ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ ಜಾಮಿಅ ಮಿಲ್ಲಿಯ

0
482

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ. 16: ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮನೆಗೆ ಮರಳಬೇಕು ಎಂಬ ವಿಷಯ ನಮ್ಮ ಪರಿಶೀಲಿನೆಯಲ್ಲಿದೆ ಎಂದು ಜಾಮೀಅ ಮಿಲಿಯ ಇಸ್ಲಾಮಿಯ ವಿಶ್ವವಿದ್ಯಾನಿಲಯ ತಿಳಿಸಿದೆ. ನಗರದಲ್ಲಿ ವೈರಸ್ ಭೀತಿ ಇದೆ. ಜಾಮಿಅ ಲೈಬ್ರರಿ, ಮೆಸ್, ಕ್ಯಾಂಟೀನ್‍ಗಳು ಹೀಗೆ ಒಟ್ಟು ಸೇರುವ ಸ್ಥಳಗಳನ್ನು ಮುಚ್ಚುವ ಸಾಧ್ಯತೆ ಸದ್ಯ ತಲೆದೋರಿದೆ. ವಿದ್ಯಾರ್ಥಿಗಳು ಈ ವಿಷಯದ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕೆಂದು ವಿಶ್ವವಿದ್ಯಾನಿಲಯ ತಿಳಿಸಿದೆ.

ಬಹುತೇಕ ವಿಶ್ವವಿದ್ಯಾನಿಲಯಗಳು ಮುನ್ನೆಚ್ಚರಿಕೆಯ ಭಾಗವಾಗಿ ಮುಚ್ಚಿಕೊಂಡಿವೆ. ಈಗ ಅಪಾಯಕಾರಿ ಅವಸ್ಥೆಯಿದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವನ್ನು ನಮಗೂ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತಿದೆ. ಆದರೆ ಅಷ್ಟು ಸುಲಭದ ವಿಚಾರವೂ ಅದಲ್ಲ. ಮನೆಗೆ ಹೋಗುವಾಗ ವಿದ್ಯಾರ್ಥಿಗಳು ಅವರ ಕೋಣೆಗಳನ್ನು ಮುಚ್ಚಿದ ಬಳಿಕ ವಾರ್ಡನ್‍ಗೆ ವಿಷಯ ತಿಳಿಸಬೇಕೆಂದು ವಿಶ್ವವಿದ್ಯಾನಿಲಯ ತಿಳಿಸಿದೆ.