ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಪ್ರಯಾಣಿಕರನ್ನು ಹತ್ತಿಸಿದ ಕಾರಣಕ್ಕೆ ಸರಕು ವಾಹನಕ್ಕೆ ಇನ್ಶುರೆನ್ಸ್ ನಿರಾಕರಿಸುವಂತಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದುದರಿಂದ 3,25ಲಕ್ಷ ರೂಪಾಯಿ ನಷ್ಟ ಪರಿಹಾರ ಕೊಡಲು ಅದು ಆದೇಶಿಸಿದೆ. ಅಪಘಾತದಲ್ಲಿ ಹಾನಿಗೊಂಡ ವಾಹನದಲ್ಲಿ ಲೆಕ್ಕಕ್ಕಿಂತ ಹೆಚ್ಚು ಪ್ರಯಾಣಿಕರಿದ್ದರು ಎಂದು ನ್ಯೂ ಇಂಡಿಯ ಇನ್ಶೂರೆನ್ಸ್ ಕಂಪೆನಿಯು ಇನ್ಶೂರೆನ್ಸ್ ಮೊತ್ತ ನಿರಾಕರಿಸಿ ಸುಪ್ರೀಂಕೋರ್ಟಿನ ಮೊರೆ ಹೊಗಿತ್ತು. ಆದರೆ, ಅದಕ್ಕಿಂತ ಮೊದಲು ಬಳಕೆದಾರರ ಆಯೋಗ ಪರಿಹಾರ ಕೊಡಲು ಹೇಳಿತ್ತು.
ಇದನ್ನು ರದ್ದುಪಡಿಸಲು ಒಪ್ಪದ ಸುಪ್ರೀಂ ಕೋರ್ಟ್ ಇನ್ಶುರೆನ್ಸ್ ಹಣ ಕೊಡಲು ಆದೇಶಿಸಿದೆ. ವಾಹನವನ್ನು ಚಾಲಕ ನಿರ್ಲಕ್ಷ್ಯದಿಂದ ಚಲಾಯಿಸಿದ್ದನು. ಈ ವಿಷಯದಲ್ಲಿ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಆಗದು. ಸರಕು ವಾಹನದಲ್ಲಿ ಹೆಚ್ಚು ಜನರು ಇದ್ದರು ಎನ್ನುವುದು ವಿಷಯವಲ್ಲ ಎಂದು ಕೋರ್ಟು ಹೇಳಿತು. ಮೂರು ತಿಂಗಳೊಳಗೆ ವಾಹನದ ಮಾಲಕನಿಗೆ ಹಣ ಕೊಡಬೇಕೆಂದು ಜಸ್ಟಿಸ್ ಹೇಮಂತ್ ಗುಪ್ತ, ಜಸ್ಟಿಸ್ ವಿ. ರಾಮ ಸುಬ್ರಮಣ್ಯನ್ರ ಸುಪ್ರೀಂ ಕೋರ್ಟು ಪೀಠವು ಆದೇಶ ನೀಡಿದೆ.












