕೇಸನ್ನು ದಾಖಲಿಸಿದೆ.