ಸಮುದ್ರದ ಬಿಸಿ ದಾಖಲೆಯೆಡೆಗೆ; ಪ್ರಕೃತಿ ದುರಂತಕ್ಕೆ ಕಾರಣವಾಗಬಹುದು- ತಜ್ಞರು

0
760

ಸನ್ಮಾರ್ಗ ವಾರ್ತೆ-

ಲಂಡನ್, ಜ.14: ಸಮುದ್ರದ ತಾಪ 2019ರಲ್ಲಿ ದಾಖಲೆಮಟ್ಟಕ್ಕೆ ಏರಿಕೆಯಾಗಿದ್ದು ಭೂಮಿಯ ತಾಪ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದರ ಸ್ಪಷ್ಟ ಸೂಚನೆ ಇದೆಂದು ಅಧ್ಯಯನವೊಂದು ತಿಳಿಸಿದೆ. ಹಸಿರುಮನೆ ಅನಿಲಗಳಿಂದ ತಾಪದ ಮಟ್ಟ ಶೇ.90ಕ್ಕಿಂತ ಹೆಚ್ಚು ಆಗಿದೆ ಎಂದು ಪರಿಸರ ಜರ್ನಲ್‍ನಲ್ಲಿ ಇದಕ್ಕೆ ಸಂಬಂಧಿಸಿದ ಅಧ್ಯಯನವೊಂದು ಬಹಿರಂಗಪಡಿಸಿದೆ.

ಹೊಸ ಅಧ್ಯಯನ ವರದಿ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ ದಾಖಲೆ ಮಟ್ಟದಲ್ಲಿ ತಾಪ ಹೆಚ್ಚಳವಾಗಿದೆ. ಭೂಮಿಯ ಎಲ್ಲ ಮನುಷ್ಯರು 100 ಮೈಕ್ರೊವೇವ್ ಓವನ್‍ಗಳನ್ನು ಪ್ರತಿದಿವಸ ಚಾಲೂ ಮಾಡಿದರೆ ಆಗುವ ಉಷ್ಣಕ್ಕೆ ಸಮಾನವಾದ ತಾಪಮಟ್ಟ ಈಗ ಇದೆ ಎಂದು ಅಧ್ಯಯನ ಹೇಳುತ್ತಿದೆ. ಸಮುದ್ರದ ಉಷ್ಣತೆ ಹೆಚ್ಚುವುದು, ಪ್ರಳಯ ಬರ, ಕಾಡ್ಗಿಚ್ಚು , ಜಲಮಟ್ಟ ಏಕರಿಕೆಯಂತಹ ಬಹುದೊಡ್ಡ ದುರಂತಗಳಿಗೆ ಕಾರಣವಾಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.