ಟಿಆರ್ ಎಸ್ ಗೆಲುವಿಗೆ ಹರ್ಷ ವ್ಯಕ್ತಪಡಿಸಿದ ಜಮಾಅತೆ ಇಸ್ಲಾಮಿ ತೆಲಂಗಾಣ

0
704

ಚಾರ್ ಮಿನಾರ್: ತೆಲಂಗಾಣ ರಾಜ್ಯ ಚುನಾವಣಾ ಫಲಿತಾಂಶದಲ್ಲಿ ಟಿಆರ್ ಎಸ್ ಭರ್ಜರಿ ಜಯ ಸಾಧಿಸಿರುವುದಕ್ಕೆ ಜಮಾಅತೆ ಇಸ್ಲಾಮೀ ತೆಲಂಗಾಣವು ಹರ್ಷ ವ್ಯಕ್ತಪಡಿಸಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತಾಡಿದ ತೆಲಂಗಾಣ ಜಮಾಅತೆ ಇಸ್ಲಾಮೀ ರಾಜ್ಯಾಧ್ಯಕ್ಷರಾದ ಹಮೀದ್ ಮುಹಮ್ಮದ್ ಖಾನ್ ರವರು, “ಚುನಾವಣೆಗಿಂತ ಕೆಲವು ತಿಂಗಳುಗಳ ಮೊದಲೇ ಸ್ಥಳೀಯ ಮತ್ತು ಜಿಲ್ಲಾವಾರು ಸಮೀಕ್ಷೆಗಳನ್ನು ಜಮಾಅತೆ ಇಸ್ಲಾಮೀ ಹಿಂದ್ ಕೈಗೊಂಡಿದ್ದು ಸರಕಾರದ ಕಾರ್ಯ ವೈಖರಿಯ ಕುರಿತು ದತ್ತಾಂಶಗಳನ್ನು ಸಂಗ್ರಹಿಸಿತ್ತು” ಎಂದರು.
“ಇದಲ್ಲದೇ 2004 ರಿಂದ 2014 ರ ವರೆಗೆ ಆಡಳಿತ ನಡೆಸಿದ ಕಾಂಗ್ರೆಸ್ ಅಧಿಕಾರಾವಧಿಯ ಬೆಳವಣಿಗೆಗಿಂತಲೂ 2014 ರಿಂದ 2018ರ ವರೆಗಿನ ಆಡಳಿತಾವಧಿಯಲ್ಲಿ ಟಿ ಆರ್ ಎಸ್ ನ ರಾಜ್ಯ ಬಜೆಟ್ ಅಂಶಗಳು ಅತ್ಯುತ್ತಮ ಬೆಳವಣಿಗೆಯನ್ನು ಹೊಂದಿದ್ದು, ಅಲ್ಪಸಂಖ್ಯಾತರಿಗೆ ಕೊಡುಗೆಗಳ ಬಜೆಟ್, ರಾಜ್ಯದ ಅಭಿವೃದ್ಧಿ ದರ, ರಾಜ್ಯ ಜಿಡಿಪಿ ದರ, ತಲಾ ಆದಾಯ, ನೀರಾವರಿ ಅಭಿವೃದ್ಧಿಗೆ ತರಲಾದ ಹೊಸ ಭೂಮಿ, ಕಾನೂನು ಮತ್ತು ಸುವ್ಯವಸ್ಥೆ, ಅಭಿವೃದ್ಧಿ ಯೋಜನೆಗಳು ಹಾಗೂ ಹೊಸ ಸಮಾಜ ಕಲ್ಯಾಣ ಯೋಜನೆಗಳಲ್ಲಿಯೂ ಗಣನೀಯ ಪ್ರಗತಿಯನ್ನು ಸಾಧಿಸಿರುವುದನ್ನು ರಾಜ್ಯದ ಜನತೆ ಗುರುತಿಸಿದ್ದಾರೆ” ಎಂದು ಅವರು ಈ ಸಂದರ್ಭದಲ್ಲಿ ನುಡಿದರು.