ಸನ್ಮಾರ್ಗ ವಾರ್ತೆ
ಮಾನವ ಒಂದು ಸಾಮಾಜಿಕ ಜೀವಿ. ಮಾನವೀಯ ಸಂಬಂಧಗಳ ಆಧಾರದ ಮೇಲೆ ಸಮಾಜದಲ್ಲಿ ಎಲ್ಲರೂ ಪರಸ್ಪರ ಸಂಬಂಧಿತರಾಗಿದ್ದಾರೆ. ಜೀವನದ ಸುಖ ಮತ್ತು ಯಶಸ್ಸು ಈ ಲೋಕದಲ್ಲಿಯೂ ಮತ್ತು ಪರಲೋಕದಲ್ಲಿಯೂ ಈ ಸಂಬಂಧಗಳನ್ನು ಸರಿಯಾಗಿ ಕಾಪಾಡುವುದರಲ್ಲಿದೆ.
ಈ ನಿಟ್ಟಿನಲ್ಲಿ ತಿಂಗಳಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ನವೆಂಬರ್ 21ರಿಂದ 30ರ ವರೆಗೆ “ನೆರೆಹೊರೆಯವರ ಹಕ್ಕುಗಳು” ಎಂಬ ಅತ್ಯಂತ ಮಹತ್ವದ ವಿಷಯದಲ್ಲಿ ರಾಷ್ಟ್ರ ಮಟ್ಟದ ಅಭಿಯಾನವನ್ನು ಹಮ್ಮಿಕೊಂಡಿದೆ.
ಇಂದಿನ ಸಮಾಜದಲ್ಲಿ ಸ್ವಾರ್ಥ, ವೈಯಕ್ತಿಕತೆ, ಸಾಮಾಜಿಕ ಮಾಧ್ಯಮ, ಮೊಬೈಲ್ ಇತ್ಯಾದಿಗಳ ಪ್ರಭಾವದಿಂದ ಜನರು ತಮ್ಮ ನೆರೆಹೊರೆಯವರೊಂದಿಗೆ ಸಂಬಂಧ ಕಳೆದುಕೊಳ್ಳುತ್ತಿದ್ದಾರೆ. ದೂರುಗಳು, ಅನುಮಾನಗಳು, ಅಸಹನೆ, ಹಗೆತನ ಮತ್ತು ಭೌತಿಕತೆಯ ವಾತಾವರಣ ಹೆಚ್ಚುತ್ತಲೇ ಇದೆ.
ಈ ಅಭಿಯನದ ಸಂದರ್ಭದಲ್ಲಿ ವ್ಯಾಪಕ ಮಟ್ಟದಲ್ಲಿ ಕಾರ್ಯಕ್ರಮಗಳು, ಉಪನ್ಯಾಸಗಳು, ವೈಯಕ್ತಿಕ ಭೇಟಿಗಳ ಮೂಲಕ ನೆರೆಹೊರೆಯವರ ಹಕ್ಕುಗಳ ಜಾಗೃತಿ ಮೂಡಿಸಲಾಗುವುದು. ಕುರ್ ಆನಿನಲ್ಲಿಯೂ ಹಾಗೂ ಪ್ರವಾದಿ ವಚಗಳಲ್ಲಿಯೂ ನೆರೆಹೊರೆಯವರ ಹಕ್ಕುಗಳ ಬಗ್ಗೆ ಅತಿ ಹೆಚ್ಚು ಒತ್ತು ನೀಡಲಾಗಿದೆ. ನೆರೆಹೊರೆಯವರಲ್ಲಿ ನಮ್ಮ ಬಂಧುಗಳು, ಮುಸ್ಲಿಮರು ಹಾಗೂ ಇತರ ಧರ್ಮೀಯರೂ ಸೇರಿದ್ದಾರೆ.
ನಮ್ಮ ಬಡಾವಣೆ, ಗ್ರಾಮ ಹಾಗೂ ನಗರಗಳಲ್ಲಿ ಈ ವಿಷಯದ ಅರಿವು ಮೂಡಿಸಲು ಪ್ರಯತ್ನ ಮಾಡಬೇಕಾಗಿದೆ. ಈ ಅಭಿಯಾನದ ಉದ್ದೇಶ, ಇಸ್ಲಾಮೋಫೋಬಿಯಾದ ವಿರುದ್ಧವಾಗಿ ಪ್ರೀತಿ, ಸಹಾನುಭೂತಿ ಮತ್ತು ಹಕ್ಕುಗಳ ಪಾಲನೆ ಎಂಬ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತುವುದಾಗಿದೆ.
ನಾವೆಲ್ಲರೂ ಈ ಅಭಿಯಾನದಲ್ಲಿ ಪಾಲ್ಗೊಂಡು, ನೆರೆಹೊರೆಯವರ ಹಕ್ಕುಗಳನ್ನು ತಿಳಿದು, ಅವುಗಳನ್ನು ಪಾಲನೆ ಮಾಡಿ, ಯಶಸ್ವಿ ಮತ್ತು ಸಂತೋಷಭರಿತ ಸಮಾಜ ನಿರ್ಮಿಸೋಣ ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾದ್ಯಕ್ಷರಾದ ಡಾ. ಮೊಹಮ್ಮದ್ ಸಾದ್ ಬೆಳಗಾವಿ ಕರೆ ನೀಡಿದ್ದಾರೆ.












