ಮಂದಿರ ಕೆಡವಿ ಮಸೀದಿ ಕಟ್ಟಿಲ್ಲ ಅಂದ ಮೇಲೆ ಜಮೀನಿನ ಒಡೆತನ ರಾಮಲಲ್ಲಾನಿಗೆ ಏಕೆ ಕೊಟ್ಟಿರಿ? ಜಸ್ಟಿಸ್ ಎ ಕೆ ಗಂಗೂಲಿ ಪ್ರಶ್ನೆ

0
9500

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ನ. 11: ಅಯೋಧ್ಯೆ ಪ್ರಕರಣದಲ್ಲಿ ದೇಶದ ಅಲ್ಪಸಂಖ್ಯಾತರೊಂದಿಗೆ ತಪ್ಪು ಎಸಗಲಾಗಿದೆ ಎಂದು ನಿವೃತ್ತ ಸುಪ್ರೀಕೋರ್ಟು ಜಡ್ಜ್ ಜಸ್ಟಿಸ್ ಎ ಕೆ ಗಂಗೂಲಿ ಹೇಳಿದ್ದಾರೆ. ತೀರ್ಪು ಅಚ್ಚರಿಯಲ್ಲಿ ಕೆಡವಿದೆ. ಅಸ್ವಸ್ಥತೆಯಿದೆ. ದೇಶದ ಎಲ್ಲ ಪ್ರಜೆಗಳಿಗೂ ಹಕ್ಕು ನೀಡುವ ಸಂವಿಧಾನ ನಮ್ಮದು. ಆದ್ದರಿಂದ ನ್ಯಾಯ ಎಲ್ಲರಿಗೂ ಸಿಗಬೇಕು. ಆದರೆ ಈ ಪ್ರಕರಣದಲ್ಲಿ ಅಲ್ಪಸಂಖ್ಯಾತರಿಗೆ ನ್ಯಾಯ ಸಿಕ್ಕಿಲ್ಲ ಎಂದು ಅವರು ಹೇಳಿದರು.

ಮಸೀದಿಯನ್ನು ಪೂರ್ಣ ಅಕ್ರದಿಂದ ಕೆಡವಲಾಯಿತು. ಅದು ಕಾನೂನು ವ್ಯವಸ್ಥೆಯನ್ನು ಉಲ್ಲಂಘಿಸಿದ ಘಟನೆಯಾಗಿದೆ. ಇದು ಸುಪ್ರೀಂಕೋರ್ಟಿನ ತೀರ್ಪಿನಲ್ಲಿಯೂ ಇದೆ. ಯಾರಿಗೆ ಅನ್ಯಾಯವಾಗಿದ್ದು ಎಂಬ ಪ್ರಶ್ನೆ ಈ ಹಂತದಲ್ಲಿ ಎದ್ದುನಿಲ್ಲುತ್ತದೆ. ಅನ್ಯಾಯ ಅಲ್ಪಸಂಖ್ಯಾತರ ಪಾಲಿಗಾಯಿತು ಎಂದು ಗಂಗೂಲಿ ಹೇಳಿದರು. ದೇವಸ್ಥಾನ ಕೆಡವಿ ಮಂದಿರ ಕಟ್ಟಿರಲಿಲ್ಲ ಎಂದು ಕೋರ್ಟು ಹೇಳಿದೆ. ಮಸೀದಿಯ ಅಡಿಯಲ್ಲಿ ರಾಮ ಮಂದಿರದ ಒಂದು ಕುರುಹೂ ಸಿಕ್ಕಿಲ್ಲ.

ಮಸೀದಿ ಕೆಡವಿದ್ದು ಸಂವಿಧಾನ ತತ್ವಗಳ ಉಲ್ಲಂಘನೆಯಾಗಿದೆ. ಮತ್ತೆ ಯಾವ ಆಧಾರದಲ್ಲಿ ಜಮೀನಿನ ಒಡೆಯ ರಾಮ ಲಲ್ಲಾ ಎಂದು ಹಿಂದೂಗಳು ನಂಬುತ್ತಿದ್ದಾರೆ ಅನ್ನುವ ಪ್ರಶ್ನೆಯಿದೆ. ಸಂವಿಧಾನ ಕಲಿಯುವವ ಎಂಬ ನೆಲೆಯಲ್ಲಿ ನನ್ನ ಮನಃಸಾಕ್ಷಿ ಅಸ್ವಸ್ಥವಾಗಿದೆ. ಅಲ್ಪಸಂಖ್ಯಾತರ ಸಹಿತ ಎಲ್ಲ ಪ್ರಜೆಗಳ ಹಕ್ಕು ರಕ್ಷಿಸುವ ಹೊಣೆ ಸುಪ್ರೀಂಕೋರ್ಟಿಗಿದೆ. ನನ್ನ ಹಕ್ಕುಗಳ ಅವಸ್ಥೆ ಏನಾದೀತು ಎಂದು ಅವರು ಪ್ರಶ್ನಿಸಿದರು.