ಜಪಾನ್ ಸೌಹಾರ್ದಕ್ಕೆ ಹೆಸರಾದ ಒಲಿಂಪಿಕ್ಸ್ ಸಂಚಾರಿ ಮಸೀದಿ

0
845

ಟೋಕಿಯೊ: ಜಪಾನ್‍ನಲ್ಲಿ ನಡೆಯಲಿರುವ 2020ರ ಒಲಿಂಪಿಕ್ಸ್ ಗೆ ಮುಂಚಿತವಾಗಿ ಮೂಲಭೂತ ಸೌಕರ್ಯಗಳನ್ನು ಏರ್ಪಡಿಸುವ ಗಡಿಬಿಡಿಯಲ್ಲಿದೆ ಜಪಾನ್. ಇದರ ಭಾಗವಾಗಿ ಸಂಚರಿಸುವ ಮಸೀದಿ (Mobile Masjid) ನಿರ್ಮಾಣ ಮಾಡಿ ಸುದ್ದಿಯಲ್ಲಿದೆ. ಬಿಳಿ- ನೀಲಿ ಬಣ್ಣದ ಟ್ರಕ್ಕನ್ನು ಒಂದು ಮಸೀದಿಯಾಗಿ ಜಪಾನ್ ಪರಿವರ್ತಿಸಿದೆ. ಒಲಿಂಪಿಕ್ಸ್ ಗೆ ಬರುವವರಿಗೆ ಪ್ರಾರ್ಥನೆಗೆ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಅದು ಟ್ರಕ್‍ನ್ನು ಮಸೀದಿಯನ್ನಾಗಿಸಿದೆ. ಹೀಗೆ ಸಂಚರಿಸುವ ಮಸೀದಿ ಅಸ್ತಿತ್ವಕ್ಕೆ ಬಂದಿದೆ.
ಒಂದೇ ಸಮಯದಲ್ಲಿ ಒಂಬತ್ತು ಮಂದಿಗೆ ನಮಾಝ್‍ಗೆ ಅವಕಾಶ ಇರುವ ಸಂಚರಿಸುವ ಮಸೀದಿಯನ್ನು ಜಪಾನ್ ಸಿದ್ಧಪಡಿಸುತ್ತಿದೆ. ಯಸು ಪ್ರೊಜಕ್ಟ್ ಎಂಬ ಕಂಪೆನಿಯು ಈ ಸಂಚರಿಸುವ ಮಸೀದಿ ನಿರ್ಮಾಣ ಮಾಡಿದೆ. ಒಲಿಂಪಿಕ್ಸ್ ಕಾಣಲು ಜಪಾನಿಗೆ ಬರುವ ವಿಶ್ವಾಸಿಗಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದೆನ್ನುವ ಕಾರಣದಿಂದ ಸಂಚರಿಸುವ ಮಸೀದಿಯನ್ನು ಉಪಯೋಗಿಸಬಹುದಾಗಿದೆ ಎಂದು ಕಂಪೆನಿ ಸಿಇಒ ಯಾಸುಹುರು ಇನೋನ್ ತಿಳಿಸಿದರು.
ಯೋಜನೆಯ ಅಂಗವಾಗಿ ಮೊದಲ ಮಸೀದಿಯನ್ನು ಟೋಕಿಯೊದ ಸ್ಟೇಡಿಯಂನ ಹೊರಗೆ ಉದ್ಘಾಟನೆ ನಡೆಸಲಾಗಿದೆ. ಒಲಿಂಪಿಕ್ಸ್ ಗೆ ಮೊದಲು ಇನ್ನಷ್ಟು ಸಂಚಾರಿ ಮಸೀದಿಗಳು ನಿರ್ಮಾಣವಾಗಲಿದೆ. ಒಲಿಂಪಿಕ್ಸ್ ಗೆ ಮೊದಲು ಬಹಳಷ್ಟು ಸಂಚಾರಿ ಮಸೀದಿ ನಿರ್ಮಾಣಗೊಳಿಸುವ ಸಿದ್ಧತೆಯನ್ನು ಕಂಪೆನಿ ನಡೆಸಿದೆ.