3 ದಿನಗಳಲ್ಲಿ ಗಾಝಾದಲ್ಲಿ 300 ಕ್ಕೂ ಹೆಚ್ಚು ಮನೆಗಳನ್ನು ಧ್ವಂಸಗೊಳಿಸಿದ ಇಸ್ರೇಲ್; ಅಪಾರ ಸಾವು ನೋವು

0
440

ಸನ್ಮಾರ್ಗ ವಾರ್ತೆ

ಗಾಝಾ: ಮಧ್ಯ ಗಾಝಾದ ಜೈಟೌನ್ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಇಸ್ರೇಲಿ ಸೇನೆಯು ನಡೆಸುತ್ತಿರುವ ನಿರಂತರ ದಾಳಿಯಿಂದಾಗಿ 300ಕ್ಕೂ ಹೆಚ್ಚು ಮನೆಗಳು ನಾಶವಾಗಿದೆವಎಂದು ಗಾಜಾದ ನಾಗರಿಕ ರಕ್ಷಣಾ ವಕ್ತಾರ ಮಹಮೂದ್ ಬಸಲ್ ಬುಧವಾರ ತಿಳಿಸಿದ್ದಾರೆ. ಇಸ್ರೇಲಿ ಸೇನೆಯು ಉದ್ದೇಶಪೂರ್ವಕವಾಗಿ ನಾಗರಿಕ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದ್ದು, ವಿಶೇಷವಾಗಿ ಐದು ಅಥವಾ ಅದಕ್ಕಿಂತ ಹೆಚ್ಚಿನ ಮಹಡಿಗಳನ್ನು ಹೊಂದಿರುವ ಕಟ್ಟಡಗಳ ಮೇಲೆ ದಾಳಿ ನಡೆಸುತ್ತಿದೆ. ಭಾರೀ ಸ್ಫೋಟಕಗಳಿಂದ ಸುತ್ತಮುತ್ತಲಿನ ಕಟ್ಟಡಗಳಿಗೂ ಹಾನಿಯಾಗಿದೆ ಎಂದು ಅವರು ಹೇಳಿದರು.

ಯಾವುದೇ ಪೂರ್ವ ಸೂಚನೆ ಇಲ್ಲದೆ ಮನೆಗಳನ್ನು ಕೆಡವಿದ ಕಾರಣ, ಕೆಲವು ಮನೆಗಳ ಒಳಗೆ ನಿವಾಸಿಗಳು ಇರುವಾಗಲೇ ದಾಳಿಗಳು ನಡೆದಿದ್ದು, ಇದರಿಂದಾಗಿ ಹಲವು ಸಾವುನೋವುಗಳು ಸಂಭವಿಸಿದೆ. ತೀವ್ರವಾದ ಬಾಂಬ್ ದಾಳಿಯಿಂದ ಗಾಯಗೊಂಡವರನ್ನು ರಕ್ಷಿಸಲು ನಾಗರಿಕ ರಕ್ಷಣಾ ತಂಡಗಳಿಗೆ ಸಾಧ್ಯವಾಗಲಿಲ್ಲ ಎಂದು ಬಸಲ್ ತಿಳಿಸಿದ್ದಾರೆ.

ಅಕ್ಟೋಬರ್ 2023ರಿಂದ ಗಾಜಾದ ಮೇಲೆ ಇಸ್ರೇಲ್‌ನ ನಡೆಯುತ್ತಿರುವ ಆಕ್ರಮಣದಲ್ಲಿ 61,700ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಯುದ್ಧಕ್ಕಾಗಿ ಇಸ್ರೇಲ್ ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಖಂಡನೆಗೆ ಒಳಗಾಗಿದ್ದು, ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಮಾಜಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ವಿರುದ್ಧ ಯುದ್ಧ ಅಪರಾಧಿಗಳು ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಬಂಧನ ವಾರಂಟ್‌ಗಳನ್ನು ಹೊರಡಿಸಿದೆ. ಇದಲ್ಲದೆ, ಇಸ್ರೇಲ್ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ನರಮೇಧದ ಪ್ರಕರಣವನ್ನೂ ಎದುರಿಸುತ್ತಿದೆ.