ಸನ್ಮಾರ್ಗ ವಾರ್ತೆ
ಮುಸ್ಲಿಂ ವಿದ್ಯಾರ್ಥಿಗೆ ಸಹಪಾಠಿಗಳಿಂದ ಬಾರಿಸಲಾದ ಉತ್ತರ ಪ್ರದೇಶದ ಘಟನೆಯು ಖಂಡನಾರ್ಹವಾಗಿದೆ. ದೇಶದಲ್ಲಿ ಇಸ್ಲಾಮೊಫೋಬಿಯ ತನ್ನೆಲ್ಲ ಮಿತಿಯನ್ನು ಮೀರಿದೆ. ಇದರಿಂದ ಮಕ್ಕಳಿಗೂ ರಕ್ಷಣೆ ಇಲ್ಲ ಎಂಬಂತಾಗಿದೆ. ತಪ್ಪಿತಸ್ಥೆ ತೃಪ್ತಿ ತ್ಯಾಗಿಯನ್ನು ತಕ್ಷಣ ಬಂಧಿಸಬೇಕು ಮತ್ತು ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಇಂಡಿಯಾ ಆಗ್ರಹಿಸಿದೆ.
ಬಿಡುಗಡೆಗೊಂಡ ವಿಡಿಯೋದಲ್ಲಿ ಮುಸ್ಲಿಂ ದ್ವೇಷ ಸ್ಪಷ್ಟವಾಗಿ ಕಾಣಿಸುತ್ತಿದೆ. ಇದು ಆಘಾತಕಾರಿ. ಇಂತಹ ಕೃತ್ಯ ಮರುಕಳಿಸಿದಂತೆ ಮಾಡುವುದಕ್ಕಾಗಿ ಆ ಶಿಕ್ಷಕಿಗೆ ಕಠಿಣ ಶಿಕ್ಷೆಯನ್ನು ನೀಡಬೇಕಾಗಿದೆ ಎಂದು ಎಸ್ ಐ ಓ ಆಗ್ರಹಿಸಿದೆ.
ಮುಸ್ಲಿಂ ವಿದ್ಯಾರ್ಥಿಗಳ ಜೊತೆ ನಾನು ಹೀಗೆಯೇ ವರ್ತಿಸುತ್ತೇನೆ, ಅವರು ಇಂಥದ್ದಕ್ಕೆ ಅರ್ಹರು ಎಂದು ಅಧ್ಯಾಪಕಿ ಹೇಳುವ ಮಾತು ಕೂಡ ವಿಡಿಯೋದಲ್ಲಿ ಕೇಳಿಸುತ್ತಿದೆ. ಇದು ಇಸ್ಲಾಮೊಫೋಬಿಯ ತನ್ನ ಮಿತಿಯನ್ನು ಮೀರಿದೆ ಅನ್ನುವುದಕ್ಕೆ ಸ್ಪಷ್ಟ ಉದಾಹರಣೆ. ಮಕ್ಕಳನ್ನೂ ಬಿಡದಷ್ಟು ಈ ಫೋಬಿಯ ತೀವ್ರ ರೀತಿಯಲ್ಲಿ ಹರಡಿದೆ. ಇದನ್ನು ನಿಗ್ರಹಿಸಲೇಬೇಕಿದೆ ಮತ್ತು ಶಿಕ್ಷಕಿಗೆ ಸೂಕ್ತ ಶಿಕ್ಷೆ ನೀಡುವ ಮೂಲಕ ಇತರರಿಗೆ ಎಚ್ಚರಿಕೆ ನೀಡಬೇಕು ಎಂದು ಎಸ್ ಐ ಓ ಆಗ್ರಹಿಸಿದೆ.












