ಹಾಲಿಗೂ ಧಾನ್ಯಕ್ಕೂ ಬೇಡಿಕೆಗಳಿಲ್ಲ: ಬಡತನದ ಇನ್ನೊಂದು ಮುಖ

0
416

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 24: ದೇಶದ ಜನರಲ್ಲಿ ಪೋಷಕಾಹಾರ ಖರೀದಿಸುವ ಶಕ್ತಿ ಕೂಡ ಕ್ಷೀಣಗೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಕಟು ಬಡತನವಿದೆ. ಹಾಲಿಗೂ ಧಾನ್ಯಗಳಿಗೂ ಬೇಡಿಕೆದಾರರಿಲ್ಲ ಎಂದು ಹೇಳಲಾಗುತ್ತಿದೆ. ಹಾಲುತ್ಪಾದನೆಯನ್ನು 2017-18ಕ್ಕೆ ಹೋಲಿಸಿದರೆ ಜನರು ಇದರ ಖರೀದಿಗೆ ಹಿಂಜರಿಯುತ್ತಿದ್ದಾರೆ. 2013-14 ವರ್ಷದಲ್ಲಿ 18.6 ಮಿಲಿಯನ್ ಟನ್ ಧಾನ್ಯಗಳ ಬಳಕೆಯಾಗಿತ್ತು. 2017-18ರಲ್ಲಿ 22.5 ಮಿಲಿಯನ್ ಟನ್ ಬಳಕೆಯಲ್ಲಿ ಹೆಚ್ಚಳವಾಗಿತ್ತು. ಆದರೆ 2018-19ರಲ್ಲಿ ಇದು 20.7 ಮಿಲಿಯನ್ ಟನ್‍ಗೆ ಇಳಿಕೆಯಾಗಿದೆ.

2015-16, 2016-7ನೆ ವರ್ಷದಲ್ಲಿ ಧಾನ್ಯಗಳ ಬಳಕೆಯಲ್ಲಿ ದಾಖಲೆ ಮಟ್ಟದಲ್ಲಿ ಇಳಿಕೆಯಾಗಿದೆ. ಗ್ರಾಮೀಣ ಜನರ ಖರೀದಿಶಕ್ತಿ ಕಡಿಮೆಯಾಗಿದ್ದು ಇದಕ್ಕೆ ಪ್ರಧಾನ ಕಾರಣವೆಂದು ನ್ಯಾಶನಲ್ ಸ್ಟಾಟಸ್ಟಿಕಲ್ ಕಚೇರಿ(ಎನ್‍ಎಸ್0) ಲೆಕ್ಕಗಳು ಸೂಚಿಸಿವೆ. ನಿರುದ್ಯೋಗ ತೀವ್ರವಾಗಿದ್ದು ಆದಾಯ ಕಡಿಮೆಯಾಗಿದ್ದು ಆಹಾರ ರೀತಿಯಲ್ಲಿ ಬದಲಾವಣೆಗೆ ಕಾರಣವಾಗಿದೆ. ಯಾಕೆ ಭಾರತೀಯರು ಅಗತ್ಯದಷ್ಟು ಧಾನ್ಯಗಳನ್ನು ಸೇವಿಸುತ್ತಿಲ್ಲ ಎಂಬ ಪ್ರಶ್ನೆ ಪುಣೆಯಲ್ಲಿ ನಡೆದ ಗ್ಲೋಬಲ್ ಪಲ್ಸ್ ಕಾನ್‍ಕ್ಲೇವ್‍ನಲ್ಲಿ ಸಾರ್ವತ್ರಿಕವಾಗಿ ಕೇಳಿಬಂದಿತ್ತು.

ಧಾನ್ಯ ಕಾಳು ವಿಭಾಗದಲ್ಲಿ ರಪ್ತು, ಆಮದು ಲೆಕ್ಕ ನೋಡಿದರೂ ಭಾರತದ ಜನರು ಪೋಷಕಾಹಾರ ಸಮೃದ್ಧವಾದ ಕಾಳುಗಳನ್ನು ಆಹಾರ ಕ್ರಮದಿಂದ ಹೊರಗಿಟ್ಟಿದ್ದು ಕಂಡು ಬರುತ್ತಿದೆ. ಉತ್ಪಾದನೆ ಹೆಚ್ಚು ಆಗುತ್ತಿದ್ದರೂ ಬಡ ಜನರಿಗೆ ಖರೀದಿಸಲು ಸಾಧ್ಯವಾಗುತ್ತಿಲ್ಲ. ಬೆಲೆಯೇರಿಕೆಯನ್ನು ಅವರಿಂದ ತಾಳಿಕೊಳ್ಳಲು ಆಗುತ್ತಿಲ್ಲ.

ಬೇಳೆ ಉತ್ತರ ಭಾರತೀಯರ ಪ್ರಧಾನ ಆಹಾರ. ಅವರು ಆಹಾರ ಕ್ರಮದಿಂದ ಅದನ್ನು ದೂರವಿಡಲು ಆರಂಭಿಸಿದ್ದಾರೆ. ತರಕಾರಿ ಬೆಲೆ ಕಡಿಮೆಯಾದೊಡನೆ ಧಾನ್ಯ ಕಾಳುಗಳ ಬದಲು ಅದನ್ನು ಸೇವಿಸತೊಡಗಿದರು. 1980ರಲ್ಲಿ ಮೊಟ್ಟೆ ಬಳಕೆ ಹೆಚ್ಚಿಸಲು ನ್ಯಾಶನಲ್ ಎಗ್ ಕಾರ್ಪೋ ರೇಷನ್ ಸಮಿತಿ ರೂಪಿಸಿತು. ಈ ಸಮಿತಿಯಿಂದ ಅಭಿಯಾನ ಆರಂಭವಾದ ಬಳಿಕ ಮೊಟ್ಟೆ ಬಳಕೆಯಲ್ಲಿ ಅತ್ಯಂತ ಹೆಚ್ಚಳವಾಯಿತು. ಇದರಂತೆ ಪೋಷಕ ಸಮೃದ್ಧಾಹಾರ ಕಾಳುಗಳು ಮತ್ತು ಹಾಲಿಗೂ ಅಭಿಯಾನ ಆರಂಭಿಸುವುದು ಅಗತ್ಯವಿದೆ ಎಂಬ ಸಾರ್ವತ್ರಿಕ ಅಭಿಪ್ರಾಯ ಕೇಳಿ ಬರುತ್ತಿದೆ.

ಮಾಂಸದಲ್ಲಿರುವ ಪೋಷಕಾರಾಹಾರ ಧಾನ್ಯಗಳಲ್ಲಿವೆ. ಇದರಲ್ಲಿ ಮೈಕ್ರೋನ್ಯೂಟ್ರಿಯಟ್ಸ್, ನಾರುಗಳು, ಇವೆ. ಕೊಲೆಸ್ಟ್ರಾಲ್ ಬೊಜ್ಜು ದೂರವಿಡುತ್ತವೆ. ಆದರೆ ಆದಾಯ ಇಲ್ಲದೆ ಆಹಾರ ಪಟ್ಟಿಯಿಂದ ಈಗ ಬೇಳೆಕಾಳು ದೂರವಾಗಿವೆ. ಧಾನ್ಯಗಳ ಬೆಲೆ ಗಗನಕ್ಕೇರಿದೆ.