ಜಾಗತಿಕ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತಕ್ಕೆ 26 ಸ್ಥಾನಗಳ ಕುಸಿತ: 79 ರಿಂದ 105 ಸ್ಥಾನಕ್ಕೆ

0
1052

ಸನ್ಮಾರ್ಗ ವಾರ್ತೆ

ನವದೆಹಲಿ: ಜಾಗತಿಕ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕ 2020ರಲ್ಲಿ ಭಾರತವು 105ನೆ ಸ್ಥಾನಕ್ಕೆ ಕುಸಿದಿದೆ. ಇದಕ್ಕೂ ಮುನ್ನ 2018ರಲ್ಲಿ ಪ್ರಕಟಿಸಲಾದ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತವು 79ನೇ ರ್ಯಾಂಕಿಂಗ್‌ನಲ್ಲಿತ್ತು. 2020ರಲ್ಲಿ ಶ್ರೇಯಾಂಕವು 26 ಸ್ಥಾನಗಳ ಕುಸಿತ ಕಂಡಿದ್ದು, 79ನೇ ಸ್ಥಾನದಿಂದ 105ನೇ ಸ್ಥಾನಕ್ಕೆ ಕುಸಿದಿದೆ.

ಇಕನಾಮಿಕ್ ಫ್ರೀಡಂ ಆಫ್ ದಿ ವರ್ಲ್ಡ್:2020 ವಾರ್ಷಿಕ ವರದಿಯನ್ನು ಗುರುವಾರ ಪ್ರಕಟಿಸಿದ್ದು, ಕೆನಡಾದ ಫ್ರೇಸರ್ ಇನ್ಸ್ಟಿಟ್ಯೂಟ್ ಸಿದ್ಧಪಡಿಸಿದ ಈ ವರದಿಯನ್ನು ನವದೆಹಲಿ ಮೂಲದ ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ಸಿವಿಲ್ ಸೊಸೈಟಿಯ ಸಹಯೋಗದೊಂದಿಗೆ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ.

ಭಾರತದಲ್ಲಿ ಸುಧಾರಿತ ಆರ್ಥಿಕ ಸ್ವಾತಂತ್ರ್ಯವು ಮುಂದಿನ ಪೀಳಿಗೆಗಳು ಕೈಗೊಳ್ಳವ ಫ್ಯಾಕ್ಟರ್ ಮಾರುಕಟ್ಟೆಗಳಲ್ಲಿನ ಸುಧಾರಣೆ ಮತ್ತು ಜಾಗತಿಕ ವ್ಯಾಪಾರಕ್ಕೆ ಹೆಚ್ಚು ಮುಕ್ತ ಅವಕಾಶವನ್ನು ರೂಪಿಸುವುದರ ಮೇಲೆ ಅವಲಂಭಿಸಿದೆ ಎಂಬುದಾಗಿ ವರದಿಯು ಸೂಚಿಸಿದೆ.

ಈ ಪಟ್ಟಿಯಲ್ಲಿ ಹಾಂಕಾಂಗ್ ಹಾಗೂ ಸಿಂಗಾಪುರ ಪ್ರಥಮ ಹಾಗೂ ಎರಡನೇ ಸ್ಥಾನ ಪಡೆದಿದೆ. ಸೂಚ್ಯಂಕದಲ್ಲಿ ಚೀನಾ 124ನೇ ಸ್ಥಾನದಲ್ಲಿದೆ. ಈ ರ್ಯಾಂಕಿಂಗ್ ಪಟ್ಟಿಯು 162 ದೇಶಗಳನ್ನು ಒಳಗೊಂಡಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.