ನಿತೀಶ್ ಇನ್ನೊಮ್ಮೆ ಮುಖ್ಯಮಂತ್ರಿಯಾಗುವುದಿಲ್ಲ- ಚಿರಾಗ್ ಪಾಸ್ವಾನ್

0
359

ಸನ್ಮಾರ್ಗ ವಾರ್ತೆ

ಕಜಾರಿಯ(ಬಿಹಾರ,ನ.3: ಬಿಹಾರದಲ್ಲಿ ನಿತೀಶ್ ಕುಮಾರ್ ಪುನಃ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ಮತ್ತೊಮ್ಮೆ ಹೇಳಿದ್ದಾರೆ. ಬಿಹಾರದ ವಿಧಾನಸಭಾ ಚುನಾವಣೆಯ ಎರಡನೆ ಹಂತದ ಮತದಾನದಲ್ಲಿ ಭಾಗವಹಿಸಿ ಹೊರಬಂದಾಗ ಅವರು ಮಾಧ್ಯಮದವರ ಮುಂದೆ ಹೀಗೆ ಹೇಳಿದರು. ಎಲ್‍ಜೆಪಿ ಬೆಂಬಲದಲ್ಲಿ ಬಿಜೆಪಿ ಸರಕಾರ ರಚಿಸಲಿದೆ ಎಂದು ಚಿರಾಗ್ ಪಾಸ್ವಾನ್ ಹೇಳಿದರು. ನಿತೀಶ್ ಮುಕ್ತ ಬಿಹಾರಕ್ಕಾಗಿ ಜನರು ಅನುಗ್ರಹಿಸಿದ್ದಾರೆ. ನವೆಂಬರ್ ಹತ್ತರ ಬಳಿಕ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮುಂದುವರಿಯುವುದಿಲ್ಲ ಎಂದು ನಾನು ನಿಮಗೆ ಬರೆದು ಕೊಡುತ್ತೇನೆ. ಇದರಲ್ಲಿ ನನ್ನ ಯಾವುದೇ ಪಾತ್ರವಿಲ್ಲ. ನನ್ನ ಆದ್ಯತೆ ಮೊದಲು ಬಿಹರಾಕ್ಕೆ. ಬಿಹಾರಿ ಮೊದಲು. ನಾಲ್ಕು ಲಕ್ಷ ಬಿಹಾರಿಗಳ ನಿರ್ದೇಶನದಂತೆ ತಯಾರಿಸಿದ ದರ್ಶನ ರೇಖೆಯಂತೆ ಕೆಲಸ ಮಾಡಲು ಬಯಸುತ್ತೇನೆ. ಎಂದು ಚಿರಾಗ್ ಪಾಸ್ವಾನ್ ಎಎನ್‍ಐಗೆ ಹೇಳಿದರು.

ರಾಜ್ಯ ಸರಕಾರವನ್ನು ನಿರಂತರ ಟ್ವೀಟ್‍ಗಳ ಮೂಲಕ ಚಿರಾಗ್ ಪಾಸ್ವಾನ್ ಟೀಕಿಸಿದ್ದರು. ಮೊದಲ ಹಂತದ ಚುನಾವಣೆಯ ಬಳಿಕ ನಿತೀಶ್ ಕುಮಾರ್‌ಜಿ, ಸೋಲಿನ ಹೆದರಿಕೆಯನ್ನು ಯಾರಿಂದಲೂ ಅಡಗಿಸಿಟ್ಟಿಲ್ಲ. ಬಿಹಾರದ ಬದಲಾಣೆಗೆ ಜನರು ಅನುಗ್ರಹಿಸಿದ್ದಾರೆ. ನಿತೀಶ್ ಇಲ್ಲದ ಬಿಹಾರ, ಬಿಹಾರ ಮೊದಲು, ಬಿಹಾರಿ ಮೊದಲು ಎಂದು ಚಿರಾಗ್ ಪಾಸ್ವಾನ್ ಟ್ವೀಟ್ ಮಾಡಿದರು.

ಕಳೆದ ಹದಿನೈದು ವರ್ಷಗಳ ನಡುವೆ ಬಿಹಾರ ಕುಪ್ರಸಿದ್ಧಿಯಿಂದ ದಯನೀಯವಾಗಿ ಬದಲಾಯಿತು. ವಲಸೆ, ನಿರುದ್ಯೋಗ, ನೆರೆ ಇತ್ಯಾದಿಗಳಲ್ಲಿ ಯಾವುದೇ ಬದಲಾವಣೆ ಸಂಭವಿಸಲಿಲ್ಲ. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕತ್ತಲೆಯಲ್ಲಿ ಬದುಕುತ್ತಿದ್ದಾರೆ. ಬಿಹಾರದ ವಲಸೆ ಕಾರ್ಮಿಕರು ತಮ್ಮನ್ನು ಬಿಹಾರಿಗಳೆಂದು ಹೇಳಲು ನಾಚಿಕೆ ಪಡುತ್ತಿದ್ದಾರೆ. ಪ್ರಜಾಪ್ರಭುತ್ವ ಅದರ ತೀರ್ಪು ಬದಲಾಯಿಸಲು ಅವಕಾಶ ಕೊಡುತ್ತದೆ ಎಂದು ಇನ್ನೊಂದು ಟ್ವೀಟ್‍ನಲ್ಲಿ ಚಿರಾಗ್ ಪಾಸ್ವಾನ್ ಹೇಳಿದರು.

ಬಿಹಾರ್ ಫಸ್ಟ್ ಬಿಹಾರಿ ಫಸ್ಟ್ ಎಂಬ ಘೋಷಣೆಯ ಮೂಲಕ ಎಲ್‍ಜೆಪಿ ಚುನಾವಣೆ ಪ್ರಚಾರ ನಡೆಸುತ್ತಿದೆ. ಸೀತಾದೇವಿಗಾಗಿ ಮಂದಿರ ಕಟ್ಟುವುದು ಮುಖ್ಯ ಭರವಸೆಯಾಗಿದೆ. ಉತ್ತರಪ್ರದೇಶದ ಅಯೋಧ್ಯೆಯ ರಾಮಮಂದಿರಕ್ಕಿಂತಲೂ ದೊಡ್ಡ ಮಂದಿರವನ್ನು ಸೀತಾ ಮಾರ್ಹಿಯಲ್ಲಿ ಸೀತಾ ದೇವಿಗಾಗಿ ಕಟ್ಟುವುದಾಗಿ ಎಲ್‍ಜೆಪಿ ಹೇಳುತ್ತಿದೆ.