ಜೆಎನ್‍ಯುನಲ್ಲಿ ಶುಲ್ಕ ಹೆಚ್ಚಳ: ಪೊಲೀಸರೊಂದಿಗೆ ಘರ್ಷಣೆ

0
413

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ನ.11: ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಕ್ಯಾಂಪಸ್‍ನಲ್ಲಿ ಶುಲ್ಕ ಹೆಚ್ಚಳ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆಯು ಹಿಂಸಾಗ್ರಸ್ತವಾಗಿದೆ. ಜೆಎನ್‍ಯು ವಿದ್ಯಾರ್ಥಿ ಯೂನಿಯನ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಪ್ರತಿಭಟನಾಕಾರರ ಜಾಥಾಕ್ಕೆ ಪೊಲೀಸರು ಬ್ಯಾರಿಕೇಡ್ ಮುಂದೊಡ್ಡಿ ತಡೆಯಲು ಯತ್ನಿಸಿದಾಗ ವಿದ್ಯಾರ್ಥಿಗಳು ಅದನ್ನು ದಾಟಿ ಮುಂದೆ ಬರಲು ಯತ್ನಿಸಿದರು. ನಂತರ ಪೊಲೀಸರು ಲಾಠಿ ಚಾರ್ಜ್‍ ಮಾಡಿದ್ದಾರೆ.

ಕ್ಯಾಂಪಸ್ಸಿನ ಪದವಿಪ್ರದಾನ ಕಾರ್ಯಕ್ರಮ ಬಹಿಷ್ಕರಿಸಿ ವಿದ್ಯಾರ್ಥಿಗಳು ಪ್ರತಿಭಟನೆಗಾಗಿ ಬೀದಿಗಿಳಿದಿದ್ದರು. ಉಪರಾಷ್ಟ್ರಪತಿ ವೆಂಕಯ್ಯ ನಾಯಿಡು ಭಾಗವಹಿಸಿದ್ದ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಬಹಿಷ್ಕರಿಸಿ ಪ್ರತಿಭಟನೆಗೆ ಬಂದಿದ್ದರು. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರನ್ನು ವಿನ್ಯಾಸಗೊಳಿಸಲಾಯಿತು.

ಆರ್ಥಿಕವಾಗಿ ಹಿಂದುಳಿದ ನಲ್ವತ್ತು ಶೇಕಡಾಕ್ಕೂ ಹೆಚ್ಚು ವಿದ್ಯಾರ್ಥಿಗಳು ಜೆಎನ್‍ಯುವಿನಲ್ಲಿ ಕಲಿಯುತ್ತಿದ್ದಾರೆ. ಶುಲ್ಕದಲ್ಲಿ ವಿಪರೀತ ಹೆಚ್ಚಳವನ್ನು ಹಿಂಪಡೆಯಬೇಕೆಂದು ವಿದ್ಯಾರ್ಥಿ ಯೂನಿಯನ್‍ಗಳು ಆಗ್ರಹಿಸಿವೆ. ಆದರೆ ವಿದ್ಯಾರ್ಥಿ ಪ್ರತಿಭಟನೆ ಅಕಾಡಮಿಕ್ ಚಟುವಟಿಕೆಗಳಿಗೆ ಅಡ್ಡಿಯಾಗಿದೆ ಮತ್ತು ಭಾರತದಾದ್ಯಂತದ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗಿದೆ ಎಂದು ವಿಶ್ವವಿದ್ಯಾನಿಲಯದ ಅಧಿಕಾರಿಗಳು ಟೀಕಿಸಿದ್ದಾರೆ.