ಸನ್ಮಾರ್ಗ ವಾರ್ತೆ
ಎಲ್ಲರ ದೇವನೂ ಒಬ್ಬನೇ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ರಾಷ್ಟ್ರಪತಿ ಭವನದಲ್ಲಿ ಸರ್ವ ಧರ್ಮ ಸಮ್ಮೇಳನ ನಡೆಸಿತು. ಆದರೆ ಕ್ರೈಸ್ತ ಧರ್ಮದ ಪ್ರತಿನಿಧಿಗಳಿಗೆ ಮೊದಲು ಆಹ್ವಾನ ನೀಡಲಾಗಿತ್ತಾದರೂ ಆ ಬಳಿಕ ಆಹ್ವಾನವನ್ನು ರದ್ದು ಪಡಿಸಿದ ಕಾರಣ ಅವರು ಈ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿಲ್ಲ.
ವಿವಿಧ ಧರ್ಮಗಳಿಗೆ ಸಂಬಂಧಿಸಿದ ಹತ್ತು ನಾಯಕರು ರಾಷ್ಟ್ರಪತಿ ಭವನದಲ್ಲಿ ಮಾತಾಡಿದರು. ರಾಷ್ಟ್ರಪತಿ ದ್ರೌಪದಿ ಮುರುಮು ಅವರು ಸಮಾರೋಪ ಭಾಷಣ ಮಾಡಿದರು.

ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಸಲೀಂ ಇಂಜಿನಿಯರ್ ಅವರು ಇಸ್ಲಾಮ್ ಧರ್ಮವನ್ನು ಪ್ರತಿನಿಧಿಸಿ ಮಾತಾಡಿದರು ಅಲ್ಲದೆ ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಕಾರ್ಯದರ್ಶಿ ರಹಮತುನ್ನಿಸಾ ಅಸಿಸ್ಟೆಂಟ್ ಕಾರ್ಯದರ್ಶಿ ವಾರಿಸ್ ಹುಸೇನ್ ಮತ್ತು ಡಾಕ್ಟರ್ ಇಕ್ಬಾಲ್ ಸಿದ್ದಿಕಿ ಅವರು ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಆರ್ಚ್ ಬಿಷಪ್ ಅನಿಲ್ ಕೂಟೊ ಸಹಿತ ನಾಲ್ಕು ಮಂದಿ ಕ್ರೈಸ್ತರನ್ನು ಆರಂಭದಲ್ಲಿ ಸಭೆಗೆ ಆಹ್ವಾನಿಸಲಾಗಿತ್ತು.. ಆದರೆ ಬಳಿಕ ಆಹ್ವಾನವನ್ನು ರದ್ದುಪಡಿಸಲಾಗಿತ್ತು. ಅನಿಲ್ ಕೂಟೊ ಅವರ ಆಹ್ವಾನ ರದ್ದುಪಡಿಸಿರುವುದು ವಿವಾದವಾದ ಬಳಿಕ ಪುನಃ ಅನಿಲ್ ಕುಟ್ಟೋ ಅವರನ್ನು ಆಹ್ವಾನಿಸಲಾಯಿತು.. ಆದರೆ ಅವರು ತಿರಸ್ಕರಿಸಿದರು. ದೇಶದಲ್ಲಿ ಕ್ರೈಸ್ತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳಿಗೆ ಸಂಬಂಧಿಸಿ ಈ ಮೊದಲು ರಾಷ್ಟ್ರಪತಿಯವರನ್ನು ಭೇಟಿಯಾಗಿ ಅನಿಲ್ ಕುಟ್ಟೋ ಮನವಿ ಸಲ್ಲಿಸಿದ್ದರು.












