ಮೋಹನ್ ಭಾಗವತ್‌ರ ‘ಹಿಂದೂ ರಾಷ್ಟ್ರ’ ಅಸ್ಥಿರತೆಯ ಭಾವನೆ- ಉವೈಸಿ

0
496

ಸನ್ಮಾರ್ಗ‌ ವಾರ್ತೆ

ಮುಂಬೈ,ಅ.9: ಭಾರತ ‘ಹಿಂದೂ ರಾಷ್ಟ್ರ’ ಎಂಬ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್‍ರ ಹೇಳಿಕೆಯನ್ನು ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಉವೈಸಿ ಟೀಕಿಸಿದ್ದಾರೆ. ‘ಹಿಂದೂ ರಾಷ್ಟ್ರ’ ಆಶಯ ಹಿಂದೂ ಮೇಲ್ಮೆಯ ಆಧಾರದಲ್ಲಿರುವುದು ಎಂದು ಉವೈಸಿ ಹೇಳಿದರು.

ಹಿಂದೂಗಳಲ್ಲದವರನ್ನು ದಮನಿಸುವ ಉದ್ದೇಶ ಹೊಂದಿದೆ ಮತ್ತು ಅಲ್ಪಸಂಖ್ಯಾತರನ್ನು ಭಾರತದಲ್ಲಿ ಬದುಕಲು ಬಿಡುವುದಿಲ್ಲ ಎಂದಾಗಿದೆ ಎಂದು ಉವೈಸಿ ಟ್ವೀಟ್ ಮಾಡಿದರು. ಸಂವಿಧಾನ ಪ್ರಕಾರ ಜನರೇ ಭಾರತ ಆಗಿದ್ದಾರೆ. ಅಸ್ಥಿರತೆಯ ಭಾವನೆ ಹಿಂದೂ ರಾಷ್ಟ್ರ ಎಂಬ ವಾದವಾಗಿದೆ ಎಂದು ಕಟುವಾಗಿ ಉವೈಸಿ ಟೀಕಿಸಿದರು.

ಭಾರತ ಹಿಂದೂ ರಾಷ್ಟ್ರವೆಂಬ ನಿಲುವಿಗೆ ಬದ್ಧ ಮತ್ತು ಅಲ್ಪಸಂಖ್ಯಾತರ ವಿರುದ್ಧವಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ವಿಜಯದಶಮಿ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಜನರ ಗುಂಪು ಹತ್ಯೆ ದೇಶದ ಪರಂಪರೆಯಲ್ಲ ಆ ಪದವನ್ನು ಪಾಶ್ಚಾತ್ಯರು ಹುಟ್ಟು ಹಾಕಿದ್ದಾರೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಭಾಗವತ್‍ರ ಹೇಳಿಕೆಯ ವಿರುದ್ಧ ಹಲವು ಪ್ರಮುಖರು ಕಟು ಟೀಕೆ ವ್ಯಕ್ತಪಡಿಸಿ ರಂಗಪ್ರವೇಶಿಸಿದ್ದಾರೆ.