ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ಸಾರ್ವಜನಿಕ ರಂಗಕ್ಕೆ: ವದಂತಿಗಳಿಗೆ ತೆರೆ

0
353

ಸನ್ಮಾರ್ಗ ವಾರ್ತೆ

ಬೀಜಿಂಗ್: ವಿವಾದವಾದ ನಂತರ ಕಾಣೆಯಾಗಿದ್ದ ಆಲಿಬಾಬಾ ಸಂಸ್ಥಾಪಕ ಜಾಕ್ ಮಾ ಪುನಃ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.ಅವರ ಕುರಿತು ಊಹಾಪೋಹಗಳು ದಟ್ಟವಾಗಿ ಹರಡಿತ್ತು.

ಚೀನದ ಸರಕಾರದ ವಿರುದ್ಧ ಪ್ರತಿಕ್ರಿಯಿಸಿದ್ದ ಜಾಕ್ ಇಷ್ಟು ದಿನ ಎಲ್ಲಿದ್ದರು ಎಂಬ ಪ್ರಶ್ನೆ ಜಗತ್ತಿನಾದ್ಯಂತ ಹರಡಿದೆ. ಸಾಧನೆ ಮಾಡಿದ ಗ್ರಾಮೀಣ ಅಧ್ಯಾಪಕರನ್ನು ಕಂಡುಹುಡುಕುವುದಕ್ಕಾಗಿ ಆಯೋಜಿಸಿದ್ದ ವಾರ್ಷಿಕ ಕಾರ್ಯಕ್ರಮದಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ಅಧ್ಯಾಪಕರನ್ನು ಉದ್ದೇಶಿಸಿ ಅವರು ಮಾತಾಡಿದರು. ಅಧ್ಯಾಪಕನಾಗಿದ್ದ ಜಾಕ್ ಮಾ ನಂತರ ಇಂಟರ್ನೆಟ್ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ್ದರು.

ಸರಕಾರದೊಂದಿಗೆ ವಿವಾದ ಆದ ಬಳಿಕ ಶತಕೋಟ್ಯಾಧಿಪತಿಯಾದ ಅವರು ಸಾರ್ವಜನಿಕ ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಅಕ್ಟೋಬರಿನಲ್ಲಿ ಶಾಂಗೈಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಜಾಕ್ ಮಾ ಚೈನೀಸ್ ಸರಕಾರ ಮತ್ತು ಅಧ್ಯಕ್ಷ ಶಿಜಿನ್‍ ಪಿಂಗ್‍ರನ್ನು ಟೀಕಿಸಿದ್ದರು.