ಭಾರತ, ಪಾಕಿಸ್ತಾನ, ಬಾಂಗ್ಲಾದೇಶಗಳನ್ನು ವಿಲೀನಗೊಳಿಸಬೇಕು: ಬಿಜೆಪಿಗೆ ಹೇಳಿದ ಮಹಾರಾಷ್ಟ್ರ ಸಚಿವ

0
426

ಸನ್ಮಾರ್ಗ ವಾರ್ತೆ

ಮುಂಬೈ,ನ.23: ಭಾರತ, ಪಾಕಿಸ್ತಾನ, ಬಾಂಗ್ಲಾದೇಶಗಳನ್ನು ವಿಲಯನಗೊಳಿಸಿ ಒಂದೇ ದೇಶ ಮಾಡಿದರೆ ಬಿಜೆಪಿಯ ನಡೆಯನ್ನು ಎನ್‍ಸಿಪಿ ಸ್ವಾಗತಿಸುತ್ತದೆ ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಹೇಳಿದ್ದಾರೆ. ಒಂದು ದಿನ ಕರಾಚಿ ಭಾರತದ ಭಾಗವಾಗಲಿದೆ ಎಂದು ದೇವೇಂದ್ರ ಫಡ್ನವಿಸ್ ಹೇಳಿದ್ದರು. ಇದಕ್ಕೆ ಹೀಗೆ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.

ಭಾರತ, ಪಾಕಿಸ್ತಾನ, ಬಾಂಗ್ಲಾದೇಶಗಳು ವಿಲೀನವನ್ನು ಬಯಸುತ್ತೇನೆ. ಬರ್ಲಿನ್ ಗೋಡೆ ಕೆಡವಲು ಆಗಬಹುದಾದರೆ ಯಾಕೆ ಭಾರತ, ಪಾಕಿಸ್ತಾನ, ಬಾಂಗ್ಲಾದೇಶಕ್ಕೆ ಒಂದಾಗಲು ಸಾಧ್ಯವಿಲ್ಲ? ಮೂರು ದೇಶಗಳನ್ನು ವಿಲೀನಗೊಳಿಸಲು ಬಿಜೆಪಿ ಬಯಸುವುದಾದರೆ ನಾವು ಅದನ್ನು ಖಂಡಿತ ಸ್ವಾಗತಿಸುತ್ತೇವೆ ಎಂದು ಮಾಲಿಕ್ ಎಎನ್‍ಐಗೆ ಹೇಳಿದರು.

ಬ್ರಹನ್ ಮುಂಬೈ ಕಾರ್ಪೊರೇಷನ್ ಚುನಾವಣೆಯಲ್ಲಿ ಶಿವಸೇನೆ, ಕಾಂಗ್ರೆಸ್ ಇರುವ ಮಹಾವಿಕಾಸ ಅಘಾಡಿ ಸರಕಾರದೊಂದಿಗೆ ಸೇರಿ ಎನ್‍ಸಿಪಿ ಸ್ಪರ್ಧಿಸಲು ಬಯಸುತ್ತಿದೆ ಎಂದು ಮಾಲಿಕ್ ಹೇಳಿದರು. ಬಿಎಂಸಿ ಚುನಾವಣೆಗೆ ಹದಿನೈದು ತಿಂಗಳು ಮಾತ್ರ ಉಳಿದಿದೆ. ಪ್ರತಿಯೊಂದು ಪಾರ್ಟಿಯು ಅವರ ಪಾರ್ಟಿಗಾಗಿ ಕೆಲಸ ಮಾಡುತ್ತಾರೆ.ನಾವು ನಮ್ಮ ಪಾರ್ಟಿಯನ್ನು ಬಲಪಡಿಸಲು ಶ್ರಮಿಸುತ್ತೇವೆ. ಮೂರು ಪಾರ್ಟಿಗಳು ಒಟ್ಟಾಗಿ ಸ್ಪರ್ಧಿಸಬೇಕೆಂದು ನಾವು ಬಯಸುತ್ತಿದ್ದೇವೆ.

ಅವಿಭಕ್ತ ಭಾರತದಲ್ಲಿ ನಂಬಿಕೆ ಇದೆ. ಒಂದು ದಿನ ಕರಾಚಿ ಭಾರತದ ಭಾಗವಾಗಲಿದೆ ಎಂದು ಕಳೆದ ದಿವಸ ದೇವೇಂದ್ರ ಫಡ್ನವಿಸ್ ಹೇಳಿದ್ದರು. ಮುಂಬೈಯಲ್ಲಿ ಸ್ವೀಟ್ ಸ್ಟೋರ್ ಒಂದರ ಹೆಸರಿನಿಂದ ಕರಾಚಿ ಎಂಬ ಹೆಸರನ್ನು ತೆಗೆದು ಹಾಕಬೇಕೆಂದು ಶಿವಸೇನೆ ಕಾರ್ಯಕರ್ತರು ತಗಾದೆ ಎತ್ತಿರುವುದಕ್ಕೆ ಪ್ರತಿಕ್ರಿಯಿಸುತ್ತಾ ಕರಾಚಿಯೇ ಭಾರತದ ಭಾಗವಾಗಲಿದೆ ಎಂದು ಹೇಳಿದ್ದರು.