ಸ್ವಾತಂತ್ರ್ಯದ ಅಮೃತ ಮಹೋತ್ಸವ: ಜಮಾಅತೆ ಇಸ್ಲಾಮೀ ಕಾಪು ವತಿಯಿಂದ ಉಚಿತ ಹಿಜಾಮ ಶಿಬಿರ

0
314

ಸನ್ಮಾರ್ಗ ವಾರ್ತೆ

ಕಾಪು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಜಮಾಅತೆ ಇಸ್ಲಾಮಿ ಕಾಪು ವರ್ತುಲದ ವತಿಯಿಂದ ಬೆಳಪು ಮಸ್ಜಿದ್ ಎ ತೈಬಾದಲ್ಲಿ ಉಚಿತ ಹಿಜಾಮ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅನ್ವರ್ ಅಲಿ ಕಾಪು‌ ಅವರು,
“ಸೃಷ್ಟಿಕರ್ತನು ಮಾನವನನ್ನು ಭೂಮಿಯ ಮೇಲೆ ತನ್ನ ಪ್ರತಿನಿಧಿಯಾಗಿ ಕಳುಹಿಸಿ, ಕೆಡುಕನ್ನು ಅಳಿಸಿ ಒಳಿತನ್ನು ಸ್ಥಾಪಿಸಲು ಆದೇಶಿಸಿ, ಸ್ವಸ್ತ, ಸುಂದರ, ಆರೋಗ್ಯಪೂರ್ಣ ಸಮಾಜ ನಿರ್ಮಿಸಿ ರೋಗ ರುಜಿನ ಪೀಡಿತರ ಸೇವೆಗಯ್ಯಲು ತಿಳಿಸಿರುವನು. ನಿಮ್ಮಲ್ಲಿರುವ ಸಂಪತ್ತನ್ನು ಸ್ರಷ್ಟಿಕರ್ತನ ಸಂಪ್ರೀತಿ ಗಳಿಸಲು ಬಡವರ ಉದ್ದಾರಕ್ಕೆ ಬಳಸಿದರೆ ಅದು ದೇವ ಮಾರ್ಗದಲ್ಲಿ ಬಳಸಿದಂತೆ” ಎಂದರು.

ಹಿಜಾಮ ಚಿಕಿತ್ಸೆ ನೀಡಲು ಬಂದ ಆಯುಷ್ ಸರಕಾರಿ ಆಸ್ಪತ್ರೆ ಉಡುಪಿಯ ವೈದ್ಯಾಧಿಕಾರಿಯಾದ ಡಾಕ್ಟರ್ ರುಕ್ಸಾರ್ ಅಂಜುಮ್ ರವರು, ಈ ಚಿಕಿತ್ಸೆಯಿಂದ ಹಲವಾರು ಕಾಯಿಲೆಗಳು ಶಸ್ತ್ರಚಿಕಿತ್ಸೆ, ಮಾತ್ರೆ, ಔಷಧಿ ಸೇವಿಸದೆ ಗುಣ ಪಡಿಸಬಹುದಾಗಿದೆ ಅಲ್ಲದೇ ಇನ್ನೂ ಹಲವಾರು ಪ್ರಯೋಜನಗಳೂ ಇವೆ ಎಂದು ತಿಳಿಸಿದರು. ಮಸೀದಿಯ ಗುರುಗಳಾದ, ಮೌಲಾನಾ ಮುಹಮ್ಮದ್ ಫಾರೂಕ್ ರವರ ಕುರ್‌ಆನ್ ಪಠಣದೊಂದಿಗೆ ಕಾರ್ಯಕ್ರಮ ಪ್ರಾರಂಭ ಆಯಿತು. ಮುಹಮ್ಮದ್ ಇಕ್ಬಾಲ್ ಸಾಹೇಬ್ ಸ್ವಾಗತಿಸಿದರು.

ಇಬ್ರಾಹೀಮ್ ಸಯೀದ್ ಉಮರಿಯವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ನೀಡಿದರು. 61 ಮಹಿಳೆಯರು 53 ಪುರುಷರು ಶಿಬಿರದಲ್ಲಿ ಹಿಜಾಮ ಚಿಕಿತ್ಸೆಯ ಪ್ರಯೋಜನ ಪಡೆದರು. ವೇದಿಕೆಯಲ್ಲಿ ರಫೀಕ್ ಖಾನ್, ಮುಸ್ತಾಕ್ ಇಬ್ರಾಹೀಮ್ ಉಪಸ್ಥಿತರಿದ್ದರು. ಶೇಹೆನಾಜ್, ಬೀಬಿ ಬತುಲ್, ಸಕ್ಲೇನ್ ಪಾಷ, ಅಬ್ದುಲ್ ಅಹದ್, ಸರ್ಫರಾಜ್ ಸಹಕರಿಸಿದರು.