ಮೂವರು ಖಲೀಫರ ನಿಂದನೆ: ಪ್ರಕರಣ ದಾಖಲು

0
520

ಸನ್ಮಾರ್ಗ ವಾರ್ತೆ

ಇಸ್ಲಾಮಿನ ಖಲೀಫರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿ ಧಾರ್ಮಿಕ ಸಂಘರ್ಷಕ್ಕೆ ಕಾರಣರಾದ ನಾಲ್ಕು ಮಂದಿಯ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋದ ಹಿನ್ನೆಲೆಯಲ್ಲಿ ರಜಾ ಜಮಾ ಮಸೀದಿಯ ಅಧ್ಯಕ್ಷರು ದೂರು ದಾಖಲಿಸಿದ್ದರು.

ಖಲೀಫ ಅಬೂಬಕ್ಕರ್ ಸಿದ್ದೀಕ್, ಉಮರ್ ಬಿನ್ ಕತ್ತಾಬ್, ಉಸ್ಮಾನ್ ಬಿನ್ ಅಫಾನ್ ಅವರನ್ನು ಈ ವಿಡಿಯೋದಲ್ಲಿ ನಿಂದಿಸಲಾಗಿದೆ ಎಂದು ಆರೋಪಿಸಲಾಗಿದೆ.

ಮುಸ್ಲಿಂ ಸಮುದಾಯದ ಭಾವನೆಗಳನ್ನು ಈ ವಿಡಿಯೋದಲ್ಲಿ ಘಾಸಿಗೊಳಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಿರ್ಜಾ ಮತ್ತು ಇತರ ಮೂವರ ವಿರುದ್ಧ ಬಿಎನ್ಎಸ್ ಕಾಯ್ದೆಯ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.