ಸನ್ಮಾರ್ಗ ವಾರ್ತೆ
ಟೆಹ್ರಾನ್,ಜ.6: ತಮ್ಮ ಉನ್ನತ ಸೇನಾಧಿಕಾರಿ ಖಾಸಿಂ ಸುಲೈಮಾನಿಯ ಹತ್ಯೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು 47 ಅಮೆರಿಕನ್ ಅಧಿಕಾರಿಗಳ ವಿರುದ್ಧ ಆರೆಸ್ಟ್ ವಾರಂಟ್ ಹೊರಡಿಸಬೇಕೆಂದು ಇರಾನ್ ಇಂಟರ್‍ಪೋಲನ್ನು ಆಗ್ರಹಿಸಿದೆ.
ಇರಾನ್‍ನ ನ್ಯಾಯಾಂಗ ವಕ್ತಾರ ಗುಲಾಂ ಹುಸೈನ್ ಇಸ್ಮಾಯಿಲಿ ಈ ವಿಷಯವನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದು, ಕಳೆದ ವರ್ಷ ಜನವರಿ ಮೂರರಂದು ಬಗ್ದಾದಿನಲ್ಲಿ ಸುಲೈಮಾನಿಯವರ ಹತ್ಯೆ ಆಗಿತ್ತು.
ಎರಡನೇ ಬಾರಿಗೆ ಟ್ರಂಪ್ ಮತ್ತು ಅಮೆರಿಕದ ಅಧಿಕಾರಿಗಳ ವಿರುದ್ಧ ಕ್ರಮ ಜರಗಿಸಲು ಆಗ್ರಹಿಸಿ ಇರಾನ್ ಇಂಟರ್ ಪೋಲನ್ನು ಸಂಪರ್ಕಿಸುತ್ತಿದೆ.












