ಹಿಪಾಕ್ರಸಿ ಅಂದ್ರೆ ಇದೆ ಅಲ್ವೇ?

0
309

✍️ ಅಮಾನ್

ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗಳಿಗೂ ಅವರ ವರ್ತನೆಗೂ ತಾಳಮೇಳ ಇರುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಪ್ರಧಾನಿಯವರು ಮೇ ಹತ್ತರಂದು ತೆಲಂಗಾಣದ ಪರೇಡ್ ಗ್ರೌಂಡ್ ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಜನರು ಪೆಟ್ರೋಲ್ ಡೀಸೆಲ್ ಗ್ಯಾಸ್ ಗಳನ್ನು ಜಾಗರೂಕತೆಯಿಂದ ಬಳಸಬೇಕು ಎಂದು ಕರೆ ಕೊಟ್ಟರು. ವರ್ಕ್ ಫ್ರಮ್ ಹೋಂ ಅಥವಾ ಮನೆಯಿಂದಲೇ ಕೆಲಸ ಮಾಡಬೇಕು ಎಂದು ಹೇಳಿದರು . ಕಚೇರಿ ಮೀಟಿಂಗ್ ಮತ್ತು ಇನ್ನಿತರ ಮೀಟಿಂಗ್ ಗಳನ್ನು ಮನೆಯಿಂದಲೇ ಮಾಡುವ ಮೂಲಕ ಪೆಟ್ರೋಲ್ ಮತ್ತು ಡಿಸಿಎಲ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು ಎಂದು ವಿನಂತಿಸಿದ್ರು. ಆ ಕಾರಣಕ್ಕಾಗಿ ಮೆಟ್ರೋದಲ್ಲಿ ಮತ್ತು ಬಸ್ ಇತ್ಯಾದಿ ಸಾರಿಗೆ ವ್ಯವಸ್ಥೆಯನ್ನು ಓಡಾಟಕ್ಕೆ ಬಳಸಬೇಕು ಎಂದು ಹೇಳಿದರು. ವಿದೇಶಕ್ಕೆ ಪ್ರಯಾಣಿಸುವುದನ್ನು ಮುಂದೂಡಬೇಕುಮತ್ತು ಸಾಧ್ಯವಾದಷ್ಟು ಎಲೆಕ್ಟ್ರಿಕ್ ವಾಹನವನ್ನು ಬಳಸಬೇಕು ಎಂದು ಕರೆ ಕೊಟ್ರು.

ಆದರೆ ಮೇ 11ರಂದು ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿನ ವಡೋದರದಲ್ಲಿ ರೋಡ್ ಶೋ ನಡೆಸಿದ್ದಾರೆ. ವಡೋದರರದ ಗದ ಸರ್ಕಲ್ ನಿಂದ ಹರ್ನಿ ಏರ್ಪೋರ್ಟ್ ವರೆಗೆ ಒಂದೂವರೆ ಕಿಲೋ ಮೀಟರ್ ಉದ್ದದ ರಸ್ತೆಯಲ್ಲಿ ರೋಡ್ ಶೋ ನಡೆಸಿದ್ದಾರೆ. ಸರ್ದಾರ್ ಧಾಮ ಉದ್ಘಾಟನೆಯ ನಂತರ ಅವರು ಈ ರೋಡ್ ಶೋ ನಡೆಸಿದ್ದಾರೆ. ಪಶ್ಚಿಮ ಬಂಗಾಳದ ಚುನಾವಣಾ ಗೆಲುವಿನ ಬಳಿಕ ವಿಜಯ ಯಾತ್ರೆಯಾಗಿಯೂ ಇದನ್ನು ಗುರುತಿಸಲಾಗಿದೆ.

ಇವರ ರೋಡ್ ಕ್ಕೆ ಅನೇಕ ವಾಹನಗಳನ್ನು ಬಳಸಲಾಗಿದೆ. ವಿಶೇಷವಾಗಿ ಅವರ ಬೆಂಗಾವಲು ವಾಹನದ ಪಡೆಯೇ ಬಹಳ ದೊಡ್ಡದಿದೆ..ಭದ್ರತಾ ವಾಹನಗಳು ಪೋಲೀಸ್ ವಾಹನಗಳು ಪೈಲೆಟ್ ವಾಹನಗಳು ಸೇರಿ ನೂರಕ್ಕಿಂತಲೂ ಅಧಿಕ ವಾಹನಗಳು ಈ ಸಂದರ್ಭದಲ್ಲಿ ಹಿಂದು ಮುಂದಿನ ಓಡಾಡಿವೆ.

ಕೇವಲ 24 ಗಂಟೆಯ ಒಳಗಡೆ ಪ್ರಧಾನಿ ನರೇಂದ್ರ ಮೋದಿಯವರು ತಾನು ಆಡಿದ ಮಾತಿಗೆ ವಿರುದ್ಧವಾಗಿ ನಡಕೊಂಡರೇಕೆ ಎಂಬ ಪ್ರಶ್ನೆ ನಾಗರಿಕರಿಂದ ಕೇಳ್ತಾ ಇದೆ.

ತೆಲಂಗಾಣದಲ್ಲಿ ಭಾಷಣ ಮಾಡುವಾಗ ಅವರಿಗೆ ದೇಶದ ನಾಗರಿಕರು ನೆನಪಾಗಿದ್ದಾರೆ. ದೇಶದ ಕಷ್ಟಕರ ಪರಿಸ್ಥಿತಿಯಲ್ಲಿ ನಾಗರಕರು ಕೈಜೋಡಿಸಬೇಕು ಎಂದು ವಿನಂತಿಸಿದ್ದಾರೆ. ಪೆಟ್ರೋಲ್ ಮತ್ತು ಡಿಸೆಲ್ ಹಾಗೂ ಗ್ಯಾಸನ್ನು ಕಡಿಮೆ ಬಳಸಿ ದೇಶಕ್ಕಾಗಿ ಕೊಡುಗೆ ಕೊಡಿ ಎಂದು ಹೇಳಿದ್ದಾರೆ. ಓಡಾಟಕ್ಕೆ ಸಾರ್ವಜನಿಕ ಸಾರಿಗೆಯನ್ನು ಬಳಸಿ ಎಂದು ಹೇಳಿದ್ದಾರೆ. ಎಲೆಕ್ಟ್ರಿಕ್ ವಾಹನಗಳನ್ನು ಬಳಸಿ ಎಂದು ಹೇಳಿದ್ದಾರೆ.ಈ ಎಲ್ಲವೂ ಕೂಡ ತೈಲದ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ.

ತೈಲವನ್ನು ನಾವು ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕೆ ಬಾರಿ ಪ್ರಮಾಣದಲ್ಲಿ ದುಡ್ಡು ಖರ್ಚು ಮಾಡಬೇಕಾಗುತ್ತದೆ. ಆದರೆ ನಾಗರಿಕರಾಗಿ ನಾವು ಡಿಸೆಲ್ ಪೆಟ್ರೋಲ್ ಗ್ಯಾಸ್ ಇತ್ಯಾದಿಗಳನ್ನು ಕಡಿಮೆ ಬಳಸಿದರೆ ಅದರಿಂದ ಆಮದು ಕಡಿಮೆಯಾಗುತ್ತದೆ ಆ ಮೂಲಕ ವಿದೇಶಿ ವಿನಿಮಯದ ಉಳಿತಾಯ ಮಾಡಬಹುದಾಗಿದೆ. ಪ್ರಧಾನಿಯವರ ಈ ಕರೆ ತಪ್ಪಲ್ಲ.

ಆದರೆ ಅವರಿಗೆ ರೋಡ್ ಶೋವನ್ನು ಮಾಡದೆ ಇರಬಹುದಿತ್ತಲ್ಲ? ನೂರಾರು ವಾಹನಗಳು ಪೆಟ್ರೋಲ್ ಡೀಸೆಲ್ ಬಳಸದಂತೆ ನೋಡಿಕೊಳ್ಳಬಹುದಿತ್ತಲ್ಲ? ಅವರೇ ಮಾದರಿಯಾಗದೆ ಜನರಲ್ಲಿ ಮಾದರಿಯಾಗಿ ಎಂದರೆ ಹೇಗೆ ಎಂಬ ಪ್ರಶ್ನೆ ಎದುರಾಗಿದೆ.