ಜಾಫರಾಬಾದಿನಲ್ಲಿ ಶಾಹಿನ್‍ಬಾಗ್ ಮಾದರಿ ಹೋರಾಟ: ಸಿಎಎ ಪರ ಪ್ರತಿಭಟನಾಕಾರರಿಂದಲೂ ಟೆಂಟ್

0
659

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 24: ಜಾಫಾರಬಾದಿನಲ್ಲಿ ಪೌರತ್ವ ತಿದುಪಡಿ ಕಾನೂನು ವಿರುದ್ಧ ಮಹಿಳೆಯರು ಶಾಹೀನ್ ಬಾಗ್ ಮಾದರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಜಾಫರಾಬಾದ್, ಬಾಬರ್‍ಪುರ-ಮೌಜ್‍ಪುರ ಮೆಟ್ರೋ ನಿಲ್ದಾಣ ಇಂದೂ ತೆರೆಯುವುದಿಲ್ಲ. ಸ್ಥಳದಲ್ಲಿ ದಿಲ್ಲಿ ಪೊಲೀಸರು ಮತ್ತು ಸಿಆರ್‍ಪಿಎಫ್ ಜವಾನರು ಮೊಕ್ಕಾಂ ಹೂಡಿದ್ದಾರೆ. ಕಳೆದ ದಿವಸ ಪ್ರತಿಭಟನಾಕಾರರ ವಿರುದ್ಧ ಬಿಜೆಪಿ ನಾಯಕರ ನೇತೃತ್ವದ ಸಿಎಎ ಬೆಂಬಲಿಗರು ಹಿಂಸಾಚಾರಕ್ಕಿಳಿದಿದ್ದರು. ನಂತರ ಉದ್ರಿಕ್ತ ಸ್ಥಿತಿ ತಲೆದೋರಿತ್ತು. ಹಲವು ಮಂದಿ ಗಾಯಗೊಂಡಿದ್ದರು.

ಮೌಜ್‍ಪುರದಲ್ಲಿ ಪೌರತ್ವ ಬೆಂಬಲಿಗರು ಕೂಡ ಡೇರೆ ಹಾಕಿದ್ದಾರೆ. ನಿನ್ನೆ ಸಂಜೆ ಇನ್ನೊಂದು ಶಾಹಿನ್ ಬಾಗ್‍ಗೆ ಅವಕಾಶ ನೀಡುವುದಿಲ್ಲ ಎಂದು ಕಪಿಲ್ ಮಿಶ್ರ ನೇತೃತ್ವದಲ್ಲಿ ಜನರ ಗುಂಪು ಪ್ರಚೋದನಾಕಾರಿ ಘೋಷಣೆಗಳೋಂದಿಗೆ ಪ್ರತಿಭಟನಾಕಾರರ ಮೇಲೆ ಕಲ್ಲೆಸೆದದ್ದರಿಂದ ಘರ್ಷಣೆ ಆರಂಭವಾಗಿತ್ತು. ಪರಸ್ಪರ ಕಲ್ಲೆಸೆತ ಆರಂಭವಾಗುವುದರೊಂದಿಗೆ ಜನರನ್ನು ತೆರುವುಗೊಳಿಸಲು ಅಶ್ರುವಾಯು ಪ್ರಯೋಗಿಸಿದ್ದಾರೆ. ಜಾಪರಾಬಾ ಮೆಟ್ರೋ ನಿಲ್ದಾಣಕ್ಕೆ ಒಂದು ಕಿಲೊಮೀಟರ್ ದೂರದ ಬಾಬರ್ಪುರ-ಮೌಜ್‍ಪುರ ಮೆಟ್ರೋ ನಿಲ್ದಾಣದ ಬಳಿ ಘರ್ಷಣೆ ನಡೆದಿದೆ.
ಜಾಫರಾಬದಿನ ಮಹಿಳೆಯರು ಕೆಲವು ದಿವಸಗಳಿಂದ ಪೌರತ್ವ ಕಾನೂನು ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ರವಿವಾರ ಚಂದ್ರಶೇಖರ್ ಆಝಾದ ಘೋಷಿಸಿದ ಭಾರತ ಬಂದ್‍ಗೆ ಬೆಂಬಲವನ್ನು ಸೂಚಿಸಿ ಶನಿವಾರ ರಾತ್ರೆ ಪ್ರತಿಭಟನೆಯನ್ನು ರಸ್ತೆತಡೆಯನ್ನಾಗಿಸಲಾಗಿತ್ತು. ಬಂದನ್ನು ಬೆಂಬಲಿಸಿ ರಾಜ್‍ಘಾಟ್‍ಗೆ ಜಾಥಾ ನಡೆಸಲು ಯೋಜನೆ ರೂಪಿಸಿದ್ದರೂ ಪೊಲೀಸರು ತಡೆದಿದ್ದಾರೆ.