ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಜ. 6: ಜೆಎನ್ಯು ವಿದ್ಯಾರ್ಥಿಗಳ ಮೇಲೆ ನಡೆದಿರುವ ಕ್ರೂರ ಹಲ್ಲೆಯು ಕಂಪಿಸುವಂತೆ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ದೇಶವನ್ನು ನಿಯಂತ್ರಿಸುವ ಫ್ಯಾಶಿಸ್ಟ್ ಗಳು ವಿದ್ಯಾರ್ಥಿಗಳ ಧ್ವನಿಗೆ ಹೆದರುತ್ತಿದ್ದಾರೆ ಎಂಬುದು ಘಟನೆಯಿಂದ ಸಾಬೀತಾಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಜೆಎನ್ಯು ಕ್ಯಾಂಪಸ್ನಲ್ಲಿ ಎಬಿವಿಪಿ ದುಷ್ಕರ್ಮಿಗಳ ನೇತೃತ್ವದಲ್ಲಿ ಬಂದ ಗೂಂಡಾಗಳು ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷೆ ಐಶಿ ಘೋಷ್ ಮುಂತಾದವರನ್ನು ಗಂಭೀರವಾಗಿ ಹೊಡೆದಿದ್ದಾರೆ. ಹಲ್ಲೆ ತಡೆಯಲು ಬಂದ ಅಧ್ಯಾಪಕರಿಗೂ ಪೆಟ್ಟು ಬಿದ್ದಿದೆ. ಘಟನೆಯ ವಿವರ ತಿಳಿದು ಕ್ಯಾಂಪಸ್ಗೆ ಬಂದ ಸಾಮಾಜಿಕ ತಜ್ಞ, ಸ್ವರಾಜ್ ಪಾರ್ಟಿ ನಾಯಕ ಯೋಗೇಂದ್ರ ಯಾದವ್ರಿಗೂ ಪೆಟ್ಟುಬಿದ್ದಿತ್ತು.












