ಜಮಾಅತೆ ಇಸ್ಲಾಮೀ ಹಿಂದ್‍ನ ನೂತನ ರಾಷ್ಟ್ರಾಧ್ಯಕ್ಷ ಸಯ್ಯದ್ ಸಆದತುಲ್ಲಾ ಹುಸೈನಿ ಅವರೊಂದಿಗೆ ಸಂದರ್ಶನ

0
1010

ಅನು: ಅಬ್ದುಸ್ಸಲಾಮ್ ಯು.

(ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕರು)

ಪ್ರಶ್ನೆ: ನಿಮ್ಮ ಕುಟುಂಬ, ಶಿಕ್ಷಣ, ಆಂದೋಲನದ ಅನುಭವಗಳು?

ಉತ್ತರ: ನನ್ನ ತಾಯಿಯ ಊರಾದ ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯ ಒಂದು ಸಣ್ಣ ಗ್ರಾಮದಲ್ಲಿ ನಾನು ಜನಿಸಿದೆ. ತಂದೆ ಕರ್ನಾಟಕದವರು. ಇಂಜಿನಿಯರಾದ ತಂದೆ ಮಹಾರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದರು. ಆದ್ದರಿಂದ ನನ್ನ ಬಾಲ್ಯ ಕಾಲ ಮತ್ತು ಪ್ರಾಥಮಿಕ ಶಿಕ್ಷಣ ಮಹಾರಾಷ್ಟ್ರದ ವಿವಿಧ ಕಡೆಗಳಲ್ಲಿ ಕಳೆಯಿತು. ಪದವಿ ಪೂರ್ವ ಶಿಕ್ಷಣ ಮಹಾರಾಷ್ಟ್ರದ ಪರ್‍ಭಾನಿಯಲ್ಲಿ ನಡೆಯಿತು. ನಂತರ ಇಂಜಿನಿಯರಿಂಗ್ ಪದವಿ ಗಳಿಸಿದೆ.

ಬಾಲ್ಯದಿಂದಲೇ ಇಸ್ಲಾಮೀ ಆಂದೋಲನದ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ನಂತರ ಎಸ್.ಐ.ಓ. ಮೂಲಕ ಇಸ್ಲಾಮೀ ಆಂದೋಲನದಲ್ಲಿ ಸೇರಿಕೊಂಡೆ. 1990ರಲ್ಲಿ ಎಸ್.ಐ.ಓ.ನ ಸದಸ್ಯನಾದೆ. 1995ರಲ್ಲಿ ಎಸ್.ಐ.ಓ. ಮಹಾರಾಷ್ಟ್ರದ ರಾಜ್ಯಾಧ್ಯಕ್ಷವಾಗಿ ಆಯ್ಕೆಗೊಂಡೆ. ಆ ವರ್ಷದಲ್ಲೇ ಕೇಂದ್ರ ಸಲಹಾ ಸಮಿತಿಯಲ್ಲಿ ಸದಸ್ಯನಾದೆ. 1999ರಲ್ಲಿ ರಾಷ್ಟ್ರೀಯ ಅಧ್ಯಕ್ಷನಾಗಿ ಆಯ್ಕೆಗೊಂಡು 2003ರ ತನಕ ಮುಂದುವರಿದೆ. 1999ರಲ್ಲಿ ಜಮಾಅತ್ ಸದಸ್ಯನಾದೆ. 2007ರಿಂದ ಜಮಾಅತೆ ಇಸ್ಲಾಮೀ ಹಿಂದ್ ಇದರ ರಾಷ್ಟ್ರೀಯ ಸಲಹಾ ಸಮಿತಿಯಲ್ಲಿ ಕಾರ್ಯೋನ್ಮುಖ ನಾಗಿದ್ದೇನೆ. ಜಮಾಅತಿನ ಕಳೆದ ಅವಧಿಯಲ್ಲಿ ರಾಷ್ಟ್ರೀಯ ಉಪಾಧ್ಯಕ್ಷನಾಗಿಯೂ, ದೆಹಲಿಯಲ್ಲಿರುವ ರಿಸರ್ಚ್ ಸೆಂಟರಿನ ನಿರ್ದೇಶಕನಾಗಿಯೂ ಸೇವೆ ಸಲ್ಲಿಸಿದ್ದೇನೆ.

ಪ್ರಶ್ನೆ: ಜಮಾಅತೆ ಇಸ್ಲಾಮೀ ಹಿಂದ್‍ನ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಈ ಸಂದರ್ಭದಲ್ಲಿ ಆಂದೋಲನದ ಸಂಗಾತಿ ಗಳೊಂದಿಗೆ ಹಾಗೂ ದೇಶದ ಜನತೆಯೊಂದಿಗೆ ಏನನ್ನು ಹಂಚಿಕೊಳ್ಳ ಬಯಸುತ್ತೀರಿ?

ಉತ್ತರ: ಜಾಗತಿಕ ಮಟ್ಟದಲ್ಲಿ ವಿಶೇಷವಾಗಿ ಭಾರತದಲ್ಲಿ ಇಸ್ಲಾಮೀ ಆಂದೋಲನಗಳು ಹಲವು ಸವಾಲುಗಳನ್ನು ಎದುರಿಸುತ್ತಿವೆ. ಆದರೆ ಈ ಸಂದಿಗ್ಧ ಪರಿಸ್ಥಿತಿ ನಮಗೆ ದೊಡ್ಡ ಅವಕಾಶಗಳನ್ನು ತೆರೆದುಕೊಡುತ್ತದೆ ಎಂಬುದು ನನ್ನ ಭಾವನೆ. ಪ್ರತಿಕೂಲ ಸಂದರ್ಭಗಳಲ್ಲಿ ಅಥವಾ ಅದರ ಆಚೆ ಧಾರಾಳ ಸಾಧ್ಯತೆಗಳು ಖಂಡಿತಾ ಇವೆ. ಅವುಗಳನ್ನು ನಮಗೆ ಸದುಪಯೋಗಪಡಿಸಲು ಸಾಧ್ಯವಾಗಬೇಕು. ಇಸ್ಲಾಮ್ ಮತ್ತು ಇಸ್ಲಾಮೀ ಆಂದೋಲನ ವಿವಿಧ ರೀತಿಯ ಚರ್ಚೆಗಳಿಗೆ ಗ್ರಾಸವಾಗುತ್ತಿರುವ ಪ್ರಸಕ್ತ ಸ ನ್ನಿವೇಶದಲ್ಲಿ ನಮ್ಮ ಸಂದೇಶಗಳನ್ನು ಅವ್ಯಾಹತವಾಗಿ ಜನಸಮೂಹಕ್ಕೆ ತಲುಪಿಸುವ ಹೊಣೆಗಾರಿಕೆಯನ್ನು ನಾವು ಹೊತ್ತು ಕೊಳ್ಳಬೇಕು. ಅದಕ್ಕನುಗುಣವಾಗಿ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕು. ಈಗ ನಡೆಯುತ್ತಿರುವ ಚರ್ಚೆಗಳ ಆಚೆಗೆ ಇಸ್ಲಾಮೀ ಆಂದೋಲನದ ಅಗತ್ಯವೇನು? ಅದು ನೀಡುವ ಸಂದೇಶವೇನು? ದೇಶದ ಅಭಿವೃದ್ಧಿಗಾಗಿ ಅದರ ಚಟುವಟಿಕೆಗಳೇನು? ಇತ್ಯಾದಿ ವಿಷಯಗಳನ್ನು ಜನತೆಗೆ ತಿಳಿಯಪಡಿಸಲು ಪ್ರಸಕ್ತ ಸಂದರ್ಭವನ್ನು ನಮಗೆ ಉಪಯೋಗಿಸಿಕೊಳ್ಳಬಹುದು. ಅವಕಾಶಗಳನ್ನು ಉಪಯೋಗಿಸಿ ಕೊಂಡು ಜನರೊಂದಿಗೆ ವಿಚಾರ ವಿನಿಮಯ ನಡೆಸಲು ಸಾಧ್ಯ ವಾದರೆ ಖಂಡಿತವಾಗಿಯೂ ಅವರು ನಮ್ಮ ಸಂದೇಶವನ್ನು ಆಲಿಸಬಲ್ಲರು ಎಂದು ಆಂದೋಲನದ ಸಂಗಾತಿಗಳು ತಿಳಿದುಕೊಳ್ಳಬೇಕು.

ಇಂದು ಒಟ್ಟಾರೆಯಾಗಿ ಭಾರತದ ಜನತೆ ದೊಡ್ಡ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕೋಮು ಶಕ್ತಿಗಳು ದೇಶದ ಸುರಕ್ಷೆ ಮತ್ತು ನೆಮ್ಮದಿಯನ್ನು ಹಾಳುಗೆಡಹಿದ್ದಾರೆ. ದೇಶ ಈ ತನಕ ಅನುಸರಿಸಿ ಕೊಂಡು ಬಂದ ಮೂಲಭೂತ ಮೌಲ್ಯಗಳೇ ಇಂದು ಅಪಾಯದ ಅಂಚಿನಲ್ಲಿದೆ. ದ್ವೇಷದ ರಾಜಕೀಯ ತನ್ನ ಕಬಂದ ಬಾಹುವನ್ನು ಚಾಚುತ್ತಿರುವ ಈ ಸಂದರ್ಭದಲ್ಲಿ ವಿವಿಧ ಜನ ವಿಭಾಗಗಳ ಮಧ್ಯೆ ಸಂವಾದ ಹಾಗೂ ಸೌಹಾರ್ದತೆಯ ವಾತಾವರಣವನ್ನು ನಿರ್ಮಿಸುವ ಕೆಲಸ ಮಾಡಬೇಕಾಗಿದೆ. ವಿವಿಧ ಧರ್ಮೀಯರ ಮಧ್ಯೆಯಿರುವ ಅಪಗ್ರಹಿಕೆಗಳನ್ನು ನೀಗಿಸಲು ಗರಿಷ್ಠ ಪ್ರಯತ್ನಗಳನ್ನು ನಡೆಸಬೇಕಾಗಿದೆ. ಸ್ವಾರ್ಥ ಹಿತಾಸಕ್ತಿಯ ಗುಂಪುಗಳಿಗೆ ಈ ಸೌಹಾರ್ದ ಯುತ ಸಹಕಾರವನ್ನು ನಾಶಪಡಿಸಲು ಸಾಧ್ಯವಿಲ್ಲ ವೆಂಬುದನ್ನು ದೇಶದ ಜನತೆ ಒಟ್ಟಾಗಿ ತೋರಿಸಿ ಕೊಡಬೇಕಾಗಿದೆ. ಈ ಉದ್ದೇಶಕ್ಕಾಗಿ ಯುವಕರು ಕಟಿಬದ್ಧತೆಯೊಂದಿಗೆ ರಂಗಕ್ಕಿಳಿಯಬೇಕಾಗಿದೆ.

ಪ್ರಶ್ನೆ: ಇಸ್ಲಾಮೀ ಆಂದೋಲನಗಳು ಬದಲಾವಣೆ ಗಳನ್ನು ಸ್ವೀಕರಿಸಲು ಸಿದ್ಧವಾಗಬೇಕು ಮತ್ತು ಅದ ಕ್ಕಾಗಿ ಸಾಮಥ್ರ್ಯ ಗಳಿಸಬೇಕು ಎಂದು ನೀವು ಬರಹಗಳಲ್ಲಿಯೂ, ಬೇರೆ ರೀತಿಯಲ್ಲೂ ಸೂಚನೆ ಗಳನ್ನು ಪ್ರಕಟಪಡಿಸಿದ್ದೀರಿ. ಈ ಬಗ್ಗೆ ವಿವರಣೆಯನ್ನು ನೀಡಬಹುದೇ?

ಉತ್ತರ: ವಿವಿಧ ರಂಗಗಳಲ್ಲಿ ಇಸ್ಲಾಮೀ ಆಂದೋ ಲನ ಬದಲಾವಣೆಗಳನ್ನು ಸ್ವೀಕರಿಸಿಕೊಳ್ಳುವ ಶಕ್ತಿಯನ್ನು ಗಳಿಸಿಕೊಳ್ಳಬೇಕಾದುದು ಅನಿವಾರ್ಯ ವಾಗಿದೆ. ಜಮಾಅತ್ ಒಂದು ಸೈದ್ಧಾಂತಿಕ ಆಂದೋಲನಾಗಿರುವುದರಿಂದ ಸಿದ್ಧಾಂತಕ್ಕೆ ಸಂಬಂಧ ಪಟ್ಟ ವಿಚಾರವೇ ಅಲ್ಲಿ ಪ್ರಾಮುಖ್ಯತೆ ಯನ್ನು ಪಡೆಯುತ್ತದೆ. ಇಸ್ಲಾಮೀ ಆಂದೋಲನದ ಸೈದ್ಧಾಂತಿಕ ಚಿಂತನೆಗಳು ರೂಪುಗೊಂಡು ವಿಕಾಸ ಪಡೆದದ್ದು ವಿಭಜನೆಯ ಮೊದಲಿನ ಸನ್ನಿವೇಶ ಗಳಲ್ಲಿ. ನಂತರ ಭಾರತವೆಂಬ ರಾಷ್ಟ್ರ ಅಸ್ತಿತ್ವವನ್ನು ಪಡಕೊಂಡಿತು. ಮುಸ್ಲಿಮರು ಅಲ್ಪಸಂಖ್ಯಾತರ ಮುಖ್ಯ ವಿಭಾಗವಾಗಿ ಮಾರ್ಪಟ್ಟರು. ದೇಶ ಸಂಪೂರ್ಣವಾಗಿ ದೊಡ್ಡ ಬದಲಾವಣೆಗೆ ಗುರಿಯಾಯಿತು. ದೇಶವೆಂಬ ನೆಲೆಯಲ್ಲಿ ಇಲ್ಲಿ ಯಾವ ರೀತಿಯ ವ್ಯವಸ್ಥೆಯಿರಬೇಕು, ಅದರ ಆದ್ಯತೆಗಳು ಏನಾಗಿರಬೇಕು ಎಂಬುದು ಅಂದಿನ ಮುಖ್ಯ ಚರ್ಚಾ ವಿಷಯವಾಗಿತ್ತು. ಇದೇ ಸಂದರ್ಭದಲ್ಲಿ ಜಮಾಅತ್ ರಚನೆಗೊಂಡಿತು. ಆದರೆ ಇಂದು ಸ್ಥಿತಿ-ಗತಿಗಳು ಧಾರಾಳವಾಗಿ ಮಾರ್ಪಾಟುಗೊಂಡಿವೆ. ಚರ್ಚೆಗಳು ಬಹಳಷ್ಟು ಮುಂದುವರಿದಿದೆ. ಜಾಗತಿಕವಾಗಿಯೂ, ರಾಷ್ಟ್ರ ಮಟ್ಟದಲ್ಲೂ ಇಂದು ಇಸ್ಲಾಮನ್ನು ಒಂದು ಪ್ರಮುಖ ವಿಚಾರ ಮತ್ತು ಸಿದ್ಧಾಂತವಾಗಿ ಅಂಗೀಕರಿಸುವ ಸ್ಥಿತಿ ಉಂಟಾಗಿದೆ. ಅದರೊಂದಿಗೆ ಇನ್ನಿತರ ವಿಚಾರಧಾರೆಗಳೂ ಧಾರಾಳವಾಗಿ ಹುಟ್ಟಿಕೊಂಡಿವೆ. ಈ ತನಕ ಇಸ್ಲಾಮಿಗೂ, ಮುಸ್ಲಿಮರಿಗೂ ಎದುರಿಸಬೇಕಾಗಿ ಬರದಂತಹ ಹಲವು ವಿಚಾರಗಳು ಅವುಗಳಲ್ಲಿವೆ. ಇಂತಹ ವಿಷಯಗಳನ್ನು ಕೂಡಾ ನಾವು ಎದುರಿಸಬೇಕಾ ಗಿದೆ. ಮುಸ್ಲಿಮರು ಕೂಡಾ ಹಲವು ರೀತಿಯ ಪ್ರಶ್ನೆಗಳಿಗೆ ಗುರಿಯಾಗಿರುತ್ತಾರೆ. ಆದ್ದರಿಂದ ನಮ್ಮ ಧೋರಣೆಗಳನ್ನು ನವೀಕರಿಸದೆ ನಮಗೆ ಮುಂದಡಿ ಯಿಡಲು ಸಾಧ್ಯವಿಲ್ಲ. ವರ್ತಮಾನ ಕಾಲದ ಭಾರತಕ್ಕೆ ಹೆಚ್ಚು ಸೂಕ್ತವಾಗುವ ಸೈದ್ಧಾಂತಿಕ ಚರ್ಚೆಗಳನ್ನು ಹುಟ್ಟು ಹಾಕಲು ಆಂದೋಲನಕ್ಕೆ ಸಾಧ್ಯವಾಗಬೇಕು.

ಬದಲಾವಣೆ ಅನಿವಾರ್ಯವೆಂದು ತೋರುವ ಇನ್ನೊಂದು ರಂಗ ಸಂಘಟನೆಯ ಧೋರಣೆ ಮತ್ತು ವ್ಯವಸ್ಥೆಗೆ ಸಂಬಂಧ ಪಟ್ಟದ್ದಾಗಿದೆ. ಒಂದು ವಿಷಯದೊಂದಿಗೆ ನಾವು ವ್ಯವಹರಿಸುವ ರೀತಿ ಮತ್ತು ವರ್ತನೆಯಲ್ಲಿ ಬಹಳಷ್ಟು ಬದಲಾ ವಣೆಗಳನ್ನು ತರಬೇಕಾಗಿದೆ. ಎದುರಿಸಬೇಕಾದ ಸವಾಲುಗಳು ಮತ್ತು ಅದರ ಸನ್ನಿವೇಶ ಇತ್ಯಾದಿ ವಿಷಯಗಳನ್ನು ಪರಿಗಣಿಸಿಕೊಂಡು ಧೋರಣೆ ಮತ್ತು ನಿಲುವುಗಳಿಗೆ ರೂಪಕೊಡಬೇಕಾಗುತ್ತದೆ.

ನಮ್ಮ ದೇಶದಲ್ಲಿ ಯುವಕರ ಜನಸಂಖ್ಯೆಯ ಅನುಪಾತ ಬಹಳ ದೊಡ್ಡದಿದೆ. ಒಟ್ಟು ಜನಸಂಖ್ಯೆ 65% ಮಂದಿ 35 ವರ್ಷಕ್ಕಿಂತ ಕಡಿಮೆ ಪ್ರಾಯ ದವರು. ಕಳೆದ ತಲೆಮಾರುಗಳಿಗಿಂತ ಭಿನ್ನವಾದ ವಾತಾವರಣದಲ್ಲಿ ಬೆಳೆಯುತ್ತಿರುವವರು. ಸೋಶಿ ಯಲ್ ಮೀಡಿಯಾ ಕಾಲದ ದೊಡ್ಡ ಬದಲಾ ವಣೆಗಳನ್ನು ಯಾರಿಗೂ ಅಲ್ಲಗಳೆಯುವಂತಿಲ್ಲ. ಯುವ ಶಕ್ತಿಯೊಂದಿಗೆ ಸ್ಪಂದಿಸಲು ಸಾಧ್ಯವಾದರೆ ಮಾತ್ರ ನಮಗೆ ಸಕ್ರಿಯ ಆಂದೋಲನವಾಗಲು ಸಾಧ್ಯ. ಈ ಎರಡು ರಂಗಗಳ ಬಗ್ಗೆ ವಿಶೇಷವಾಗಿ ಪ್ರಸ್ತಾವಿಸಬೇಕೆಂದು ನಾನು ಬಯಸುತ್ತೇನೆ.

ಪ್ರಶ್ನೆ: ದೇಶದ ಆಡಳಿತ ವ್ಯವಸ್ಥೆಯಲ್ಲಿ ಭಾಗ ವಹಿಸುವ ಬಗ್ಗೆ ಜಮಾಅತ್ ಸಂವಿಧಾನದ ನಿಲುವಿ ನಲ್ಲಿ ಇತ್ತೀಚೆಗೆ ತಿದ್ದುಪಡಿ ಮಾಡಲಾಗಿತ್ತು. ಇನ್ನೂ ಹೆಚ್ಚಿನ ಬದಲಾವಣೆಗಳಿಗೆ ಸಾಧ್ಯತೆಗಳಿವೆಯೇ?

ಉತ್ತರ: ಖಂಡಿತ ಬದಲಾವಣೆಗೆ ಸಾಧ್ಯತೆಯಿದೆ. ಜಮಾಅತೆ ಇಸ್ಲಾಮೀ ಒಂದು ಸೈದ್ಧಾಂತಿಕ ಆಂದೋಲವೆಂಬಂತೆ ಒಂದು ಸಕ್ರಿಯ ಟೀಮ್ ಕೂಡಾ ಆಗಿದೆ. ಆದ್ದರಿಂದ ಅದಕ್ಕೆ ಎಲ್ಲ ಕಾಲ ದಲ್ಲೂ ಒಂದರಲ್ಲೇ ಅಂಟಿಕೊಂಡಿರಲು ಸಾಧ್ಯವಿಲ್ಲ. ಸಂಘಟನೆ ಯಾವಾಗಲೂ ತನ್ನ ಪ್ರಸ್ತುತತೆಯನ್ನು ಅಭಿವ್ಯಕ್ತಗೊಳಿಸುವುದು, ಅದು ಸಮಾಜದ ಸಮಸ್ಯೆಗಳೊಂದಿಗೆ ಯಾವ ರೀತಿ ಸ್ಪಂದಿಸುತ್ತದೆ ಮತ್ತು ಯಾವ ರೀತಿಯ ಬದಲಾವಣೆಗಳನ್ನು ತರುತ್ತದೆ ಎಂಬ ಆಧಾರದ ಮೇಲೆ. ಈ ಹಿಂದೆಯೂ ಜಮಾಅತ್ ಬಹಳಷ್ಟು ಬದಲಾವಣೆಗೆ ಒಳಪಟ್ಟಿದೆ. ಅಗತ್ಯಾನುಸಾರ ಮುಂದೆಯೂ ಒಳಪಡಲಿದೆ.

ನೀವು ವಿಶೇಷವಾಗಿ ಪ್ರಸ್ತಾಪಿಸಿದ ವಿಷಯ ವಾದ ನಿಲುವಿನ ಬದಲಾವಣೆಗೆ ಐತಿಹಾಸಿಕ ಮಹತ್ವವಿದೆ. ಜಮಾಅತ್ ಸ್ವಾತಂತ್ರ್ಯಕ್ಕಿಂತ ಮುಂಚೆ ಅಸ್ತಿತ್ವಕ್ಕೆ ಬಂತು. ಆ ಸಮಯದಲ್ಲಿ ಎಲ್ಲರ ಗಮನ ವಸಾಹತುಶಾಹಿಗಳ ವಿರುದ್ಧದ ಹೋರಾಟ ದಲ್ಲಿತ್ತು. ಇಸ್ಲಾಮೀ ಆಂದೋಲನವೂ ಅದರಲ್ಲಿತ್ತು. ಸ್ವಾತಂತ್ರ್ಯ ಸಂಗ್ರಾಮ ಅದರ ಕೊನೆಯ ಘಟ್ಟ ತಲುಪಿದ ಸಂದರ್ಭದಲ್ಲಿ ಬ್ರಿಟಿಷ್ ಸರಕಾರದ ಉದ್ಯೋಗವನ್ನು ಬಹಿಷ್ಕರಿಸ ಬೇಕೆಂಬ ನಿಲುವು ತಾಳಿದ ಅನೇಕ ಮುಸ್ಲಿಮ್ ವಿದ್ವಾಂಸರಿದ್ದರು. ಮಾತ್ರವಲ್ಲ, ಬ್ರಿಟಿಷರು ನಡೆಸುವ ಚುನಾವಣೆಗಲಲ್ಲಿ ಸ್ಪರ್ದಿಸುವುದಿಲ್ಲವೆಂದೂ, ಭಾಗ ವಹಿಸುವುದಿಲ್ಲ ವೆಂದೂ ಹೇಳಿಕೆ ನೀಡಿದ ಹಲವಾರು ಮಂದಿ ಯಿದ್ದರು. ತಾವು ಕಾನೂನು ವ್ಯವಸ್ಥೆ ಮತ್ತು ನ್ಯಾಯಾಲಯಗಳ ಭಾಗವಾಗುವುದಿಲ್ಲವೆಂದೂ ಕೆಲವರು ಘೋಷಿಸಿಬಿಟ್ಟರು. ಇದು ಕೇವಲ ಮುಸ್ಲಿಮ್ ವಿದ್ವಾಂಸರ ನಿಲವು
ಮಾತ್ರವಾಗಿರಲಿಲ್ಲ. ಅಸಹಕಾರ ಚಳುವಳಿ ದೇಶದಾ ದ್ಯಂತ ಅಲೆಯೆಬ್ಬಿಸಿದ್ದ ಸಮಯ. ಸ್ವಾಭಾವಿಕ ವಾಗಿಯೂ ಇಸ್ಲಾಮೀ ಆಂದೋಲನ ಕೂಡಾ ಬಹಿಷ್ಕಾರದ ತೀರ್ಮಾನಗಳನ್ನು ಕೈಗೊಂಡಿತ್ತು. ಆದರೆ ನಂತರ ಪರಿಸ್ಥಿತಿ ಬದಲಾಯಿತು. ದೇಶ ದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪನೆಯಾಯಿತು. ಆದ್ದರಿಂದ ಅದರೊಂದಿಗಿನ ಧೋರಣೆ ಕೂಡಾ ಬದಲಾಗಬೇಕು. ನಮಗೆ ಸಮೂಹದೊಂದಿಗೆ ಒಡನಾಡಲು ಮತ್ತು ವ್ಯವಹರಿಸಲು ಸಾಧ್ಯವಾಗಬೇಕು. ಅದಕ್ಕೆ ವ್ಯವಸ್ಥೆಯ ವಿವಿಧ ರಂಗಗಳಲ್ಲಿ ಭಾಗವಹಿಸುವುದು ಅನಿವಾರ್ಯವಾಗಿದೆ. ಆದ್ದರಿಂದ ಈ ಹಿಂದಿನ ತೀರ್ಮಾನವನ್ನು ಬದಲಾಯಿಸುವ ಅನಿವಾರ್ಯತೆ ಬಂತು. ಇದು ವಾಸ್ತವಿಕತೆ. ಸತ್ಯ ಮತ್ತು ನ್ಯಾಯಕ್ಕಾಗಿ ಆಂದೋಲನದ ಕಾರ್ಯಕರ್ತರು ಆಡಳಿತ, ನ್ಯಾಯಾಲಯ ಮತ್ತು ಉದ್ಯೋಗದ ಎಲ್ಲ ಸ್ತರಗಳಲ್ಲೂ ಭಾಗವಹಿಸಬೇಕೆಂದು ಜಮಾಅತ್ ಈಗ ತೀರ್ಮಾನವನ್ನು ಕೈಗೊಂಡಿದೆ.

ಪ್ರಶ್ನೆ: ಭಾರತದ ಇಸ್ಲಾಮೀ ಆಂದೋಲನ ಕಾರ್ಯರಂಗಕ್ಕಿಳಿದು ಏಳೂವರೆ ದಶಕಗಳಾದುವು. ಆದರೆ ಅದೇ ರೀತಿಯ ಬೆಳವಣಿಗೆ ಜನಬಲದಲ್ಲಿ ಉಂಟಾಗಲಿಲ್ಲ ಎಂದು ಬೊಟ್ಟು ಮಾಡುವವರಿz್ದÁರೆ. ಯಾಕೆ ಹೀಗಾಯಿತು? ಜನಾಂದೋಲನವಾಗಿ ಜಮಾಅತ್ ಬದಲಾಗಬೇಕಲ್ಲವೇ?

ಉತ್ತರ: ಜಮಾಅತೆ ಇಸ್ಲಾಮೀ ಜನಾಂದೋಲನ ವಾಗಿ ಮಾರ್ಪಡಲು ಪ್ರಯತ್ನಗಳನ್ನು ನಡೆಸುತ್ತಾ ಬಂದಿದೆ. ಆರಂಭದಲ್ಲಿ ಬಲಿಷ್ಠ ಹಾಗೂ ಸುದೃಢ ವಾದ ಒಂದು ನ್ಯೂಕ್ಲಿಯಸನ್ನು ಸಿದ್ಧಪಡಿಸಲು ಜಮಾಅತ್ ಪ್ರಯತ್ನಪಟ್ಟಿತು. ಆದರ್ಶ ಮತ್ತು ಸಂಸ್ಕರಣೆಗೊಂಡವರನ್ನು ಅದರಲ್ಲಿ ಸೇರಿಸಿ ಕೊಂಡಿತು. ಸೈದ್ಧಾಂತಿಕ ಆಂದೋಲನವೆಂಬ ನೆಲೆಯಲ್ಲಿ ಇಂತಹ ಸತ್ವವಿರುವ ಒಂದು ತಂಡ ವನ್ನು ರಚಿಸಬೇಕಾದ ಅನಿವಾರ್ಯತೆ ಇದೆ. ಇದೀಗ ಜನಾಂದೋಲನವಾಗಿ ಪರಿವರ್ತನೆ ಗೊಳ್ಳಲು ಪ್ರಯತ್ನಗಳನ್ನು ನಡೆಸುತ್ತಿದೆ. ಈ ಪ್ರಯತ್ನ ತುಂಬಾ ತಡವಾಯಿತೆಂಬ ಅರಿವಿದೆ. ಆದರೆ ಅದಕ್ಕೆ ಕಾರಣಗಳೂ ಇವೆ. ಜಮಾಅತ್‍ನ ರಚನೆಯೊಂದಿಗೆ ನಮ್ಮ ದೇಶ ವಿಭಜನೆಯನ್ನು ಎದುರಿಸಬೇಕಾಯಿತು. ವಿಭಜನೆಯ ನಂತರ ಬಹಳಷ್ಟು ಕಾಲ ಅದರ ದುರಂತವನ್ನು ವಿವಿಧ ರಂಗಗಳಲ್ಲಿ ಮುಸ್ಲಿಮ್ ಸಮುದಾಯ ಅನುಭವಿಸ ಬೇಕಾಗಿ ಬಂತು. ಇಸ್ಲಾಮೀ ಆಂದೋಲನವನ್ನೂ ಅದು ಬಾಧಿಸಿತು. ಆದರೆ ಈಗ ಜಮಾಅತ್ ಜನಾಂದೋಲನ ವಾಗಲು ಕಠಿಣ ಪ್ರಯತ್ನ ನಡೆಸುತ್ತಿದೆ. ವಿವಿಧ ಅಧೀನ ಸಂಸ್ಥೆಗಳು, ವಿವಿಧ ರಂಗಗಳಲ್ಲಿ ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ ಸ್ವತಂತ್ರ ವ್ಯವಸ್ಥೆಗಳು ಇತ್ಯಾದಿ ಅದರ ಭಾಗಗಳಾಗಿವೆ. ಈ ಚಟುವಟಿಕೆಗಳನ್ನೆಲ್ಲ ಫಲಪ್ರದವಾಗಿ ಮುನ್ನೆಲೆಗೆ ತರಲು ಸಾಧ್ಯವಾದರೆ ಜಮಾಅತ್‍ಗೆ ತನ್ನ ಬುನಾದಿಯನ್ನು ವಿಕಾಸಗೊಳಿಸಲು ಖಂಡಿತಕ್ಕೂ ಸಾಧ್ಯವಿದೆಯೆಂದು ನನ್ನ ಭಾವನೆ.

ಪ್ರಶ್ನೆ: ದೇಶದ ಜನಸಂಖ್ಯೆಯ ಮುಖ್ಯ ಭಾಗ ಯುವಕರಾಗಿದ್ದಾರೆಂದು ನೀವು ಹೇಳಿದಿರಿ. ವಿದ್ಯಾರ್ಥಿಗಳನ್ನು ಸಂಘಟಿಸಲು ಈಗ ಜಮಾಅತ್‍ನ ಮೇಲ್ನೋಟದಲ್ಲಿ ಎಸ್.ಐ.ಓ. ಇದೆ. ಯುವಕರನ್ನು ಪ್ರತ್ಯೇಕವಾಗಿ ಸಂಘಟಿಸಲು ಮತ್ತು ಅವರ ಸಾಮಥ್ರ್ಯವನ್ನು ಉಪಯೋಗಿಸಲು ಪ್ರತ್ಯೇಕ ಯುವ ಸಂಘಟನೆ ರಚಿಸುವ ಬಗ್ಗೆ ಜಮಾಅತ್ ಯೋಜನೆ ಯನ್ನು ಹಾಕಿಕೊಂಡಿದೆಯೇ?

ಉತ್ತರ: ಈಗಾಗಲೇ ಜಮಾಅತ್‍ನ ಅಧೀನದಲ್ಲಿ ವಿವಿಧ ರಾಜ್ಯಗಳಲ್ಲಿ ಯುವಕರ ಸಂಘಟನೆಗಳು ಕಾರ್ಯಾಚರಿಸುತ್ತಿವೆ. ವಿವಿಧ ರೀತಿಯ ಜನ ವಿಭಾಗಗಳು ವಾಸಿಸುತ್ತಿರುವ ವೈವಿಧ್ಯಪೂರ್ಣ ಸಮಾಜದಲ್ಲಿ ಫೆಡರಲ್ ವ್ಯವಸ್ಥೆಯೊಂದಿಗೆ ಜಮಾ ಅತ್ ಕೆಲಸ ಮಾಡುತ್ತಿದೆ. ಅದರ ಅಂಗವಾಗಿ ಆಯಾ ರಾಜ್ಯಗಳಲ್ಲಿ ಅಲ್ಲಿಯ ಸನ್ನಿವೇಶಗಳಿಗೆ ಹೊಂದಿಕೊಂಡು ಯುವಕರ ವಿಭಾಗವನ್ನು ರಚಿ ಸಲು ಜಮಾಅತ್ ಅನುಮತಿ ನೀಡಿದೆ. ಕೆಲವು ರಾಜ್ಯಗಳು ಅದನ್ನು ಉಪಯೋಗಿಸಿಕೊಂಡಿವೆ. ಜಮಾಅತ್‍ನ ಹೆಚ್ಚಿನ ವ್ಯವಸ್ಥೆಗಳು ಜಾರಿಗೆ ಬಂದದ್ದು ಈ ರೀತಿ ಫೆಡರಲ್ ವಿಧಾನಗಳ ಮೂಲಕ. ಕೆಲವು ರಾಜ್ಯಗಳು ಅಲ್ಲಿಯ ವಾತಾವರಣವನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿ ಸಂಘಟನೆ ಮತ್ತು ಮಹಿಳಾ ವಿಭಾಗಗಳನ್ನು ರಚಿಸಿಕೊಂಡಿತು. ನಂತರ ರಾಷ್ಟ್ರೀಯ ಮಟ್ಟದಲ್ಲಿ ಅದು ಅಸ್ತಿತ್ವಕ್ಕೆ ಬಂತು. ಈಗ ಕೇರಳ ಮತ್ತು ಕರ್ನಾಟಕದಲ್ಲಿ ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ಎಂಬ ಹೆಸರಿನಲ್ಲಿ ಯುವಕರ ಸಂಘಟನೆ ಯಿದೆ. ಮಹಾರಾಷ್ಟ್ರ ಹಾಗೂ ಇತರ ಕೆಲವು ರಾಜ್ಯಗಳಲ್ಲಿ ಜಮಾಅತ್‍ನ ಯೂತ್‍ವಿಂಗ್‍ಗಳು ಕೆಲಸ ಮಾಡುತ್ತಿವೆ. ಭವಿಷ್ಯದಲ್ಲಿ ಅಗತ್ಯ ಕಂಡರೆ ರಾಷ್ಟ್ರೀಯ ಮಟ್ಟದಲ್ಲೂ ಯುವಕರ ಸಂಘಟನೆಯ ಬಗ್ಗೆ ಚಿಂತನೆ ನಡೆಸಬಹುದಾಗಿದೆ.

ಪ್ರಶ್ನೆ: ಭಾರತದ ಮುಸ್ಲಿಮರು ವಿವಿಧ ಸವಾಲು ಗಳನ್ನು ಎದುರಿಸುತ್ತಿz್ದÁರೆ. ಮಾತ್ರವಲ್ಲ, ಅವರ ಇರುವಿಕೆಯನ್ನೇ ಪ್ರಶ್ನಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಬದಲಾವಣೆಯನ್ನು ಹೇಗೆ ತರಲು ಸಾಧ್ಯ?

ಉತ್ತರ: ಇಂದು ಭಾರತದ ಮುಸ್ಲಿಮರು ಎದುರಿಸು ತ್ತಿರುವ ಅತಿದೊಡ್ಡ ಸವಾಲು ಸಂಘಪರಿವಾರದ ಫ್ಯಾಸಿಸಮ್ ಸಿದ್ಧಾಂತ ಎಂದು ನಾನು ಬಲವಾಗಿ ನಂಬಿz್ದÉೀನೆ. ಅವರು ಅಧಿಕಾರಕ್ಕೆ ಬಂದ ರಾಜ ಕೀಯ ಸನ್ನಿವೇಶಗಳಿಗೆ ಅದನ್ನು ತಳಕು ಹಾಕ ಬಾರದು. ಅದು ಬಹಳ ಆಳವಾಗಿ ಬೇರೂರಿದ ಸಾಮಾಜಿಕ ಸಮಸ್ಯೆಯಾಗಿದೆ. ನಮ್ಮ ಸಮಾಜವನ್ನು ಇಬ್ಭಾಗಗೊಳಿಸಲು ಅದಕ್ಕೆ ಸಾಧ್ಯವಾಗಿದೆ. ಹೊಸ ತಲೆಮಾರಿನಲ್ಲೂ ದ್ವೇಷವನ್ನು ತುಂಬಲು ಅವರಿಗೆ ಸಾಧ್ಯವಾಗಿದೆ. ಇಸ್ಲಾಮ್ ಮತ್ತು ಮುಸ್ಲಿಮರ ಬಗ್ಗೆ ಅ ಪಗ್ರಹಿಕೆಗಳನ್ನು ಹರಿಯಬಿಟ್ಟು ಅವರನ್ನು ದೇಶದ ಶತ್ರು ಸ್ಥಾನದಲ್ಲಿ ತಂದು ನಿಲ್ಲಿಸಿದ್ದಾರೆ. ಆದ್ದರಿಂದ ಈ ಫ್ಯಾಸಿಸಮನ್ನು ಎದುರಿಸುವುದೇ ಆದ್ಯತೆ ಎಂಬ ನೆಲೆಯಲ್ಲಿ ನಮ್ಮ ಮುಖ್ಯ ಸವಾಲಾಗಿದೆ. ಈ ಸವಾಲನ್ನು ತಳಮಟ್ಟದಿಂದಲೇ ಎದುರಿಸಲು ನಾವು ಶ್ರಮ ಪಡಬೇಕಾಗಿದೆ. ಪ್ರತಿಯೊಂದು ಪ್ರದೇಶದಲ್ಲಿ ವಿವಿಧ ಜನವಿಭಾಗಗಳ ಜನರ ಸಹಭಾಗಿತ್ವವಿರುವ ಒಕ್ಕೂಟಗಳ ರಚನೆ ಯಾಗಬೇಕು. ಅದರ ಮೂಲಕ ಸಂಘಪರಿವಾರ ಹರಡಲು ಪ್ರಯತ್ನಿಸುವ ದ್ವೇಷ ರಾಜಕಾರಣವನ್ನು ತಡೆಯಲು ಸಾಧ್ಯವಾಗಬೇಕು. ಇದಕ್ಕಾಗಿ ಸಣ್ಣ ಪ್ರಯತ್ನವನ್ನು ಕಳೆದ ಕಾರ್ಯಾವಧಿಯಲ್ಲಿ ಜಮಾಅತ್ ನಡೆಸಿದೆ.
ನಮ್ಮ ಆದ್ಯತೆ ಎಂಬ ನೆಲೆಯಲ್ಲಿ ಎರಡನೆಯ ದಾಗಿ, ನಾವು ಎದುರಿಸಬೇಕಾದ ಸವಾಲು ನಮ್ಮೊಳಗಿನ ಸಮಸ್ಯೆಗಳು ಎಂದು ನಾನು ಭಾವಿಸುತ್ತೇನೆ. ಅಂದರೆ, ಮುಸ್ಲಿಮರು ಹೆಚ್ಚಾಗಿ ತಮ್ಮನ್ನು ದುರ್ಬಲರು ಎಂದು ಭಾವಿಸಿಕೊಳ್ಳುತ್ತಾರೆ. ಈ ಮನೋಸ್ಥಿತಿ ಬದಲಾಗಬೇಕು. ಸರ್ವತೋ ಮುಖವಾದ ಸಬಲೀಕರಣ ನಡೆಯಬೇಕು. ಶಿP್ಷÀಣ, ಸಾಮಾಜಿಕ, ಆರ್ಥಿಕ, ಆಡಳಿತ ವ್ಯವಸ್ಥೆ, ರಾಜ ಕೀಯ ಇತ್ಯಾದಿ ರಂಗಗಳಲ್ಲಿ ಮುಸ್ಲಿಮರು ರಾಷ್ಟ್ರ ಮಟ್ಟದಲ್ಲಿ ಬಹಳಷ್ಟು ಹಿಂದುಳಿದಿz್ದÁರೆ. ಈ ಸಮಸ್ಯೆಗಳಿಗೆ ಪರಿಹಾರ ಮುಸ್ಲಿಮರ ಸಮಗ್ರ ಸಬಲೀಕರಣದಿಂದ ಮಾತ್ರ ಸಾಧ್ಯ. ಸರಕಾರ ವಾಗಲಿ, ಇನ್ನಿತರರಾಗಲಿ ಪ್ರಸಕ್ತ ಸನ್ನಿವೇಶದಲ್ಲಿ ಇದಕ್ಕಾಗಿ ವಿಶೇಷ ಕಾಳಜಿ ವಹಿಸಲು ಸಾಧ್ಯವಿಲ್ಲ. ಮತಬ್ಯಾಂಕ್‍ಗಳ ಆಧಾರದಲ್ಲಿ ಮಾತ್ರ ಇಂತಹ ಕೆಲಸಗಳು ನಡೆಯುತ್ತವೆ. ಮುಸ್ಲಿಮ್ ಸಮುದಾ ಯವೇ ಮುಂದೆ ಬಂದು ಅವರ ಸಬಲೀಕರಣ ಕ್ಕಾಗಿ ವಿಶಾಲವಾದ ಯೋಜನೆಗಳನ್ನು ರೂಪಿಸಿ ಕೊಂಡು ಕಾರ್ಯಪ್ರವೃತ್ತರಾಗಬೇಕು. ಅದಕ್ಕಾಗಿ ಸಾಮಾಜಿಕ ಒಕ್ಕೂಟಗಳು, ಎನ್.ಜಿ.ಓ.ಗಳು ಸಮುದಾಯ ಸಂಘಟನೆಗಳೆಲ್ಲ ಮುಂದಕ್ಕೆ ಬರ ಬೇಕು. ವಿವಿಧ ಯೋಜನೆಗಳನ್ನು ಎಲ್ಲರೂ ಸೇರಿಕೊಂಡು ನಿರ್ವಹಿಸಿದರೆ ಮಾತ್ರ ಸಣ್ಣ ಪ್ರಮಾಣದಲ್ಲಾದರೂ ಬದಲಾವಣೆಗಳನ್ನು ನಿರೀಕ್ಷಿಸಬಹುದು.

ಪ್ರಶ್ನೆ: ಇಸ್ಲಾಮೋಫೋಬಿಯ ಎಂಬುದು ಈಗ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಷಡ್ಯಂತ್ರ ವಾಗಿದೆ. ಆದರೆ ಹಲವು ರಾಷ್ಟ್ರಗಳಲ್ಲಿ ಅದರ ವಿರುದ್ಧ ಕ್ರಿಯಾತ್ಮಕ ಪ್ರತಿಕ್ರಿಯೆಗಳು ಕಾಣಬರುತ್ತಿವೆ. ಇತ್ತೀಚೆಗೆ ನ್ಯೂಝಿಲ್ಯಾಂಡ್‍ನಲ್ಲಿ ನಡೆದ ಘಟನೆಯ ವೇಳೆ ಅಲ್ಲಿಯ ಸರಕಾರ ಮತ್ತು ಜನತೆ ಒಟ್ಟಾಗಿ ಇಸ್ಲಾಮೋಫೋಬಿಯಾದ ಪ್ರಚಾರದ ವಿರುದ್ಧ ರಂಗಕ್ಕಿಳಿದು ಅದನ್ನು ಪ್ರತಿರೋಧಿಸಲು ಪ್ರಯತ್ನಿಸಿತು. ಹಲವು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕೂಡಾ ಇಂತಹ ಘಟನೆಗಳು ಸುದ್ದಿ ಮಾಡುತ್ತಿವೆ. ಆದರೆ ಸಾಮಾನ್ಯ ವಾಗಿ ನಮ್ಮಲ್ಲಿ ಇಂತಹ ಪ್ರತಿರೋಧಗಳು ಕಂಡು ಬರುತ್ತಿಲ್ಲ. ನೀವಿದನ್ನು ಹೇಗೆ ಕಾಣುತ್ತೀರಿ?

ಉತ್ತರ: ನಮ್ಮ ದೇಶದಲ್ಲೂ ಇಂತಹ ಪ್ರಯತ್ನಗಳು ನಡೆಯುತ್ತಿವೆ ಎಂಬುದು ನನ್ನ ಅನುಭವ. ಆದರೆ ಹಲವು ಬಾರಿ ಅಂತಹ ಪ್ರಯತ್ನಗಳನ್ನು ಇಲ್ಲಿಯ ಮಾಧ್ಯಮಗಳು ಗಮನಿಸುವುದಿಲ್ಲ. ಏಕೆಂದರೆ, ಕಳೆದ ಕೆಲವು ವರ್ಷಗಳಿಂದ ಮಾಧ್ಯಮಗಳನ್ನು ಕೋಮುವಾದಿ ಶಕ್ತಿಗಳು ನಿಯಂತ್ರಿಸುತ್ತಿವೆ. ಆದ್ದರಿಂದ ಅವರು ಇಂತಹ ಸುದ್ದಿಗಳಿಗೆ ಮಹತ್ವವನ್ನು ಕೊಡುವುದಿಲ್ಲ. ಆದರೆ ಬದಲಿ ಮಾಧ್ಯಮಗಳಾಗಿ ಕಾರ್ಯಾಚರಿಸುತ್ತಿರುವ ಸೋಶಿಯಲ್ ಮೀಡಿಯಾ ಇನ್ನಿತರ ಜಾಲತಾಣ ಗಳಲ್ಲಿ ಇಂತಹ ಪ್ರಯತ್ನಗಳನ್ನು ನಾವು ಕಾಣುತ್ತಿದ್ದೇವೆ. ವಿದ್ಯಾರ್ಥಿ ಸಂಘಗಳು, ಮಾನವ ಹಕ್ಕು ಹೋರಾಟಗಾರರು, ದಲಿತ-ಆದಿವಾಸಿ ಒಕ್ಕೂಟಗಳು ಮುಂತಾದ ಅನೇಕ ಮಂದಿ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದ್ವೇಷ ರಾಜಕಾರಣವನ್ನು ತಡೆಯಲು ಮತ್ತು ಅದರ ವಿರುದ್ಧ ಜನಜಾಗೃತಿಯನ್ನುಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ. ಸಮಾಜದಲ್ಲಿ ಪ್ರಜಾಪ್ರಭುತ್ವಕ್ಕೆ ಇಂಬು ನೀಡುವ ಧಾರಾಳ ಪ್ರಯತ್ನಗಳು ನಡೆ ಯುತ್ತಿವೆ. ಆದರೆ ಅವುಗಳನ್ನು ಜನರೆಡೆಗೆ ತಲುಪಿಸಲು ಮಾಧ್ಯಮಗಳಿಲ್ಲ ಎಂಬ ದೊಡ್ಡ ಕೊರತೆಯಿದೆ. ಇಸ್ಲಾಮೋಫೋಬಿಯಾದ ರಾಜ ಕೀಯ ಪ್ರಯೋಗಗಳನ್ನು ಪ್ರತಿರೋಧಿಸುವುದು ಮಾತ್ರವಲ್ಲ ನಮ್ಮ ಮುಖ್ಯ ಗುರಿ. ಇಂತಹ ವಿಷಯಗಳ ಸಾಮಾಜಿಕ ಪ್ರಯೋಗಗಳನ್ನು ಕೂಡಾ ನಾವು ಗಮನಿಸಬೇಕು. ಈಗ ನಡೆಯು ತ್ತಿರುವ ಚು ನಾವಣೆಯಲ್ಲಿ ಫ್ಯಾಸಿಸ್ಟ್ ಶಕ್ತಿಗಳು ಅಧಿಕಾರ ಕಳಕೊಂಡರೆ ನಮ್ಮ ದೌತ್ಯ ಮುಗಿಯಿತು ಎಂದು ನಾವು ಭಾವಿಸಬಾರದು. ಏಕೆಂದರೆ, ಅದರಿಂದ ಮಾತ್ರ ಫ್ಯಾಸಿಸ್ಟರು ಸಮಾಜದಲ್ಲಿ ಉಂಟು ಮಾಡಿದ ಧ್ರುವೀಕರಣ ಹಾಗೂ ಅಸಹಿಷ್ಣುತೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಅದು ಸಮಾಜದಲ್ಲಿ ಆಳವಾದ ಗಾಯಗಳನ್ನು ನಿರ್ಮಿಸಿವೆ. ಅಂತಹ ಗಾಯಗಳನ್ನು ಒಣಗಿಸುವ ಮತ್ತು ಫ್ಯಾಸಿಸಮ್‍ನ ಎಲ್ಲ ಕಪಿಮುಷ್ಠಿಗಳಿಂದ ಸಮಾಜವನ್ನು ಸಂರಕ್ಷಿಸುವ ಪ್ರಯತ್ನಗಳು ನಡೆದರೆ ಮಾತ್ರ ಫ್ಯಾಸಿಸ್ಟ್ ವಿರುದ್ಧ ಹೋರಾಟ ಅರ್ಥ ಪೂರ್ಣವಾಗಬಹುದು.

ಪ್ರಶ್ನೆ: ದಲಿತ-ಆದಿವಾಸಿ ವಿಭಾಗಗಳ ಒಕ್ಕೂಟಗಳ ಬಗ್ಗೆ ನೀವು ಪ್ರಸ್ತಾಪಿಸಿದ್ದೀರಿ. ದೇಶದ ಸಾಮೂಹಿಕ ವ್ಯವಸ್ಥೆಯಲ್ಲಿ ಜಾತಿಗಳಿಗೆ ಪ್ರಮುಖ ಸ್ಥಾನವಿದೆ. ಜಾತಿ ವ್ಯವಸ್ಥೆಯ ಸವಾಲುಗಳನ್ನು ಸೂP್ಷÀ್ಮವಾಗಿ ಅರ್ಥೈಸಿಕೊಳ್ಳುವಲ್ಲಿ ಜಮಾಅತ್ ಎಡವಿದೆ ಎಂಬ ಆಕ್ಷೇ ಪವಿದೆ. ನಿಮ್ಮ ಅಭಿಪ್ರಾಯ?

ಉತ್ತರ: ಜಮಾಅತ್ ಜಾತಿ ವ್ಯವಸ್ಥೆಯ ಸವಾಲು ಗಳನ್ನು ಕಡೆಗಣಿಸಿದೆ ಎಂಬುದು ತಪ್ಪು. ಹಲವು ರೀತಿಯಲ್ಲಿ ಅದು ಅದನ್ನು ಎದುರಿಸಿದೆ. ಮಾನವ ಸಮಾನತೆಯೇ ಇಸ್ಲಾಮಿನ ಮೂಲಭೂತವಾದ. ಇದರ ಆಧಾರದಲ್ಲಿ ನಾವು ವಿವಿಧ ಜನವಿಭಾಗಗ ಳೊಂದಿಗೆ ಸಂವಾದ ನಡೆಸಬೇಕು. ದಲಿತ-ಆದಿವಾಸಿ ಒಕ್ಕೂಟಗಳೊಂದಿಗೆ ಈ ನಿಟ್ಟಿನಲ್ಲಿ ನಾವು ಹೆಚ್ಚು ನಿಕಟರಾಗಿ ಅವರಿಗೆ ಬೆಂಬಲವನ್ನು ಘೋಷಿಸಬೇಕು.

ಇಸ್ಲಾಮ್ ಮಾನವಕುಲದ ಏಕತೆಗೆ ಮಹತ್ವ ನೀಡುವ ಧರ್ಮವಾಗಿದೆ. ಮನುಷ್ಯರ ಮಧ್ಯೆ ಅಸಮಾನತೆ ಮತ್ತು ಒಡಕನ್ನು ಉಂಟು ಮಾಡುವ ಎಲ್ಲ ರೀತಿಯ ಆಶಯಗಳನ್ನು ಅದು ನಿರಾಕರಿ ಸುತ್ತದೆ. ಬ್ರಾಹ್ಮಣ್ಯದ ಜಾತಿ ವ್ಯವಸ್ಥೆಯಲ್ಲಿರುವ ಎಲ್ಲ ವಿಭಜನೆಗಳನ್ನು ಅದು ಖಂಡಿಸುತ್ತದೆ. ಹುಟ್ಟು, ವರ್ಣ ಮತ್ತು ವಂಶದ ಹೆಸರಿನಲ್ಲಿ ಯಾರೂ ಕೂಡಾ ಅನ್ಯಾಯ ಅಕ್ರಮಗಳಿಗೆ ಒಳಗಾಗಬಾರದು ಎಂಬುದು ಅದು ಮುಂದಿಡುವ ಸತ್ಯ. ಈ ಸಮಾನತೆಯ ಧೋರಣೆಯನ್ನು ಅವಲಂಬಿಸಿಯೇ ಜಮಾಅತ್ ಇವರೊಂದಿಗೆ ವ್ಯವಹರಿಸುತ್ತದೆ. ಆದ್ದರಿಂದ ಜಮಾಅತ್ ಜಾತಿ ವ್ಯವಸ್ಥೆಯ ಸವಾಲುಗಳನ್ನು ಎದುರಿಸುವಲ್ಲಿ ವಿಶೇಷ ಗಮನಕೊಡುತ್ತಿಲ್ಲ ಎಂಬ ಆಕ್ಷೇಪಗಳಿಗೆ ಕಾರಣವಾಗಿದೆ. ಸಾರ್ವಜನಿಕವಾಗಿ ವಿವಿಧ ಜನವಿಭಾಗಗಳ ಒಕ್ಕೂಟಗಳೊಂದಿಗೆ ಸಹಕರಿಸಿಕೊಂಡು ನಾವು ಕೆಲಸ ಮಾಡುತ್ತೇವೆ. ಒಳಿತಿನಲ್ಲಿ ಸಹಕಾರ, ಕೆಡುಕಿನಲ್ಲಿ ಅಸಹಕಾರ ಇದು ನಮ್ಮ ಧ್ಯೇಯವಾಕ್ಯ. ದಲಿತರ ಹಾಗೂ ಇನ್ನಿತರ ವಿಭಾಗಗಳೊಂದಿಗೆ ನಾವು ಸಹಕರಿಸುವುದು ಮತ್ತು ಜತೆ ಸೇರಿ ಕೆಲಸ ಮಾಡುವುದು ಇದರ ಆಧಾರದಲ್ಲಾಗಿದೆ.

ಪ್ರಶ್ನೆ: ತುಳಿತಕ್ಕೊಳಪಟ್ಟವರ ಸಮಸ್ಯೆಯೊಂದಿಗೆ ಜಾತಿ ವ್ಯವಸ್ಥೆಯ ಸವಾಲುಗಳು ಉದ್ಭವಿಸಲು ಕಾರಣ?

ಉತ್ತರ: ಕಾರಣವಿದೆ. ಅದುವೇ ನಮ್ಮ ನಿಲುವಿನ ಮರ್ಮ ಕೂಡಾ ಆಗಿದೆ. ತುಳಿತವೆಂಬ ಪ್ರವೃತ್ತಿಯ ವಿರುದ್ಧವೇ ನಮ್ಮ ಹೋರಾಟ. ಅದರ ವಿರುದ್ಧ ನಾವು ತೀವ್ರವಾಗಿ ಪ್ರತಿಭಟಿಸುತ್ತೇವೆ. ಅದರ ಆಧಾರದಲ್ಲಿ ಮೂಲೆಗುಂಪಾಗಿಸುವ ವ್ಯಕ್ತಿ ಮತ್ತು ಶಕ್ತಿಗಳ ವಿರುದ್ಧ ಕೂಡಾ ನಾವು ಹೋರಾಡುತ್ತೇವೆ. ಆದರೆ, ಸಣ್ಣ ವಿಭಾಗವೊಂದು ಮಾಡುವ ಅನ್ಯಾಯಕ್ಕೆ ಪ್ರತೀಕಾರವಾಗಿ ಒಂದು ಜನ ವಿಭಾಗವನ್ನೇ ಪೈಶಾಚಿಕ ಕೃತ್ಯಗಳಿಗೆ ಹೊಣೆಯನ್ನಾಗಿಸುವುದನ್ನು ನಾವು ಸಮರ್ಥಿಸುವುದಿಲ್ಲ. ಒಂದು ವಿಭಾಗದ ಜನರ ಅಕ್ರಮವನ್ನು ಪ್ರಶ್ನಿಸುವಾಗ ಅದು ಆ ವಿಭಾಗದ ಜನರ ಮೇಲಿನ ದ್ವೇಷವಾಗಿ ಪರಿಣಮಿಸ ಬಾರದು ಎಂದು ಜಮಾಅತ್ ಎಚ್ಚರಿಕೆ ವಹಿಸುತ್ತದೆ.

ಪ್ರಶ್ನೆ: ಮುಸ್ಲಿಮರ ಮಧ್ಯೆ ಕೂಡಾ ಜಾತಿ ವ್ಯವ ಸ್ಥೆಯ ಪ್ರಭಾವ ಬೀರಿದಂತೆ ಕಾಣುತ್ತದೆ. ಜಮಾಅತ್ ಅದನ್ನು ಹೇಗೆ ಸಂಭಾಳಿಸುತ್ತದೆ?

ಉತ್ತರ: ಸಾಮಾನ್ಯವಾಗಿ ಜಮಾಅತ್‍ನ ಧೋರಣೆ ಯಲ್ಲಿ ಇಂತಹ ವಿಷಯಗಳನ್ನು ಸೇರಿಸಿಕೊಳ್ಳಲಾಗು ತ್ತದೆ. ಅದರ ಪ್ರಮುಖ ಚಟುವಟಿಕೆಗಳಲ್ಲೊಂದು ಮುಸ್ಲಿಮರ ಸಂಸ್ಕರಣೆಯಾಗಿದೆ. ಮುಸ್ಲಿಮರು ಯಾವೆಲ್ಲ ರಂಗಗಳಲ್ಲಿ ಇಸ್ಲಾಮೀ ಶಿಕ್ಷಣಗಳಿಂದ ದೂರವುಳಿದಿದ್ದಾರೋ ಅವರನ್ನು ಪುನಃ ನೈಜ ಇಸ್ಲಾಮೀ ಶಿP್ಷÀಣದೆಡೆಗೆ ಕರೆತರುವುದು ಜಮಾ ಅತ್‍ನ ಸಂಸ್ಕರಣೆಯ ಮುಖ್ಯ ಉದ್ದೇಶ. ಮುಸ್ಲಿಮರ ಮಧ್ಯೆಯಿರುವ ಇಂತಹ ಭಿನ್ನತೆ ಮತ್ತು ಒಡಕುಗಳನ್ನು ಸರಿಪಡಿಸಲು ಮುಂದೆಯೂ ಜಮಾಅತ್ ಶಕ್ತಿ ಮೀರಿ ಶ್ರಮಿಸಲಿದೆ. ಈಗಾಗಲೇ ಜಮಾಅತ್‍ನ ಚಟುವಟಿಕೆಗಳು ಸಕ್ರಿಯವಾಗಿರುವ ಪ್ರದೇಶಗಳಲ್ಲಿ ಇಂತಹ ತಾರತಮ್ಯಗಳನ್ನು ನೀಗಿಸಲು ಸಾಧ್ಯವಾಗುತ್ತಿದೆ.

ಪ್ರಶ್ನೆ: ಫ್ಯಾಸಿಸಮ್‍ನ ವಕ್ತಾರರು ಇದೀಗ ದೇಶದ ಇತಿಹಾಸಗಳ ಪುಟಗಳಿಂದ ಮುಸ್ಲಿಮರ ಸ್ಥಾನವನ್ನು ನಿರ್ನಾಮಗೊಳಿಸುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ದೇಶದ ಇತಿಹಾಸದಲ್ಲಿ ಮುಸ್ಲಿಮರು ಕೇವಲ ವಿಲನ್‍ಗಳ ಪಾತ್ರ ಮಾತ್ರ ವಹಿಸಿದವರು ಎಂಬ ರೀತಿಯಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಇತಿಹಾಸವನ್ನು ಈ ರೀತಿಯಲ್ಲಿ ತಿರುಚಲು ಪ್ರಯತ್ನಿಸುತ್ತಿರುವಾಗ ನಮಗೇನು ಮಾಡಲು ಸಾಧ್ಯ?

ಉತ್ತರ: ಇತಿಹಾಸದಲ್ಲಿ ಹಲವು ರೀತಿಯ ಹಸ್ತಕ್ಷೇಪಗಳು ನಡೆದಿವೆ ಎಂಬುದು ಸತ್ಯ. ಮುಸ್ಲಿಮ್ ಆಡಳಿತಗಾರರನ್ನು ಹಾಗೂ ಧರ್ಮ ಪ್ರಚಾರಕರನ್ನು ನಮ್ಮ ದೇಶದ ಸಂಸ್ಕøತಿಯ ವಿರುದ್ಧ ಬಂಡೆದ್ದವರೆಂದು ಚಿತ್ರೀಕರಿಸುವುದು, ಮುಸ್ಲಿಮರು ಮತ್ತು ಮುಸ್ಲಿಮ್ ಆಡಳಿತ ದೇಶಕ್ಕೆ ನೀಡಿದ ಕೊಡುಗೆಗಳನ್ನು ಮರೆಮಾಚುವುದು ಇವೆಲ್ಲ ಇಲ್ಲಿ ನಡೆಯುತ್ತಿದೆ. ಇವೆಲ್ಲವೂ ಇತಿಹಾಸದ ಮೇಲೆ ನಡೆಸುವ ಹಸ್ತಕ್ಷೇಪಗಳಾಗಿವೆ. ಆದ್ದರಿಂದ ಭಾರತದ ನೈಜ ಇತಿಹಾಸವನ್ನು ಹೊರತರಲು ನಮಗೆ ಸಾಧ್ಯವಾಗಬೇಕು. ಇಂತಹ ಪ್ರಯತ್ನಗಳು ಈಗಲೂ ನಡೆಯುತ್ತಿವೆ. ದೇಶದ ಇತಿಹಾಸ ಕಾರರನ್ನು ಮುನ್ನೆಲೆಗೆ ತರುವುದರೊಂದಿಗೆ ನಮ್ಮ ಪರಿಶ್ರಮಗಳ ಮೂಲಕ ಮುಸ್ಲಿಮರ ಕೊಡುಗೆ ಗಳನ್ನು ಅನಾವರಣಗೊಳಿಸಲು ನಮಗೆ ಸಾಧ್ಯವಾಗ ಬೇಕು. ಮುಸ್ಲಿಮರು ಸಾಮಾಜಿಕ, ಆರ್ಥಿಕ, ನಾಗರಿಕ, ಸಾಂಸ್ಕøತಿಕ ಹಾಗೂ ಧಾರ್ಮಿಕ ಕ್ಷೇತ್ರ ಗಳಲ್ಲಿ ದೇಶಕ್ಕೆ ನೀಡಿದ ಕೊಡುಗೆಗಳ ಬಗ್ಗೆ ತಿಳಿಯಪಡಿಸುವ ವಿಸ್ತೃತ ಅಧ್ಯಯನಗಳು ನಡೆಯಬೇಕಾಗಿದೆ.

ಪ್ರಶ್ನೆ: ಭಾರತದ ಮುಸ್ಲಿಮರು ಅನುಭವಿಸುತ್ತಿರುವ ಬಹಳ ದೊಡ್ಡ ಸವಾಲು ಅವರಿಗೆ ಸರಿಯಾದ ನಾಯಕತ್ವವಿಲ್ಲವೆನ್ನುವುದಾಗಿದೆ. ನಾಯಕತ್ವ ಗುಣವಿರು ವವರನ್ನು ಬೆಳೆಸುವ ಪ್ರಯತ್ನ ನಡೆಯಬೇಕಲ್ಲವೇ?

ಉತ್ತರ: ಮುಸ್ಲಿಮ್ ಸಮುದಾಯ ಪ್ರಮುಖವಾಗಿ ಪರಿಗಣಿಸಲೇಬೇಕಾದ ಒಂದು ಕ್ಷೇತ್ರವಾಗಿದೆ ನಾಯಕರನ್ನು ಬೆಳೆಸುವುದು ಮತ್ತು ಅವರಿಗೆ ತರಬೇತಿ ನೀಡುವುದು. ಪ್ರಥಮವಾಗಿ ನಾಯಕತ್ವದ ವಿಷಯದಲ್ಲಿ ಯುವಕರಿಗೆ ಮಹತ್ವ ನೀಡಬೇಕು ಎಂಬುದು ನನ್ನ ಅನಿಸಿಕೆ. ಸಮೂಹದಲ್ಲಿ ಅವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಕೂಡಾ. ಆದ್ದರಿಂದ ನಾಯಕತ್ವ ಗುಣವಿರುವ ಯುವಕರಿಗೆ ಮಾತ್ರ ಸಮಾಜವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಲು ಸಾಧ್ಯ. ಯುವಕರನ್ನು ನಾಯಕರಾಗಿ ಒಪ್ಪಿಕೊಳ್ಳುವ ಮ ನೋಸ್ಥಿತಿಯೆಡೆಗೆ ಸಮುದಾಯ ಬೆಳೆದು ಬರಬೇಕು. ವೈಜ್ಞಾನಿಕ ರೀತಿಯ ನಾಯಕತ್ವ ತರಬೇತಿ ಯನ್ನು ನಾವು ಪಡೆಯಬೇಕು. ಬೌದ್ಧಿಕವಾಗಿ ನೇತೃತ್ವವನ್ನು ಕೊಡಲು ಅರ್ಹತೆಯುಳ್ಳ ಥಿಂಕ್ ಟಾಂಕ್‍ಗಳನ್ನು ನಾವು ಬೆಳೆಸಬೇಕು. ಅದಕ್ಕೆ ನಾವು ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಬೇಕು. ಇಂದು ಸಮುದಾಯದ ನಾಯಕರು ಹೆಚ್ಚಾಗಿ ಗುರುತಿಸಲ್ಪಡುವುದು ಅವರದ್ದೇ ಆದ ವೈಯಕ್ತಿಕ ವರ್ಚಸ್ಸಿನಿಂದ ಮಾತ್ರ. ಅವರು ತೀರ್ಮಾನಗಳನ್ನು ಕೈಗೊಂಡು ಆಜ್ಞಾಪಿಸುತ್ತಾರೆ. ಅನುಯಾಯಿ ವೃಂದ ಅದನ್ನು ಪಾಲಿಸುತ್ತದೆ. ಆದರೆ ಮೇಲಿನಿಂದ ಆಜ್ಞಾಪಿಸುವ ಇಂತಹ ಲೀಡರ್‍ಶಿಪ್‍ನ ಕಾಲ ಕಳೆದು ಹೋಗಿದೆ. ಇನ್ನು ಜನರೊಂದಿಗೆ ಬೆರೆತು ಅವರನ್ನು ಮುನ್ನಡೆಸುವವರು ಬೇಕಾಗಿದ್ದಾರೆ. ಅದಕ್ಕೆ ಬೇಕಾದ ವೈಜ್ಞಾನಿಕ ರೀತಿಯ ತರಬೇತಿ ವಿಧಾನಗಳನ್ನು ಸಮುದಾಯ ಅಳವಡಿಸ ಬೇಕೆಂಬುದು ನನ್ನ ಅಭಿಮತ.

ಪ್ರಶ್ನೆ: ಆರಂಭ ಕಾಲದಲ್ಲಿ ಜಮಾಅತನ್ನು ವಿದ್ವಾಂಸರು, ದಾರ್ಶನಿಕರು ಸೇರಿಕೊಂಡು ಮುನ್ನಡೆಸಿ ದರು. ನಂತರ ಇಂತಹ ದಾರ್ಶನಿಕ ವ್ಯಕ್ತಿಗಳನ್ನು ಬೆಳೆಸುವಲ್ಲಿ ಅದಕ್ಕೆ ಸಾಧ್ಯವಾಗಲಿಲ್ಲ ಎಂದು ಹೇಳುವವರಿದ್ದಾರೆ. ಜಾಗತಿಕ ಮಟ್ಟದಲ್ಲಿ ಈಗಲೂ ಇಂತಹ ದಾರ್ಶನಿಕ ನಾಯಕರು ಬೆಳೆದು ಬರುತ್ತಿ ರುವಾಗ ನಮ್ಮಲ್ಲಿ ಆ ಕೊರತೆ ಎದ್ದು ಕಾಣುತ್ತಿದೆ. ಒಂದುವೇಳೆ, ಅಪವಾದವಿದ್ದರೂ ಅವರು ಜನ ಮನ್ನಣೆ ಪಡೆಯುವಲ್ಲಿ ವಿಫಲರಾಗುತ್ತಾರೆ ಎಂಬ ಆಕ್ಷೇಪವಿದೆ. ಈ ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದು?

ಉತ್ತರ: ಸಮಸ್ಯೆ ಮತ್ತು ಸವಾಲುಗಳು ನಾಯಕರಿಗೆ ಜನ್ಮ ನೀಡುತ್ತವೆ ಎಂಬುದು ಒಂದು ಪ್ರಾಕೃತಿಕ ಸತ್ಯ. ನೈಸರ್ಗಿಕವಾಗಿ ನಾಯಕತ್ವ ಗುಣ ಹೊಂದಿದವರು ಸವಾಲುಗಳನ್ನು ಎದುರಿಸಿ ಮುಂದೆ ಬರುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಸಮುದಾಯ ಈಗ ಬಹಳ ದೊಡ್ಡ ಸಮಸ್ಯೆಗಳನ್ನು ಮತ್ತು ಸವಾಲುಗಳನ್ನು ಎದುರಿಸುತ್ತಿದೆ. ಆದ್ದರಿಂದ ಸ್ವಾಭಾವಿಕವಾಗಿಯೂ ಪ್ರಸ್ತುತ ಸನ್ನಿವೇಶದಲ್ಲಿ ಕೆಲವು ಮಂದಿ ನಾಯಕರು ಹುಟ್ಟಿ ಬರಬಹುದೆಂದು ನಿರೀಕ್ಷಿಸುವುದರಲ್ಲಿ ತಪ್ಪಿಲ್ಲ.
ಆದರೆ ನಮಗೆ ಈ ರೀತಿಯಲ್ಲಿ ಸ್ವಾಭಾವಿಕ ವಾಗಿ ಜನ್ಮ ತಾಳುವ ನಾಯಕರಿಗಾಗಿ ಕಾಯಲು ಸಮಯವಿಲ್ಲ. ಬದಲಾಗಿ ಇರುವ ನಾಯಕರನ್ನು ಉತ್ತಮ ರೀತಿಯಲ್ಲಿ ತರಬೇತಿಗೊಳಿಸಲು ನಾವು ಪ್ರಯತ್ನಿಸಬೇಕಾಗಿದೆ. ಜನರನ್ನು ಮುನ್ನಡೆಸಲು, ಅವರೊಂದಿಗೆ ವಿಚಾರ ವಿನಿಮಯ ನಡೆಸಲು, ಅವರನ್ನು ಸಂಘಟಿಸಲು ಸಾಧ್ಯವಾಗುವ ರೀತಿಯಲ್ಲಿ ಅವರಿಗೆ ನಿರಂತರವಾಗಿ ತರಬೇತಿಯನ್ನು ನೀಡುತ್ತಿರಬೇಕು. ಅದಕ್ಕೆ ಬೇಕಾದ ಸರಿಯಾದ ಉಪಾಯ ಮತ್ತು ಕಾರ್ಯ ಯೋಜನೆ ನಮ್ಮಲ್ಲಿರಬೇಕು.
ಸ್ವಾತಂತ್ರ್ಯಾನಂತರ ಮುಸ್ಲಿಮ್ ಸಮುದಾಯ ಶೈಕ್ಷಣಿಕ ಹಾಗೂ ಇನ್ನಿತರ ರಂಗಗಳಲ್ಲಿ ಬಹಳಷ್ಟು ಹಿಂದಕ್ಕೆ ತಳ್ಳಲ್ಪಟ್ಟಿತ್ತು. ಕಳೆದ ದಶಕಗಳಿಂದೀಚೆಗೆ ಶೈಕ್ಷಣಿಕ ಮಟ್ಟ ಚೇತರಿಸಿಕೊಂಡಾಗ ಶಕ್ತಿ-ಸಾಮಥ್ರ್ಯವಿರುವವರೆಲ್ಲ ವೈದ್ಯಕೀಯ ಹಾಗೂ ಇಂಜಿ ನಿಯರಿಂಗ್‍ನಂತಹ ಉದ್ಯೋಗ ಕೇಂದ್ರೀಕೃತ ಶಿಕ್ಷಣದೆಡೆಗೆ ವಾಲಿಕೊಂಡರು. ಮುಸ್ಲಿಮರ ಪ್ರಸಕ್ತ ಪರಿಸ್ಥಿತಿಯಲ್ಲಿ ಇದೊಂದು ಅಗತ್ಯ ಕೂಡ ಆಗಿತ್ತು. ಯಾಕೆಂದರೆ, ಆರ್ಥಿಕ ಸಬಲೀಕರಣವೆನ್ನುವುದು ಮೂಲಭೂತ ವಿಷಯವಾಗಿದೆ. ಆದರೆ ಪ್ರಸ್ತುತ ನಡವಳಿಕೆ, ಸಾಮಾಜಿಕ, ವಿಜ್ಞಾನ ಕ್ಷೇತ್ರಗಳಲ್ಲಿ ಮುಸ್ಲಿಮರ ಉಪಸ್ಥಿತಿಯನ್ನು ಕುಂಠಿತಗೊಳಿಸಿತು. ಆದ್ದರಿಂದ ಮಾನವ ವಿಜ್ಞಾನ ಹಾಗೂ ಸಮಾಜ ವಿಜ್ಞಾನಗಳನ್ನು ಬಲ್ಲ ನಾಯಕರು ಕಡಿಮೆಯಾದರು. ಈ ಸಮಸ್ಯೆಯನ್ನು ಕೂಡಾ ನಮಗೆ ಬಗೆಹರಿಸಬೇಕಾಗಿದೆ. ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲೂ ಜಮಾಅತ್ ಕೆಲವು ವರ್ಷಗಳಿಂದ ವಿಶೇಷ ಗಮನ ಹರಿಸುತ್ತಿದೆ. ಮಾನವ ಸಂಪನ್ಮೂಲಗಳನ್ನು ಬೆಳೆಸಲು ವಿವಿಧ ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡಿದೆ. ಜಮಾಅತ್ ಕೇಂದ್ರದಲ್ಲಿ ಅದಕ್ಕಾಗಿ ಪ್ರತ್ಯೇಕ ಅಕಾಡಮಿ ಹಾಗೂ ಕೇರಳದ ಶಾಂತಪುರಮ್‍ನಲ್ಲಿ ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಈ ರಂಗಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ಇನ್ನಿತರ ಸಹಾಯವನ್ನು ಒದಗಿಸಲು ಜಮಾಅತ್ ಪ್ರಯತ್ನಿಸುತ್ತಿದೆ.

ಪ್ರಶ್ನೆ: ಮಾಧ್ಯಮಗಳ ಮಹತ್ವದ ಬಗ್ಗೆ ನೀವು ಸೂಚಿಸಿದ್ದೀರಿ. ರಾಷ್ಟ್ರೀಯ ಮಟ್ಟದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಏನಾದರೂ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆಯೇ?

ಉತ್ತರ: ವಾರ್ತಾ ವಿನಿಮಯ ರಂಗಗಳಲ್ಲಿ ನಮಗೆ ನಿರ್ವಹಿಸಲು ಸಾಧ್ಯವಿರುವ ವಿಷಯಗಳ ಬಗ್ಗೆ ವಿವಿಧ ಸ್ತರಗಳಲ್ಲಿ ಚಿಂತನೆಗಳು, ಚರ್ಚೆಗಳು ನಡೆಯುತ್ತಿವೆ. ಇಂತಹ ಚರ್ಚೆಗಳ ಮುಖಾಂತರ ಬಹಳಷ್ಟು ವಿಶಾಲವಾದ ಒಂದು ವ್ಯವಸ್ಥೆಯನ್ನು ತರಲು ಸಾಧ್ಯವಾಗಬಹುದೆಂದು ನಿರೀಕ್ಷಿಸೋಣ.

ಪ್ರಶ್ನೆ: ವೆಲ್ಫೇರ್ ಪಾರ್ಟಿಯಂತಹ ನೂತನ ರಾಜಕೀಯ ಪಕ್ಷದ ಕಾರ್ಯಚಟುವಟಿಕೆ ಹಾಗೂ ಅದು ಸಾಗುವ ದಾರಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಉತ್ತರ: ವೆಲ್ಫೇರ್ ಪಾರ್ಟಿ ಒಂದು ಸ್ವತಂತ್ರ ರಾಜಕೀಯ ಪಕ್ಷವಾಗಿದೆ. ಎಲ್ಲ ವಿಷಯಗಳಲ್ಲೂ ಅದಕ್ಕೆ ತನ್ನದೇ ಆದ ಅಭಿಪ್ರಾಯ ಮತ್ತು ನಿಲುವುಗಳಿವೆ. ಜಮಾಅತ್ ಸಂಗಾತಿಗಳಿಗೆ ಅದ ರಲ್ಲಿ ಸೇರಿಕೊಂಡು ಕೆಲಸ ಮಾಡಲು ಜಮಾಅತ್ ಈಗಾಗಲೇ ಅ ನುಮತಿ ನೀಡಿದೆ. ಉನ್ನತ ಮೌಲ್ಯಗಳಿಗೆ ಪ್ರೋತ್ಸಾಹ ನೀಡುವ ರಾಜಕೀಯ ವ್ಯವಸ್ಥೆಯನ್ನು ವೆಲ್ಫೇರ್ ಪಾರ್ಟಿ ಪ್ರತಿನಿಧಿಸುತ್ತದೆ. ಜಮಾಅತ್ ಕೂಡಾ ಅದನ್ನೇ ಬಯಸುತ್ತದೆ. ಆದ್ದರಿಂದಲೇ ಜಮಾಅತ್ ಅದಕ್ಕೆ ಬೆಂಬಲವನ್ನು ನೀಡುತ್ತದೆ. ಆದರೆ ಸಾಮಾಜಿಕ ವಿಷಯಗಳಲ್ಲಿ ಹಸ್ತಕ್ಷೇಪ ನಡೆಸುವ ಆಂದೋಲನ ಎಂಬ ನೆಲೆಯಲ್ಲಿ ಜಮಾಅತ್‍ಗೂ ರಾಜಕೀಯ ದಲ್ಲಿ ತನ್ನದೇ ಆದ ನಿಲುವುಗಳಿರುತ್ತವೆ. ಅದು ಈತನಕ ವ್ಯವಹರಿಸಿದ ರೀತಿಯ¯್ಲÉೀ ಮುಂದೆಯೂ ತನ್ನ ನಿಲುವುಗಳನ್ನು ಬಹಿರಂಗಪಡಿಸುತ್ತದೆ. ರಾಜಕೀಯ ರಂಗದಲ್ಲಿ ಜನತೆಗೆ ಪ್ರಯೋಜನಕಾರಿ ಯಾದ ಮೌಲ್ಯಗಳನ್ನು ಜಮಾಅತ್ ಯಾವತ್ತೂ ಪ್ರೋತ್ಸಾಹಿಸುತ್ತದೆ ಮತ್ತು ಬೆಂಬಲಿಸುತ್ತದೆ.

ಪ್ರಶ್ನೆ: ಇದು ಚುನಾವಣೆಯ ಕಾಲ. ಈ ಚುನಾವಣೆಯಲ್ಲಿ ಫ್ಯಾಸಿಸ್ಟ್ ಶಕ್ತಿಗಳನ್ನು ಅಧಿಕಾರ ದಿಂದ ಹೊರಗಿಡಲು ಜಮಾಅತ್ ಯಾವೆಲ್ಲ ಕಾರ್ಯತಂತ್ರಗಳನ್ನು ಪ್ರಯೋಗಿಸಿದೆ?

ಉತ್ತರ: ಫ್ಯಾಸಿಸ್ಟ್ ಶಕ್ತಿಗಳನ್ನು ಅಧಿಕಾರದಿಂದ ಕಿತ್ತೊಗೆಯಲು ತನ್ನಿಂದ ಸಾಧ್ಯವಾದ ಹಲವಾರು ಕಾರ್ಯತಂತ್ರಗಳನ್ನು ರೂಪಿಸಿ ಜಾರಿಗೆ ತಂದಿದೆ. ಅದರಲ್ಲಿ ಪ್ರಮುಖವಾದದ್ದು, ಜಾತ್ಯತೀತ ಶಕ್ತಿಗಳನ್ನು ಒಗ್ಗೂಡಿಸುವ ಮತ್ತು ಬಲಪಡಿಸುವ ಕಾರ್ಯ ವಾಗಿದೆ. ಮುಸ್ಲಿಮರನ್ನು ಹಾಗೂ ಹಿಂದುಳಿದ ವರ್ಗದವರನ್ನು ಚುನಾವಣಾ ಪ್ರಕ್ರಿಯೆಗಳಲ್ಲಿ ಗರಿಷ್ಠವಾಗಿ ಭಾಗವಹಿಸುವಂತೆ ಪ್ರಯತ್ನ ನಡೆಸಲಾಗಿದೆ. ವೋಟರ್ ಲಿಸ್ಟ್‍ನಿಂದ ಧಾರಾಳ ಸಂಖ್ಯೆಯಲ್ಲಿ ಹೆಸರು ಕಾಣೆಯಾದವರ ಹೆಸರುಗಳನ್ನು ಸೇರ್ಪಡೆಗೊಳಿಸಲು ಜಮಾಅತ್ ಪ್ರವರ್ತಕರು ವಿವಿಧ ರಾಜ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ದೇಶದ ಹಾಗೂ ಜನತೆಯ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿ ನಲ್ಲಿ ವಿವಿಧ ರಾಜಕೀಯ ಪಕ್ಷಗಳೊಂದಿಗೆ ವಿಚಾರ ವಿನಿಮಯಗಳನ್ನು ನಡೆಸಲಾಗಿದೆ. ಅದರ ಅಂಗವಾಗಿ ಅಧ್ಯಯನ ನಡೆಸಿ ಹಲವಾರು ಬೇಡಿಕೆಗಳನ್ನು ಒಳಗೊಂಡ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಸಾಮಾಜಿಕ, ಆರ್ಥಿಕ, ಸಾಂಸ್ಕøತಿಕ ಹಾಗೂ ಇನ್ನಿತರ ಕ್ಷೇತ್ರಗಳ ಸಮಸ್ಯೆಗಳನ್ನು ಮುಖ್ಯವಾಗಿ ಅದರಲ್ಲಿ ಗುರುತಿಸಲಾಗಿತ್ತು. ಅದನ್ನು ಎಲ್ಲ ರಾಜಕೀಯ ಪಕ್ಷಗಳಿಗೆ ತಲುಪಿಸುವುದರೊಂದಿಗೆ ತಮ್ಮ ಪ್ರಣಾಳಿಕೆಗಳಲ್ಲಿ ಅದನ್ನು ಸೇರಿಸಿಕೊಳ್ಳುವಂತೆ ಪ್ರಯತ್ನಿಸಲಾಯಿತು. ಈಗಲೂ ಕೂಡಾ ವಿವಿಧ ಪಕ್ಷಗಳೊಂದಿಗೆ ವಿಚಾರ ವಿನಿಮಯಗಳು ನಡೆಯುತ್ತಿವೆ. ಚುನಾವಣೆಯ ನಂತರವೂ ನಮ್ಮ ಬೇಡಿಕೆಗಳ ಆಧಾರದಲ್ಲಿ ಚರ್ಚೆಗಳನ್ನು ಮುಂದುವರಿಸಲಾಗುವುದು.

ಪ್ರಶ್ನೆ: ನಿಮಗೆ ಹೊಣೆಗಾರಿಕೆಯನ್ನು ನೀಡಲ್ಪಟ್ಟ ಪ್ರಸ್ತುತ ಕಾರ್ಯಾವಧಿಯಲ್ಲಿ ಜಮಾಅತ್‍ನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಯಾವೆಲ್ಲ ಯೋಜನೆಗಳನ್ನು ರೂಪಿಸಿಕೊಂಡಿದ್ದೀರಿ?

ಉತ್ತರ: ವಿಸ್ತೃತ ರೂಪದಲ್ಲಿ ಧೋರಣೆ ಮತ್ತು ಕಾರ್ಯಕ್ರಮಗಳನ್ನು ಇನ್ನಷ್ಟೇ ನಿರ್ಧರಿಸಬೇಕಾಗಿದೆ. ಸಂಘಟನೆಯ ನಾಯಕತ್ವ ಆಯ್ಕೆಯ ಚುನಾವಣಾ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಕೇಂದ್ರ ಸಲಹಾ ಸಮಿತಿಯೊಂದಿಗೆ ಚರ್ಚಿಸಿ ಜೂನ್ ತಿಂಗಳೊಳಗೆ ಹೊಸ ಧೋರಣೆ ಮತ್ತು ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಆಂದೋಲನವೆಂಬ ನೆಲೆಯಲ್ಲಿ ನಾನೀಗಾಗಲೇ ಪ್ರಸ್ತಾಪಿಸಿದ ವಿಷಯಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗುವುದು. ಯುವಕರನ್ನು ಸಂಘಟಿಸುವುದು ಮತ್ತು ಅವರೊಂದಿಗೆ ವಿಶೇಷವಾಗಿ ಸ್ಪಂದಿಸುವ ಹಾಗೂ ಅವರಿಗೆ ತರಬೇತಿ ನೀಡುವ ಕಾರ್ಯಕ್ರಮಗಳಿಗೆ ಖಂಡಿತವಾಗಿಯೂ ಆದ್ಯತೆ ನೀಡಲಾಗುವುದು. ಆಂದೋಲನದ ಸ್ತ್ರೀ ಶಕ್ತಿಯನ್ನು ದೊಡ್ಡ ಮಟ್ಟದಲ್ಲಿ ರಚನಾತ್ಮಕವಾಗಿ ಉಪ ಯೋಗಿಸಿಕೊಳ್ಳಲು ಯೋಜನೆಗಳನ್ನು ರೂಪಿಸಲಾಗುವುದು. ದ್ವೇಷ ರಾಜಕಾರಣವನ್ನು ತಡೆಯುವ ನಿಟ್ಟಿನಲ್ಲಿ ವಿವಿಧ ಜನವಿಭಾಗಗಳೊಂದಿಗೆ ಸೌಹಾರ್ದ, ಸಾಮರಸ್ಯ ಹಾಗೂ ಸಹ ಬಾಳ್ವೆಯ ವಾತಾವರಣವನ್ನು ನಿರ್ಮಿಸಲು ವಿಶೇಷ ಮಹತ್ವ ವನ್ನು ನೀಡಲಾಗುವುದು. ಇಸ್ಲಾಮಿನ ಬಗ್ಗೆ ಜನರಲ್ಲಿರುವ ಸಂದೇಹಗಳನ್ನು ದೂರೀಕರಿಸಲು ಮತ್ತು ನೈಜ ಇಸ್ಲಾಮಿನ ಸಂದೇಶವನ್ನು ವ್ಯಾಪಕವಾಗಿ ಪರಿಚಯಿಸಲು ಯೋಜನೆಗಳನ್ನು
ಹಾಕಿಕೊಳ್ಳಲಾಗುವುದು.

ಪ್ರಶ್ನೆ: ಮೊದಲ ಬಾರಿಗೆ ಕೇಂದ್ರ ಸಲಹಾ ಸಮಿತಿಯಲ್ಲಿ ಮಹಿಳಾ ಪ್ರತಿನಿಧಿಯನ್ನು ಆಯ್ಕೆ ಮಾಡಲಾಗಿದೆ…!

ಉತ್ತರ: ಜಮಾಅತ್‍ನಲ್ಲಿ ಮಹಿಳೆಯರ ಪ್ರತಿನಿಧಿಸುವಿಕೆ ಮತ್ತು ಪಾಲ್ಗೊಳ್ಳುವಿಕೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಖಂಡಿತಕ್ಕೂ ಇದೊಂದು ಶುಭ ಸೂಚನೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ಜಮಾಅತ್ ಸದಸ್ಯರಲ್ಲೂ ಮಹಿಳೆಯರ ಸಂಖ್ಯೆ ವೃದ್ಧಿಯಾಗುತ್ತಿದೆ. ಕಾರ್ಯಕರ್ತರಲ್ಲಂತೂ ಮಹಿಳೆಯರ ಸಂಖ್ಯೆಯ ಹೆಚ್ಚಳ ಪುರುಷರಿಗಿಂತಲೂ ತೀವ್ರಗತಿಯಲ್ಲಿ ಮುಂದುವರಿಯುತ್ತಿದೆ. ಖಂಡಿತವಾಗಿಯೂ ಮಹಿಳೆಯರ ಸಂಖ್ಯೆ ವೃದ್ಧಿಸುವುದರೊಂದಿಗೆ ನೇತೃತ್ವದಲ್ಲೂ ಅವರ ಪ್ರಾತಿನಿಧ್ಯ ಹೆಚ್ಚಾಗುತ್ತದೆ. ನಾಯಕತ್ವ ಹುದ್ದೆಯಲ್ಲಿ ಮಹಿಳೆಯರಿಗೆ ವಿಶೇಷ ಮೀಸಲಾತಿ ಬೇಕೆಂಬ ಬೇಡಿಕೆ ಈ ಹಿಂದೆ ಜಮಾಅತ್‍ನ ಪರಿಗಣನೆಗೆ ಬಂದಿತ್ತು. ಆದರೆ ಸ್ವಾಭಾವಿಕವಾಗಿ ಲಭಿಸುವ ನೇತೃತ್ವವೇ ಸಾಕೆಂದು ಜಮಾಅತ್ ತೀರ್ಮಾನಿಸಿತು. ಅದು ಸರಿ ಎಂಬಂತೆ ರುಜುಪಡಿಸುವ ರೀತಿಯಲ್ಲಿ ಇದೀಗ ಕೇಂದ್ರ ಸಲಹಾ ಸಮಿತಿಯಲ್ಲೂ, ಕೇಂದ್ರ ಪ್ರತಿನಿಧಿ ಸಭೆಯಲ್ಲೂ ರಾಷ್ಟ್ರ ಹಾಗೂ ರಾಜ್ಯಗಳ ನಾಯಕ ಸ್ಥಾನದಲ್ಲೂ ಮಹಿಳೆಯರ ಉಪಸ್ಥಿತಿ ಮುಂದುವರಿಯುತ್ತಿದೆ.