ಸನ್ಮಾರ್ಗ ಕುರ್ಆನ್ ಕ್ವಿಝ್ ಸ್ಪರ್ಧೆ- 2022
(ಸೂರಃ ಅತ್ತೌಬ ಮತ್ತು ಸೂರಃ ಯೂನುಸ್ ಅಧ್ಯಾಯಗಳಿಗೆ ಸಂಬಂಧಿಸಿದ ಪ್ರಶ್ನೆಗಳು)
ನಿಯಮಗಳು
1.ಸ್ಪರ್ಧೆಯಲ್ಲಿ ಭಾಗವಹಿಸುವವರು ಈ ಪ್ರಕಟಿತ ಹಾಳೆಗಳಲ್ಲಿ ಅಥವಾ ಪ್ರತ್ಯೇಕ ಬಿಳಿ ಹಾಳೆಗಳಲ್ಲಿ ಉತ್ತರಗಳನ್ನು ಬರೆದು ಕಳುಹಿಸಬೇಕು.
2.ನಿಮ್ಮ ಹೆಸರು, ಪೂರ್ಣ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು. ಮಕ್ಕಳ ಅಥವಾ ಇತರರ ಹೆಸರಲ್ಲಿ ಸ್ಪರ್ಧಿಸುವುದನ್ನು ಪರಿಗಣಿಸಲಾಗುವುದಿಲ್ಲ. ಉತ್ತರದ ಜೊತೆ ನಿಮ್ಮ ಪಾಸ್ಪೊರ್ಟ್ ಅಳತೆಯ ಒಂದು ಭಾವಚಿತ್ರವನ್ನು ಕಳುಹಿಸಿಕೊಡಿ.
3.ಸನ್ಮಾರ್ಗ ವೆಬ್ಸೈಟ್(www.Sanmarga.com)ನಲ್ಲೂ ಈ ಸ್ಪರ್ಧೆಯ ಪ್ರಶ್ನೆಗಳನ್ನು ಪ್ರಕಟಿಸಲಾಗಿದ್ದು, ವಾಟ್ಸ್ಅಪ್ ಮೂಲಕವೂ ಈ ಪ್ರಶ್ನೆಗಳ ವೆಬ್ ಲಿಂಕನ್ನು ಹಂಚಲಾಗುತ್ತದೆ. ಒಂದು ವೇಳೆ ರಮಝಾನ್ ವಿಶೇಷಾಂಕ ಲಭ್ಯವಾಗದವರು ಈ ಪ್ರಶ್ನೆಗಳನ್ನು ಓದಿಕೊಂಡು ಬಿಳಿ ಹಾಳೆಯಲ್ಲಿ ಉತ್ತರವನ್ನು ಬರೆದು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡಬಹುದು. ಅಥವಾ 8277373059 ಈ ಸಂಖ್ಯೆಗೆ ಉತ್ತರಗಳನ್ನು ಟೈಪ್ ಮಾಡಿ ವಾಟ್ಸ್ಅಪ್ ಮಾಡಬಹುದು. ಆದರೆ ಉತ್ತರ ಪ್ರತಿಯ ಫೋಟೋ ತೆಗೆದು ವಾಟ್ಸ್ಅಪ್ ಅಥವಾ ಈಮೇಲ್ ಮೂಲಕ ಕಳುಹಿಸಿದರೆ ಪರಿಗಣಿಸಲಾಗುವುದಿಲ್ಲ.
4.ನಿಮ್ಮ ಉತ್ತರಗಳು ಸ್ಪಷ್ಟವಾಗಿರಲಿ.
5.ಪ್ರತಿ ಉತ್ತರದ ಮುಂದೆ ಅಧ್ಯಾಯದ ಹೆಸರು ಮತ್ತು ಸೂಕ್ತಗಳ ಸಂಖ್ಯೆ ಬರೆದರೆ ಉತ್ತಮ.
6.ಪ್ರತಿ ಉತ್ತರಕ್ಕೂ ಒಂದು ಅಂಕ ನೀಡಲಾಗುವುದು.
7.ವಾಟ್ಸ್ಅಪ್ ಮೂಲಕ ಉತ್ತರಿಸುವವರು (ವಾಟ್ಸ್ಅಪ್ ಸಂಖ್ಯೆ +91 8277373059) ತಮ್ಮ ಉತ್ತರಗಳನ್ನು ಕನ್ನಡ ಲಿಪಿಯಲ್ಲಿ ಟೈಪ್ ಮಾಡಿ ಕಳುಹಿಸಬೇಕು.
8.ಉತ್ತರ ಪತ್ರಿಕೆಯಲ್ಲಿ ನಕಲು ಆಗದಂತೆ ಜಾಗ್ರತೆ ವಹಿಸಬೇಕು. ನಾವು ಸ್ಪರ್ಧಿಗಳಿಂದ ಪ್ರಾಮಾಣಿಕತೆಯನ್ನು ನಿರೀಕ್ಷಿಸುತ್ತೇವೆ. ಇದು ಕುರ್ಆನನ್ನು ಅಧ್ಯಯನ ನಡೆಸಲು ಪ್ರೇರೇಪಿಸುವುದಕ್ಕೆ ಆಯೋಜಿಸಲಾಗಿರುವ ಸ್ಪರ್ಧೆ ಯಾಗಿದ್ದು, `ನಕಲು’ ಇಡೀ ಉದ್ದೇಶವನ್ನೇ ವ್ಯರ್ಥಗೊಳಿಸಬಹುದು.
9.ಉತ್ತರ ಕಳುಹಿಸಲು ಕೊನೆಯ ದಿನಾಂಕ ಮೇ 08, 2022
10.ಅಂತಿಮ ತೀರ್ಮಾನ ತೀರ್ಪುಗಾರರದ್ದಾಗಿರುವುದು.
ವಿವರಗಳಿಗಾಗಿ ಸಂಪರ್ಕಿಸಿ: +9880096128
ಬಹುಮಾನಗಳು: ಪ್ರಥಮ – ರೂ. 5,000, ದ್ವಿತೀಯ – ರೂ. 4,000, ತೃತೀಯ – ರೂ. 3,000
[ತಲಾ 1,000 ರೂಪಾಯಿಯಂತೆ 10 ಸಮಾಧಾನಕರ ಬಹುಮಾನಗಳು]
ಉತ್ತರ ಕಳುಹಿಸಬೇಕಾದ ವಿಳಾಸ
ಸಂಚಾಲಕರು, ಸನ್ಮಾರ್ಗ ಕುರ್ಆನ್ ಸ್ಪರ್ಧೆ ವಿಭಾಗ, ಸನ್ಮಾರ್ಗ ವಾರ ಪತ್ರಿಕೆ
ಹಿದಾಯತ್ ಸೆಂಟರ್, ಬೀಬಿ ಅಲಾಬಿ ರಸ್ತೆ, ಮಂಗಳೂರು- 575001
I. ಬಿಟ್ಟ ಪದ ತುಂಬಿರಿ.
1.ನಿಮ್ಮ ಪ್ರಭುವಿನ ಕಡೆಯಿಂದ ನಿಮಗೊಂದು ಉಪದೇಶ ಬಂದಿದೆ. ಇದು_________ ಗಳೊಳಗಿನ ಕಾಯಿಲೆಗಳ ಗುಣೌಷಧವಾಗಿದೆ.
2.ವಾಸ್ತವದಲ್ಲಿ__________ ಭೂಮಿಯ ಮೇಲೆ ಪ್ರಾಬಲ್ಯ ಹೊಂದಿದವನೂ ಹದಮೀರಿದವನೂ ಆಗಿದ್ದನು.
3.ಕಪಟ ವಿಶ್ವಾಸಿಗಳು ನಿರ್ಮಿಸಿದ ಮಸೀದಿ______
4.ಹುನೈನ್ ಯುದ್ಧದ ದಿನ ಸತ್ಯ ವಿಶ್ವಾಸಿಗಳಿಗೆ ತಮ್ಮ________ ಜಂಭವಿತ್ತು.
5. ಅಲ್ಲಾಹ್ ತನಗಿಷ್ಟವಿದ್ದವರಿಗೆ _______ದ ಅನುಗ್ರಹ ನೀಡುವನು.
6.ನಿಶ್ಚಯವಾಗಿಯೂ________ ಬಹಳ ಕೋಮಲ ಹೃದಯದವರೂ ಸಹನಶೀಲರೂ ಆಗಿದ್ದರು.
7.ಒಂದು ನಾಡು ಯಾತನೆಯನ್ನು ಕಣ್ಣಾರೆ ಕಂಡ ಬಳಿಕ ವಿಶ್ವಾಸವಿಟ್ಟು ಅದರ ವಿಶ್ವಾಸವು ಫಲಕಾರಿಯಾದುದಿದೆಯೇ? ________ ರ ಜನಾಂಗದ ಹೊರತು.
8.ಅಲ್ಲಾಹನು ತನ್ನ_________ ಪರಿಪೂರ್ಣಗೊಳಿಸದೆ ಬಿಡುವವನಲ್ಲ. ಇದು ಸತ್ಯನಿಷೇಧಿಗಳಿಗೆ ಎಷ್ಟೇ ಅಪ್ರಿಯವಾಗಲಿ.
9.ಓ ಪೈಗಂಬರರೇ, ನೀವು ಅವರ ಸಂಪತ್ತುಗಳಿಂದ `ದಾನಧರ್ಮ’ಗಳನ್ನು ಪಡೆದು ಅದನ್ನು________
10.ಅಲ್ಲಾಹ್ ________ರ ಸೇವಾಫಲವನ್ನು ನಿರರ್ಥಕಗೊಳಿಸುವುದಿಲ್ಲ.
11.ಒಂದು ಸಮುದಾಯದ ಬಳಿಗೆ ಅದರ_______ ಬಂದಾಗ ಅದರ ತೀರ್ಮಾನವನ್ನು ನ್ಯಾಯಪೂರ್ಣವಾಗಿ ಮಾಡಿಬಿಡಲಾಗುತ್ತದೆ.
12._______ ಎಂಬುದು ಸತ್ಯ ನಿಷೇಧದಲ್ಲಿ ಇನ್ನೊಂದು ಹೆಚ್ಚಳ.
13. ಇಬ್ರಾಹೀಮರು ತಮ್ಮ ಪಿತನಿಗಾಗಿ ಪ್ರಾರ್ಥಿಸಿದ್ದುದು ಅವರು ತಮ್ಮ ಪಿತನೊಂದಿಗೆ ಮಾಡಿದ _______ ಕಾರಣದಿಂದಾಗಿತ್ತು.
14. ನಿಶ್ಚಯವಾಗಿಯೂ ಒಡೆಯ ಅಲ್ಲಾಹನೇ ಆಗಿರುತ್ತಾನೆ. ನೀವು ಕಾಯುತ್ತಿರಿ, ನಾನೂ ನಿಮ್ಮೊಂದಿಗೆ ಕಾದುಕೊಂಡಿರುತ್ತೇನೆ.
15. ನಿಶ್ಚಯವಾಗಿಯೂ ಅಲ್ಲಾಹನು _______ ಸೃಷ್ಟಿಸಿದಂದಿನಿಂದಲೂ ಅಲ್ಲಾಹನ ಲಿಖಿತದಲ್ಲಿ ತಿಂಗಳುಗಳ ಸಂಖ್ಯೆ ಹನ್ನೆರಡೇ ಇದೆ.
II. ಬಿಟ್ಟ ಪದಗಳನ್ನು ತುಂಬಿರಿ.
1.ನಿಮ್ಮ_________ ಮತ್ತು_______ ಗಳಿಂದಲೂ ಅಲ್ಲಾಹನ ಮಾರ್ಗದಲ್ಲಿ ಹೋರಾಟ ನಡೆಸಿರಿ. ನೀವು ಅರಿತಿದ್ದರೆ ಇದು ನಿಮಗೆ ಉತ್ತಮ.
2._______ ದೇವಪುತ್ರನೆಂದು ಯಹೂದಿಯರು ಹೇಳುತ್ತಾರೆ. _______ ದೇವಪುತ್ರನೆಂದು ಕ್ರೈಸ್ತರು ಹೇಳುತ್ತಾರೆ.
3.ಅಲ್ಲಾಹನನ್ನು ಬಿಟ್ಟು ನಿಮಗೆ _______ _______ವನ್ನಾಗಲಿ ಉಂಟು ಮಾಡಲು ಸಮರ್ಥರಲ್ಲದ ಯಾವುದೇ ಅಸ್ತಿತ್ವವನ್ನು ಪ್ರಾರ್ಥಿಸಬೇಡಿರಿ.
4.ಈಮಾನಿನ ಕರೆಗೆ ಓಗೊಡುವುದರಲ್ಲಿ ಮೊದಲಿಗರಾದ ________ ಮತ್ತು_______ರೊಂದಿಗೂ ಅನಂತರ ಸತ್ಯಸಂಧತೆಯೊಂದಿಗೆ ಅವರನ್ನು ಹಿಂಬಾಲಿಸಿದವರೊಂದಿಗೂ ಅಲ್ಲಾಹನು ಪ್ರಸನ್ನನಾದನು.
5._______ ಮತ್ತು _______ ನ್ನು ಸಂಗ್ರಹಿಸಿಟ್ಟು ಅವುಗಳನ್ನು ದೇವಮಾರ್ಗದಲ್ಲಿ ಖರ್ಚು ಮಾಡದವರಿಗೆ ವೇದನಾಯುಕ್ತ ಯಾತನೆಯ ಸುವಾರ್ತೆ ನೀಡಿರಿ.
6.ನಿಶ್ಚಯವಾಗಿಯೂ ಅಲ್ಲಾಹನ ಮಿತ್ರರಾಗಿರುವವರಿಗೆ ಯಾವತ್ತು_______ ಮತ್ತು _______ ಸಂಭವವೇ ಇಲ್ಲ.
7.ಅವರು ನಿಮ್ಮನ್ನು ಮೆಚ್ಚಿಸಲಿಕ್ಕಾಗಿ ಅಲ್ಲಾನಾಣೆ ಹಾಕುತ್ತಾರೆ. ವಸ್ತುತಃ ಅವರು ಸತ್ಯವಿಶ್ವಾಸಿಗಳಾಗಿದ್ದರೆ ಮೆಚ್ಚಿಸಲು ________ ಮತ್ತು _______ಹೆಚ್ಚು ಅರ್ಹರಾಗಿರುತ್ತಾರೆ.
8.ನೀವು ಪ್ರಶಾಂತಿಯನ್ನು ಪಡೆಯಲಾಗುವಂತೆ ನಿಮಗಾಗಿ ________ಯನ್ನು ಮಾಡಿದವನೂ ಪ್ರಕಾಶಮಾನವಾಗಿ _______ ಮಾಡಿದವನೂ ಅಲ್ಲಾಹನೇ ಆಗಿರುತ್ತಾರೆ.
9.ನಿಜವಾಗಿ ಇದು (ಕುರ್ ಆನ್) ಹಿಂದೆ ಬಂದಿದ್ದುದರ________ ಪರಮ ಗ್ರಂಥದ ವಿವರಣೆಯೂ ಆಗಿರುತ್ತದೆ. ಇದು_______ ಕಡೆಯಿಂದ ಬಂದಿರುವುದು ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ.
10.ನನಗೆ ಅಲ್ಲಾಹನೇ ಸಾಕು.ಅವನ ಹೊರತು ಅನ್ಯ ಆರಾಧ್ಯನಿಲ್ಲ. ನಾನು ಅವನ ಮೇಲೆಯೇ______ ಮತ್ತು ಅವನು ______ದ ಮಾಲಿಕನಾಗಿರುತ್ತಾನೆ.
11.ಬದುಕು ಸಾವುಗಳು ಅವನ (ಅಲ್ಲಾಹನ) ಅಧಿಕಾರದಲ್ಲಿವೆ. ಅವನಲ್ಲದೆ ನಿಮಗಾರೂ________ ನಾಗಲಿ ______ನಾಗಲಿ ಇಲ್ಲ.
12.ನಾವು________ ಮತ್ತು______ ರನ್ನು ನಮ್ಮ ನಿದರ್ಶನಗಳ ಸಹಿತ ಫಿರ್ ಔನ್ ಮತ್ತು ಅವನ ಸರದಾರರ ಕಡೆಗೆ ಕಳುಹಿಸಿದೆವು.
13.ವಾಸ್ತವದಲ್ಲಿ ಅಲ್ಲಾಹನು ಸತ್ಯವಿಶ್ವಾಸಿಗಳಿಂದ ಅವರ_______ _________ ಗಳನ್ನು ಸ್ವರ್ಗದ ಬದಲಿಗೆ ಖರೀದಿ ಮಾಡಿರುತ್ತಾನೆ.
14.ಅಲ್ಲಾಹನು ತನ್ನ ದಾಸರ_______ ಸ್ವೀಕರಿಸುವವನೂ ಅವರ ________ ಗಳಿಗೆ ಸ್ವೀಕಾರ ನೀಡುವವನೂ ಅತ್ಯಧಿಕ ಕ್ಷಮಿಸುವವನೂ ಕರುಣಾನಿಧಿಯೂ ಆಗಿರುತ್ತಾನೆಂದು ಅವರಿಗೆ ತಿಳಿದಿಲ್ಲವೇ?
15.ಇಬಾದತ್ ಎಂಬ ಪದದ ಅರ್ಥ ಆರಾಧನೆ, ________ ಮತ್ತು _______
III. ಯಾವ ಸಂದರ್ಭದಲ್ಲಿ ಹೀಗೆ ಹೇಳಲಾಗಿದೆ ಎಂಬುದನ್ನು ತಿಳಿಸಿ
1.ನೀವು ಬೆನ್ನು ತಿರುಗಿಸಿ ಓಡಿದಿರಿ. ಅನಂತರ ಅಲ್ಲಾಹನು ತನ್ನ ಪ್ರಶಾಂತತೆಯನ್ನು ತನ್ನ ರಸೂಲರ ಮೇಲೂ ಸತ್ಯವಿಶ್ವಾಸಿಗಳ ಮೇಲೂ ಇಳಿಸಿದನು ಮತ್ತು ನಿಮಗೆ ಕಾಣದಂತಹ ಸೈನ್ಯವನ್ನು ಇಳಿಸಿ ಸತ್ಯನಿಷೇಧಿಗಳನ್ನು ಶಿಕ್ಷಿಸಿದನು.
2.”ನಮಗೆ ಹೊರಡಲು ಸಾಧ್ಯವಾಗುತ್ತಿದ್ದರೆ ಖಂಡಿತವಾಗಿಯೂ ನಿಮ್ಮೊಂದಿಗೆ ಬರುತ್ತಿದ್ದೆವು.”
3.”ಬನೀ ಇಸ್ರಾಈಲರು ವಿಶ್ವಾಸವಿಟ್ಟಿರುವ ದೇವನ ಹೊರತು ಅನ್ಯ ದೇವನಿಲ್ಲವೆಂದು ನಾನು ಒಪ್ಪಿಕೊಂಡೆನು ಮತ್ತು ನಾನೂ ಶರಣಾಗುವವರಲ್ಲಾಗಿರುತ್ತೇನೆ.” ಯೂನುಸ್: 90
IV. ಅಡಿಗೆರೆ ಹಾಕಿದ ಪದದ ಉದ್ದೇಶ ಅಥವಾ ವಿವರವನ್ನು ತಿಳಿಸಿ.
1.ಓ ಸತ್ಯವಿಶ್ವಾಸಿಗಳೇ, ಬಹುದೇವವಿಶ್ವಾಸಿಗಳು ಅಶುದ್ಧ ರಾಗಿರುತ್ತಾರೆ.
2.ತನ್ನ ರಸೂಲರನ್ನು ಸನ್ಮಾರ್ಗ ಮತ್ತು ಸತ್ಯಧರ್ಮದೊಂದಿಗೆ ಕಳುಹಿಸಿದಾತನು ಅಲ್ಲಾಹನೇ. (ಇದು) ಅದನ್ನು ಸಕಲ ಧರ್ಮಗಳ ಮೇಲೆ ಉತ್ಥಾನಗೊಳಿಸಲಿಕ್ಕಾಗಿ.
3.ನಾವು ಬನೀ ಇಸ್ರಾಈಲರಿಗೆ ಅತ್ಯುತ್ತಮ ವಾಸಸ್ಥಾನ ನೀಡಿದೆವು.
4.ಪ್ರಕರಣವು ಮುಂದೂಡಲಾಗಿದ್ದ ಆ ಮೂವರನ್ನೂ ಅವನು ಕ್ಷಮಿಸಿದನು.
5.ಅವರೊಡನೆ ಹೇಳಿರಿ- ನೀವು ನಮ್ಮ ವಿಷಯದಲ್ಲಿ ಪ್ರತೀಕ್ಷಿಸುತ್ತಿರುವುದು ಎರಡು ಒಳಿತುಗಳ ಪೈಕಿ ಒಂದಲ್ಲದೆ ಇನ್ನೇನು?
6.ಓ ಪೈಗಂಬರರೇ, ಅವರಲ್ಲಿ ಕೆಲವರು ಸದಕಾತ್ನ ವಿತರಣಾ ಕಾರ್ಯದ ಬಗ್ಗೆ ನಿಮ್ಮನ್ನು ಆಕ್ಷೇಪಿಸುತ್ತಾರೆ.
7.ಇವರಿಗೆ ಇವರ ಪೂರ್ವಿಕರ ಇತಿಹಾಸವು ತಲುಪಲಿಲ್ಲವೇ? ನೂಹರ ಜನಾಂಗ, ಆದ್, ಸಮೂದ್, ಇಬ್ರಾಹೀಮರಜನಾಂಗ, ಮದ್ ಯನ್ ನವರು ಮತ್ತು ಬುಡಮೇಲುಗೊಳಿಸಲ್ಪಟ್ಟ ಆ ನಾಡುಗಳು.
8.ಅವರ ಹೃದಯಗಳಲ್ಲಿ ಸಂಶಯವಿದೆ. ಅವರು ತಮ್ಮ ಸಂಶಯಗಳಲ್ಲೇ ತಲ್ಲಣಗೊಳ್ಳುತ್ತಿದ್ದಾರೆ.
V. ಯಾರು ಯಾರೊಂದಿಗೆ ಹೇಳಿದರು?
1.ನೀವು ಪರಲೋಕಕ್ಕೆ ಪ್ರತಿಯಾಗಿ ಐಹಿಕ ಜೀವನವನ್ನು ಮೆಚ್ಚಿಕೊಂಡಿರಾ?
2.”ಖೇದಗೊಳ್ಳಬೇಡಿರಿ. ಅಲ್ಲಾಹನು ನಮ್ಮ ಜತೆಯಲ್ಲಿದ್ದಾನೆ.”
3.”ನೀವು ನನ್ನ ಉಪದೇಶವನ್ನು ತಿರಸ್ಕರಿಸಿದರೆ (ನನಗೆ ನಷ್ಟವೇನು?)ನಾನಂತು ನಿಮ್ಮಿಂದ ಯಾವತ್ತು ಪ್ರತಿಫಲಾಪೇಕ್ಷಕನಾಗಿರಲಿಲ್ಲ.ನನ್ನ ಪ್ರತಿಫಲವಂತು ಅಲ್ಲಾಹನ ಬಳಿಯಲ್ಲಿದೆ.”
4.”ನಿಮ್ಮ ಮುಂದೆ ಸತ್ಯವು ಪ್ರತ್ಯಕ್ಷಗೊಂಡಾಗ ಅದನ್ನು ಹೀಗೆನ್ನುತ್ತೀರಾ? ಇದು ಮಾಟವೇ? ವಸ್ತುತಃ ಮಾಟಗಾರರು ಯಶಸ್ವಿಯಾಗುವುದಿಲ್ಲ.”
VI. ಈ ಮಾತನ್ನು ಯಾರು ಹೇಳಿದರು?
1.”ಇದರ ಬದಲಿಗೆ ಇನ್ನೊಂದು ಕುರ್ಆನನ್ನು ತನ್ನಿರಿ, ಇಲ್ಲವೆ ಇದರಲ್ಲಿ ಸ್ವಲ್ಪ ತಿದ್ದುಪಡಿ ಮಾಡಿರಿ.”
2.”ಅವರು ವೇದನಾಯುಕ್ತ ಯಾತನೆಯನ್ನು ಕಣ್ಣಾರೆ ಕಾಣುವವರೆಗೂ ವಿಶ್ವಾಸವಿರಿಸದಂತೆ ಅವರ ಹೃದಯಗಳ ಮೇಲೆ ಮುದ್ರೆಯೊತ್ತಿಬಿಡು.”
3.”ಸರ್ವ ಸ್ತುತಿ ಸ್ತೋತ್ರಗಳೂ ಸಕಲ ಲೋಕಗಳ ಪ್ರಭುವಾದ ಅಲ್ಲಾಹನಿಗೇ.”
VII. ಅರಬಿ ಪದ ಬರೆಯಿರಿ.
1.ಇಸ್ಲಾಮೀ ರಾಷ್ಟ್ರದಲ್ಲಿ ಮುಸ್ಲಿಮೇತ ಪ್ರಜೆಗಳಿಗೆ ನೀಡುವ ಅಭಯ ಮತ್ತು ರಕ್ಷಣೆಗಾಗಿ ವಸೂಲು ಮಾಡುವ ತೆರಿಗೆ
2.ಜೀವನಾವಶ್ಯಕತೆಗಳ ಈಡೇರಿಕೆಗೆ ಅನ್ಯರ ನೆರವನ್ನು ಅವಲಂಬಿಸಿರುವವ
3.ತಮ್ಮ ಅವಶ್ಯಕ ಬೇಡಿಕೆಗಳನ್ನು ಈಡೇರಿಸುವ ಸಾಮರ್ಥ್ಯವಿಲ್ಲದೆ ಬಹಳ ಸಂಕಷ್ಟದಲ್ಲಿದ್ದರೂ ಸ್ವಾಭಿಮಾನದಿಂದ ಇತರರ ಮುಂದೆ ಕೈ ಚಾಚದವರು
4.ದುಲ್ ಹಜ್ಜ್ ತಿಂಗಳ ನಿರ್ದಿಷ್ಟ ದಿನಾಂಕಗಳಲ್ಲಿ ಮಾಡುವ ಹಜ್ಜ್ ಕರ್ಮ
5.ತಮ್ಮ ಸ್ವಾರ್ಥ ಹಿತಸಾಧನೆಗಾಗಿ ಯಾವುದಕ್ಕೂ ಹಿಂಜರಿಯದವರು
VIII. ಉತ್ತರಿಸಿರಿ.
1.ಅಲ್ಲಾಹನ ಮಸೀದಿಯನ್ನು ನೆಲೆಗೊಳಿಸುವವರ ಗುಣವಿಶೇಷತೆಗಳು ಯಾವುವು?
2.ನಾಲ್ಕು ಪ್ರತಿಷ್ಟಿತ ತಿಂಗಳುಗಳು ಯಾವುವು?
3.ಇನ್ನು ಮುಂದೆ ಅವರಲ್ಲಿ ಯಾರಾದರೂ ಮರಣ ಹೊಂದಿದರೆ ಅವನ ಜನಾಝ ನಮಾಝನ್ನು ನೀವು ಎಷ್ಟು ಮಾತ್ರಕ್ಕೂ ನಿರ್ವಹಿಸಬಾರದು. -ಯಾರು ಮರಣ ಹೊಂದಿದಾಗ ಅವತೀರ್ಣಗೊಂಡ ಸೂಕ್ತ ಇದು?
4.ಓರ್ವ ಸತ್ಯವಿಶ್ವಾಸಿಯ ಜಯಾಪಜಯಗಳ ಮಾನದಂಡ ಯಾವುದು?
5.”ಓ ನಮ್ಮ ಪ್ರಭೂ, ನಮ್ಮನ್ನು ಅಕ್ರಮಿಗಳಿಗೆ ಪರೀಕ್ಷಾ ಸಾಧನವನ್ನಾಗಿ ಮಾಡದಿರು ಮತ್ತು ನಿನ್ನ ಕೃಪೆಯಿಂದ ನಮ್ಮನ್ನು ಸತ್ಯನಿಷೇಧಿಗಳಿಂದ ರಕ್ಷಿಸು.” – ಇದು ಯಾರು ಪ್ರಾರ್ಥಿಸಿದ ಪ್ರಾರ್ಥನೆ?
6.ಕಪಟ ವಿಶ್ವಾಸಿಗಳಿಗೆ ತಬೂಕ್ ನ ಪ್ರಯಾಣವು ಕಷ್ಟವೆಂದು ತೋರಲು ಕಾರಣವೇನು?
7.ಸೂರ ಅತ್ತೌಬದಲ್ಲಿ ವಿವರಿಸಲಾದ ಕಪಟ ವಿಶ್ವಾಸಿಗಳ ಕೆಲವು ಗುಣಗಳನ್ನು ಬರೆಯಿರಿ.
8.ಫಿರ್ಔನ್ ಮತ್ತು ಅವನ ಸರದಾರರು ತಮ್ಮ ಹಿರಿಮೆಯ ದರ್ಪವನ್ನು ತೋರಲು ಕಾರಣವೇನು?
9.ಅಲ್ಲಾಹನೊಂದಿಗೆ ತಮ್ಮ ವ್ಯವಹಾರವನ್ನು ಪೂರ್ತಿಗೊಳಿಸಿಕೊಂಡ ಸತ್ಯ ವಿಶ್ವಾಸಿಗಳ ಗುಣ ವೈಶಿಷ್ಟ್ಯತೆಗಳು ಯಾವುವು?
10.ಝಕಾತ್ ಪಡೆಯಲು ಅರ್ಹರಾದ ಎಂಟು ವಿಭಾಗದವರು ಯಾರು?
11.ತಬೂಕ್ ಯುದ್ಧದಲ್ಲಿ ಮುಸ್ಲಿಮರು ಹೇಗೆ ವಿಜಯ ಗಳಿಸಿದರು?
IX. ಹೊಂದಿಸಿ ಬರೆಯಿರಿ.
1. ಹಲೀಮ್ – ದೈನ್ಯತೆ, ದುರ್ಗತಿ
2. ಅತ್ತಾಇಬೂನ್ – ಧರ್ಮ ಭ್ರಷ್ಟ
3. ನಸೀ – ಮನವೊಲಿಸುವುದು
4. ಮುರ್ತದ್ದ್ – ಅಲ್ಲಾಹನೆಡೆಗೆ ಪದೇ ಪದೇ
ಮರಳುವವರು
5. ಮಸ್ಕನತ್ – ಆತ್ಮ ನಿಯಂತ್ರಣವಿರುವವನು
6. ತಅ’ಲೀಫುಲ್ ಕಲ್ಬ್ – ಯುದ್ಧ ನಿಷಿದ್ಧ ತಿಂಗಳಲ್ಲಿ ಬದಲಾವಣೆ












