ಕತರ್ ಜಗತ್ತಿನ ಅತ್ಯಂತ ಶಾಂತಿಯುತ ದೇಶ; ಭಾರತಕ್ಕೆ 69 ನೇ ಸ್ಥಾನ- ಸಮೀಕ್ಷಾ ವರದಿ

0
1962

ಸನ್ಮಾರ್ಗ ವಾರ್ತೆ

ದೋಹ,ಜು.15: ಲೋಕದಲ್ಲಿ ಅತೀ ಹೆಚ್ಚು ಶಾಂತಿಯಿಂದ ಕೂಡಿದ ದೇಶವೆಂಬ ಖ್ಯಾತಿಯನ್ನು ಕತರ್ ಗಳಿಸಿಕೊಂಡಿದೆ. ಹೆಚ್ಚು ಸುರಕ್ಷಿತತೆಯಿರುವ ಅಪರಾಧ ಕೃತ್ಯಗಳು ಕಡಿಮೆ ಇರುವ ಸಾಲಿನಲ್ಲಿ ಕತರ್ ಪ್ರಥಮ ಸ್ಥಾನಗಳಿಸಿದೆ.

ಈ ಪಟ್ಟಿಯಲ್ಲಿ ಗಲ್ಫ್ ದೇಶವಾದ ಒಮನ್ ನಾಲ್ಕನೆ ಸ್ಥಾನದಲ್ಲಿದೆ. ಲೋಕದಲ್ಲಿ ಅತೀಹೆಚ್ಚು ಇಂಟರ್ನೆಟ್ ಡಾಟಾ ಬೇಸ್ ಆಗಿರುವ ನಬಿಯೊ ಸಮೀಕ್ಷೆ ನಡೆಸಿದ್ದು, ಲೋಕದಲ್ಲಿ ಅತ್ಯಂತ ಸುರಕ್ಷಿತ ಮತ್ತು ಶಾಂತಿಯಿರುವ ದೇಶಗಳಲ್ಲಿ ಕತರ್‌ಗೆ ಪ್ರಥಮ ಸ್ಥಾನ ನೀಡಿದೆ.

133 ದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಅರಬ್ ವಲಯದಲ್ಲಿ ಒಂದನೇ ಸ್ಥಾನವನ್ನು ಅದು ಪಡೆದುಕೊಂಡಿದೆ. ಸುರಕ್ಷಿತತೆಯಲ್ಲಿ 88.10 ಪಾಯಿಂಟು ಗಳಿಸಿದೆ. ಇದೇ ವೇಳೆ ಅಪರಾಧಗಳಲ್ಲಿ ಅತ್ಯಂತ ಕಡಿಮೆ ಪೊಯಿಂಟು ಕತರ್‌ಗಿದೆ.

ತೈವಾನ್, ಜಾರ್ಜಿಯ, ಒಮನ್ ಮೊದಲ ನಾಲ್ಕು ಸ್ಥಾನಗಳಲ್ಲಿದೆ. ಭಾರತಕ್ಕೆ ಪಟ್ಟಿಯಲ್ಲಿ 69ನೇ ಸ್ಥಾನವಿದ್ದರೆ, ವೆನೆಝುವೇಲ ಜಗತ್ತಿನಲ್ಲಿ ಅತ್ಯಂತ ಕಡಿಮೆ ಸುರಕ್ಷಿತ ದೇಶವೆಂಬ ಬಣ್ಣನೆಗೆ ಒಳಗಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.