ಸನ್ಮಾರ್ಗ ವಾರ್ತೆ
ಮುಂಬೈ,ಜೂ.27: 1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿ ನಾಸಿಕ್ ಜೈಲಿನಲ್ಲಿದ್ದ ಯೂಸುಫ್ ಮೆಮನ್(53) ಮೃತಪಟ್ಟಿದ್ದಾರೆ. ಯೂಸುಫ್ ಮೆನನ್ ಮುಂಬೈ ಸ್ಫೋಟದ ಮುಖ್ಯ ಸೂತ್ರಧಾರಿ ಟೈಗರ್ ಮೆಮನ್ನ ಸಹೋದರ. ಹೃದಯಾಘಾತದಿಂದ ಶುಕ್ರವಾರ ಬೆಳಗ್ಗೆ ನಿಧನರಾಗಿರುವುದಾಗಿ ಜೈಲಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಯೂಸುಫ್ ಮೆಮನ್ ಹೃದಯಾಘಾತವಾಗಿತ್ತು ಎಂದು ನಾಸಿಕ್ ಸೆಂಟ್ರಲ್ ಜೈಲ್ನ ಸೂಪರಿಡೆಂಟ್ ಹೇಳಿದ್ದಾರೆ. ನಂತರ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಲಾಗಿತ್ತು. 260 ಮಂದಿ ಕೊಲ್ಲಲ್ಪಟ್ಟಿದ್ದ ಮುಂಬೈ ಸ್ಫೋಟದಲ್ಲಿ ಯೂಸುಫ್ ಜೀವವಾಧಿ ಶಿಕ್ಷೆಗೊಳಗಾಗಿದ್ದ.
1993ರಲ್ಲಿ ಮುಂಬೈಯ ವಿವಿಧ ಕಡೆ ಸ್ಫೋಟ ನಡೆದಿತ್ತು. 770ಕ್ಕೂ ಹೆಚ್ಚು ಮಂದಿ ಅಂಗವಿಕಲರಾಗಿದ್ದರು. ಪಾಕಿಸ್ತಾನ ಗೂಢಚಾರ ಸಂಘಟನೆ ಐಎಸ್ಐಯ ಸಹಾಯದಲ್ಲಿ ಟೈಗರ್ ಮೆಮನ್ ಮತ್ತು ದಾವೂದ್ ಇಬ್ರಾಹೀಂ ಸೇರಿ ಸ್ಫೋಟ ಸೂತ್ರ ಹೆಣೆದಿದ್ದರೆಂದು ತನಿಖೆಯಲ್ಲಿ ಪತ್ತೆಯಾಗಿತ್ತು.
ಸ್ಫೋಟದ ನಂತರ ಬಂಧಿಸಲಾಗಿದ್ದ ಯೂಸುಫ್ ಮೆಮನ್ನನ್ನು ವಿವಿಧ ಜೈಲುಗಳಲ್ಲಿ ಇರಿಸಲಾಗಿತ್ತು. ಸ್ಫೋಟ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಪತ್ತೆಯಾಗಿದ್ದ ಇನ್ನೊಬ್ಬ ಸಹೋದರ ಯಾಕೂಬ್ ಮೆಮನ್ನನ್ನು 2015ರಲ್ಲಿ ಗಾನಪುರ ಸೆಂಟ್ರಲ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












