ಸನ್ಮಾರ್ಗ ಜು. 19, 2019
ಹೊಸದಿಲ್ಲಿ, ಜು. 19: ಮುಂಬೈ ಭಯೋತ್ಪಾದನಾ ದಾಳಿಯ ಮುಖ್ಯ ಸೂತ್ರಧಾರ ಹಾಫಿಝ್ ಸಈದ್ ಬಂಧನ ಕೇವಲ ನಾಟಕ ಎಂದು ಭಾರತ ತಿಳಿಸಿದೆ. 2001ರಲ್ಲಿ ಎಂಟು ಬಾರಿ ಈ ರೀತಿ ಈತನನ್ನು ಬಂಧಿಸಲಾಗಿತ್ತು. ಅದೇ ನಾಟಕವನ್ನು ಪೊಲೀಸರು ಮುಂದುವರಿಸಿದ್ದಾರೆ ಎಂದು ವಿದೇಶ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದರು.
ಬಂಧನ ಕೇವಲ ಒಂದು ನಾಟಕವಾಗಿದೆಯೇ ಅಥವಾ ಭಯೋತ್ಪಾದನೆ ಚಟುವಟಿಕೆ ನಡೆಸಿದವರಿಗೆ ಕಠಿಣ ಶಿಕ್ಷೆ ನೀಡಬೇಕಾಗಿದೆಯೇ ಎಂದು ಪ್ರಶ್ನಿಸುವ ಸಮಯ ಇದು. ಹಾಫಿಝ್ ವಿರುದ್ಧ ಕ್ರಮ ಪ್ರಾಮಾಣಿಕವಾಗಿದ್ದರೆ ಸ್ವಂತ ಮಣ್ಣಿನಲ್ಲಿ ನಡೆಯುವ ಭಯೋತ್ಪಾದನೆಯನ್ನು ನಿರ್ಮೂಲಿಸಲು ಪಾಕಿಸ್ತಾನ ಸಿದ್ಧವಾಗಲಿ ಎಂದು ರವೀಶ್ ಕುಮಾರ್ ಹೇಳಿದರು.
ಅಮೆರಿಕದ ರಾಜಕೀಯ ನಿರೀಕ್ಷರು ಪಾಕಿಸ್ತಾನದ ಕ್ರಮ ಮುಖವುಳಿಸಲಿಕ್ಕಿರುವುದು ಎಂದು ಟೀಕಿಸಿದ್ದರು. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮೊದಲ ಅಧಿಕೃತ ಅಮೆರಿಕ ಸಂದರ್ಶನಕ್ಕೆ ಮುಂಚಿತವಾಗಿ ಹಾಫಿಝ್ನನ್ನು ಬಂಧಿಸಲಾಗಿದೆ ಎನ್ನಲಾಗುತ್ತಿದೆ.
ಲಶ್ಕರೆ ತಯ್ಯಿಬ ಮತ್ತು ಜಮಾಅತ್ತುದ್ದಾವ ನಾಯಕನಾಗಿದ್ದಾನೆ ಹಾಫಿಝ್ ಸಈದ್. ಈತನನ್ನು ಬಂಧಿಸಬೇಕೆಂದು ಭಾರತ ಮತ್ತು ಅಮೆರಿಕ ನಿರಂತರ ಆಗ್ರಹಿಸುತ್ತಾ ಬಂದಿದೆ.












