ಖ್ಯಾತ ಇಸ್ಲಾಮೀ ವಿದ್ವಾಂಸ, ಜಮಾಅತೆ ಇಸ್ಲಾಮಿ ಹಿಂದ್ ಕೇಂದ್ರ ಸಲಹಾ ಸಮಿತಿ ಸದಸ್ಯ ಯೂಸುಫ್ ಇಸ್ಲಾಹಿ ನಿಧನ

0
153

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಖ್ಯಾತ ಇಸ್ಲಾಮೀ ವಿದ್ವಾಂಸ, ಲೇಖಕ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ಹಿರಿಯ ನಾಯಕ ಮೌಲಾನಾ ಮುಹಮ್ಮದ್ ಯೂಸುಫ್ ಇಸ್ಲಾಹಿ ಅವರು ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಉತ್ತರ ಪ್ರದೇಶದವರಾದ ಮೌಲಾನಾ ಯೂಸುಫ್ ಇಸ್ಲಾಹಿಯವರು ಧಾರ್ಮಿಕ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾಗಿ, ಉಪನ್ಯಾಸಕರಾಗಿ, ಹಲವಾರು ಮಹತ್ವದ ಇಸ್ಲಾಮಿ ಪುಸ್ತಕಗಳ ಲೇಖಕರಾಗಿ, ಧಾರ್ಮಿಕ ಆಂದೋಲನದ ನಾಯಕರಾಗಿ ಅಂತರ್ ರಾಷ್ಟ್ರೀಯ ಖ್ಯಾತಿ ಗಳಿಸಿದ್ದರು. ಅವರ ಅದಾಚೆ ಝಿಂದಗಿ (ಇಸ್ಲಾಮಿ ಶಿಷ್ಟಾಚಾರಗಳು) ಹಾಗೂ ಕುರ್ ಆನಿ ತಾಲೀಮಾತ್ (ಕುರ್ ಆನ್ ನ ಆಯ್ದ ಸೂಕ್ತಗಳು) ಕೃತಿಗಳು ಲಕ್ಷಾಂತರ ಪ್ರತಿಗಳ ಮುದ್ರಣ ಕಂಡು ದೇಶ ವಿದೇಶಗಳಲ್ಲಿ ಜನರನ್ನು ತಲುಪಿದೆ.

ಮೌಲಾನಾ ಅವರು ಪ್ರತಿಷ್ಠಿತ ಜಮೀಯ್ಯತು ಸಾಲಿಹಾತ್ ಮಹಿಳೆಯರ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾಗಿ, ಉರ್ದು ನಿಯತಕಾಲಿಕ ಶ್ರದ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ಅನೇಕ ಇಸ್ಲಾಮಿ ಗೃಂಥಗಳ ಲೇಖಕರು. ಭಾರತದ ಹೆಚ್ಚಿನ ಎಲ್ಲಾ ಭಾಷೆಗಳಿಗೆ ಮತ್ತು ವಿಶ್ವದ ಅನೇಕ ಭಾಷೆಗಳಿಗೆ ಅವರು ಕೃತಿಗಳು ಅನುವಾದಗೊಂಡಿವೆ.

“ಇಸ್ಲಾಮಿ ಸರ್ಕಲ್ ನಾರ್ತ್‌ ಅಮೇರಿಕಾ(ICNA)” ಇದರ ಗೌರವ ಸಲಹೆಗಾರರು.

▪️ ಇಸ್ಲಾಮಿನ ಬಗ್ಗೆ ಜಗತ್ತಿನಾದ್ಯಂತ ನೀಡಿದ ಉಪನ್ಯಾಸಗಳು ಸಾವಿರಾರು.

▪️ ಮಹಿಳೆಯರ ಇಸ್ಲಾಮಿ ಉನ್ನತ ಶಿಕ್ಷಣ ಸಂಸ್ಥೆ “ಜಾಮಿಅ ಸಾಲಿಹಾತ್, ರಾಂಪುರ”(ಉತ್ತರ ಪ್ರದೇಶ) ಇದರ ರೆಕ್ಟರ್.

▪️ “ಮರ್ಕಝಿ ದರ್ಸ್’ಗಾಹ್ ಎ ಇಸ್ಲಾಮಿ,ರಾಂಪುರ” (ಉತ್ತರ ಪ್ರದೇಶ) ಇದರ ಮುಖ್ಯಸ್ಥರು.

▪️ ಭಾರತದಾದ್ಯಂತ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಲ್ಲಿ ಸಮುದಾಯಕ್ಕೆ ಪ್ರೇರಣೆ ನೀಡಿ ಮಾರ್ಗದರ್ಶನ ನೀಡಿದ ವ್ಯಕ್ತಿತ್ವ.