ಬಿಜೆಪಿ ಸೋಲಿಗೆ ಕೋಮು ರಾಜಕೀಯವೇ ಕಾರಣ: ಜಮಾಅತ್

0
1014

ನವ ದೆಹಲಿ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಹೀನಾಯ ಸೋಲನ್ನು ಅನುಭವಿಸಿದೆ.ಇದು ಜನರು ಕೋಮು ರಾಜಕೀಯಕ್ಕೆ ನೀಡಿದ ತಿರಸ್ಕಾರಾತ್ಮಕ ಉತ್ತರವಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಹೇಳಿಕೆ ನೀಡಿದೆ.
ಆಡಳಿತಕ್ಕೆ ಬರುವ ಯಾವುದೇ ಸರಕಾರವೂ ಕೂಡ ಜನರ ಹಿತಾಸಕ್ತಿಗಳು ಮತ್ತು ಬೇಡಿಕೆಗಳ ಪೂರೈಕೆಗೆ ಸ್ಪಂದಿಸಬೇಕೇ ಹೊರತು ಅಲ್ಪ ಸಂಖ್ಯಾತರನ್ನು ಹತ್ತಿಕ್ಕುವ, ಕೋಮು ದ್ವೇಷ ಹರಡುವ ಪ್ರಯತ್ನಗಳಿಗೆ ಕೈ ಹಾಕಬಾರದು. ದೇಶದಲ್ಲಿರುವ ಪ್ರತಿಯೊಂದು ವರ್ಗದ ಜನರಿಗೆ ಸುರಕ್ಷತೆಯನ್ನು ಒದಗಿಸುವಲ್ಲಿ ಆಡಳಿತ ವರ್ಗವು ಶ್ರಮಿಸಬೇಕು.
“ಆಡಳಿತಕ್ಕೆ ಬಂದ ಬಿಜೆಪಿ ಸರಕಾರವು ಚುನಾವಣಾ ಪ್ರಚಾರಗಳಲ್ಲಿಯೂ ಕೂಡ ಕೋಮು ಧೃವೀಕರಣಕ್ಕೆ ಪ್ರಯತ್ನಿಸುವ ಮೂಲಕ ಮತಗಳನ್ನು ಒಡೆದು ಹಾಕುವ ಎಲ್ಲ ಯೋಜನೆಗಳನ್ನು ಕೈಗೊಂಡಿತಾದರೆ;ಜನ ಸಾಮಾನ್ಯರ ದೈನಂದಿನ ಬದುಕಲ್ಲಿ ತುಂಬಿ ಕೊಂಡಿರುವ ಬಡತನ,ನಿರುದ್ಯೋಗ,ಶೈಕ್ಷಣಿಕ ಸಮಸ್ಯೆಗಳು ಹಾಗೂ ಆರೋಗ್ಯ ಸುರಕ್ಷತೆಯನ್ನು ಕಡೆಗಣಿಸಿರುವುದೇ ಈ ಸೋಲಿಗೆ ಜನರಿಂದ ಸಿಕ್ಕ ಉತ್ತರವಾಗಿದೆ”ಎಂದು ಜಮಾಅತೆ ಇಸ್ಲಾಮೀ ಹಿಂದ್ ನ ಪ್ರಧಾನ ಕಾರ್ಯದರ್ಶಿಯಾದ ಮುಹಮ್ಮದ್ ಸಲೀಮ್ ಇಂಜನೀಯರ್ ತಿಳಿಸಿದರು.