ಟ್ರಂಪ್‍ರ ತಾಜ್‍ಮಹಲ್ ಭೇಟಿ: ಯೋಗಿ ಏನು ಮಾಡುತ್ತಿದ್ದಾರೆ?

0
2122

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 24: ಭಾರತಕ್ಕೆ ಬರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾಜ್‍ಮಹಲ್ ಸಂದರ್ಶಿಸುವಾಗ ಅವರ ಜೊತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಇರಲಿದ್ದಾರೆ. ಅದರಲ್ಲೇನಿದೆ?? ವಿದೇಶಿ ಗಳು ಭಾರತಕ್ಕೆ ಬಂದಾಗ ತಾಜ್‍ಗೆ ಭೇಟಿ ನೀಡುತ್ತಾರೆ, ಫೋಟೊ ತೆಗೆಸಿಕೊಳ್ಳುತ್ತಾರೆ. ಆದರೆ ಮೊಗಲ್ ಇತಿಹಾಸ, ಸ್ಮಾರಕಗಳ ಮೇಲೆ ಸಂಘಪರಿವಾರದ ವೈರ ಪ್ರಸಿದ್ಧವಾದದ್ದು. ಅಧಿಕಾರಕ್ಕೆ ಬಂದ 2017ರಲ್ಲಿ ಯೋಗಿ ಪ್ರವಾಸಿಗರು ನೋಡಬೇಕಾದ ಪಟ್ಟಿಯಿಂದಲೇ ತಾಜ್‍ಮಹಲನ್ನು ಕೈಬಿಟ್ಟಿದ್ದರು. ಜಗತ್ತಿನ ಎಲ್ಲ ಕಡೆಯಿಂದ ಬರುವ ಪ್ರವಾಸಿಗರ ಪಟ್ಟಿಯಲ್ಲಿ ತಾಜ್‍ಮಹಲ್ ಬದಲು ಮಥುರೆ, ಗೊರಕ್‍ಪುರ ಮಂದಿರಗಳಿಗೆ ಸ್ಥಾನ ನೀಡಲಾಗಿತ್ತು.

ಇಷ್ಟೇ ಅಲ್ಲ ವಿದೇಶದಿಂದ ಬರುವ ಗಣ್ಯರಿಗೆ ತಾಜ್‍ಮಹಲ್ ನ ಸಣ್ಣ ಆಕೃತಿಯನ್ನು ನೀಡುವ ರೀತಿಯನ್ನು ಬಿಹಾರದ ಭಾಷಣದ ವೇಳೆ ಯೋಗಿ ಟೀಕಿಸಿದ್ದರು. ಇದು ಭಾರತದ ಸಂಸ್ಕøತಿಯನ್ನು ತೋರಿಸುವುದಿಲ್ಲ ಎಂದಿದ್ದರು. ಈಗ ಅವರು ಟ್ರಂಪ್ ಜೊತೆ ತಾಜ್‍ಮಹಲ್ ಸಂದರ್ಶನಕ್ಕೆ ಬರುತ್ತಿರುವುದು ಕುತೂಹಲದ ವಿಷಯವಾಗಿ ಪರಿವರ್ತಿತವಾಗಿದೆ. ತಾಜ್‍ಮಹಲ್ ಅನ್ನು ತಿರಸ್ಕರಿಸುವುದರ ವಿರುದ್ಧ ಹಲವು ಕಡೆಗಳಿಂದ ಟೀಕೆ ಕೇಳಿಬಂದಿತ್ತು. ನಂತರ ಅವರು 2017ರಲ್ಲಿತಾಜ್ ಮಹಲ್‍ಗೆ ಭೇಟಿ ನೀಡಿ ಯಾರೇ ಕಟ್ಟಿಸಿದರೂ ಇದಕ್ಕಾಗಿ ಉಪಯೋಗಿಸಿದ್ದು ಭಾರತದ ಕಾರ್ಮಿಕರ ರಕ್ತ ಬೆವರು ಎಂದು ಪ್ರತಿಕ್ರಿಯಿಸಿದ್ದರು. ತಾಜ್‍ಮಹಲ್ ಸಂರಕ್ಷಣೆಯಲ್ಲಿ ಉತ್ತರಪ್ರದೇಶ ಸರಕಾರ ಲೋಪ ಮಾಡಿದೆ ಎಂದು ಸುಪ್ರೀಂಕೋರ್ಟು ಉತ್ತರಪ್ರದೇಶ ಸರಕಾರವನ್ನು ತರಾಟೆಗೆತ್ತಿಕೊಂಡಿತ್ತು. ಆಗ್ರ ಪರಿಸರ ಮಲಿನವಾಗುವುದು ತಾಜ್‍ಮಹಲ್ ಬಣ್ಣದಲ್ಲಿ ಬದಲಾವಣೆ ಆಗುವುದು ಕೂಡ ಪತ್ತೆಯಾಗಿತ್ತು.

ತಾಜ್‍ಮಹಲ್ ಶಿವಕ್ಷೇತ್ರವೆಂಬ ವಾದವೂ ಕೇಳಿಬಂದಿತ್ತು. ಪ್ರಮುಖ ಇತಿಹಾಸಕಾರ ಪಿ ಎನ್ ಓಕ್ ಇದನ್ನು ಪ್ರಥಮವಾಗಿ ಎತ್ತಿದ್ದರು. ಜೈಪುರದ ರಾಜ ಜೈಸಿಂಗ್ ಕಟ್ಟಿಸಿದ ತೇಜೊ ಮಹಾಲಯವನ್ನು ಶಾಜಹಾನ್ ವಶಪಡಿಸಿ ಮುಮ್ತಾಝ್‍ನ ಗೋರಿ ಸ್ಥಳವನ್ನಾಗಿ ಮಾಡಿದ್ದಾನೆ ಎಂದು ಅವರು ವಾದಿಸಿದ್ದರು. ತಾಜ್‍ಮಹಲನ್ನು ಮುಸ್ಲಿಮರು ಕಟ್ಟಿಸಿದ್ದಲ್ಲ. ಪರಮ ತೀರ್ಥ ರಾಜ ಕಟ್ಟಿಸಿದ್ದೆಂದು ಬಿಜೆಪಿ ಸಂಸದ ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿದ್ದರು. ತಾಜ್‍ಮಹಲನ್ನು ಇನ್ನೊಂದು ಬಾಬರಿ ಮಸೀದಿ ಮಾಡಲು ಸಾಮಾಜಿಕ ಮಾಧ್ಯಮಗಳಲ್ಲಿ ಸಂಘಪರಿವಾರ ಯತ್ನಿಸುತ್ತಿದೆ. ಅಲಾಹಾಬಾದನ್ನು ಪ್ರಯಾಗ್ ರಾಜ್, ಮುಗಲ್‍ಸರಾಯಿಯನ್ನು ದೀನ್ ದಯಾಳ್ ಉಪಾಧ್ಯ ನಗರ ಮಾಡಿ ಯೋಗಿ ನಾಮ್ ವಾಪಸಿ ಮಾಡಿದ್ದರು. ಆಗ್ರವನ್ನು ಅಗ್ರವನ ಮಾಡುವ ಚಿಂತನೆಯೂ ಯೋಗಿ ಸರಕಾರಕ್ಕಿದೆ ಎಂಬ ವರದಿಯೂ ಆಗಿತ್ತು. ಇಷ್ಟೆಲ್ಲ ಇದ್ದೂ ಯೋಗಿ ಆದಿತ್ಯನಾಥ್ ಟ್ರಂಪ್‍ರೊಂದಿಗೆ ತಾಜ್‍ಮಹಲ್‍ಗೆ ಭೇಟಿ ನೀಡಲಿದ್ದಾರೆ. ತಾಜ್‍ಮಹಲ್ ಶತಮಾನಗಳ ಪರಿಸರ ವ್ಯತ್ಯಾಸಗಳಿಂದ ಈಗಲೂ ತನ್ನ ಹೊಳಪನ್ನು ಕಳಕೊಂಡಿಲ್ಲ. ಅದರ ವಿರುದ್ಧ ಸುಳ್ಳುಪ್ರಚಾರಗಳು ಯಶಸ್ವಿಯಾಗದೆಂದೂ ಹೇಳಲು ಸಾಧ್ಯವಿಲ್ಲ.