ಡಾ. ಝೀಟಾ ಲೋಬೊರವರಿಗೆ “ಕಲ್ಲಚ್ಚು” ಪ್ರಶಸ್ತಿ

0
209

ಸನ್ಮಾರ್ಗ ವಾರ್ತೆ

ಮಂಗಳೂರು: ಸಾಹಿತ್ಯ ವಲಯದಲ್ಲಿ ಕಳೆದ 22 ವರ್ಷಗಳಿಂದ ಸಕ್ರಿಯವಾಗಿರುವ ಕಲ್ಲಚ್ಚು ಪ್ರಕಾಶನ ವಾರ್ಷಿಕವಾಗಿ ಕೊಡಮಾಡುವ, 13ನೇ ಆವೃತ್ತಿಯ 2022ರ “ಕಲ್ಲಚ್ಚು ಪ್ರಶಸ್ತಿಗೆ” ಲೇಖಕಿ, ಕಲಾವಿದೆ ಮತ್ತು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಶಿಕ್ಷಣತಜ್ಞೆ ಡಾ.ಝೀಟಾ ಲೋಬೊರವರು ಆಯ್ಕೆಯಾಗಿದ್ದಾರೆ.

ಕನ್ನಡ, ಇಂಗ್ಲಿಷ್ ಮತ್ತು ಕೊಂಕಣಿ ಭಾಷೆಯ ಸಾಹಿತ್ಯ ಕೃತಿಗಳನ್ನು ರಚಿಸಿರುವ ಇವರು ಅತ್ಯುತ್ತಮ ಚಿತ್ರ ಕಲಾವಿದೆಯಾಗಿದ್ದು ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಭೋದನೆ ಮಾಡಿರುವ ಅಪಾರ ಆನುಭವ ಹೊಂದಿದ್ದಾರೆ. ಸಾಮಾಜಿಕ ಕಳಕಳಿಯ, ಪರಿಸರ ಸ್ನೇಹಿ ಕೈಂಕರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ‌.

ನವಂಬರ್ 27 ಆದಿತ್ಯವಾರದಂದು ಸಂಜೆ 4.00 ಗಂಟೆಗೆ ಮಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲ್‌ನಲ್ಲಿ ಜರಗಲಿರುವ ವೈಶಿಷ್ಟ್ಯಪೂರ್ಣ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಾದ ಕೆ.ರಮೇಶ ನಾಯಕ್ ರಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಡಾ.ಹಿಮ ಉರ್ಮಿಳಾ ಶೆಟ್ಟಿ, ಅನಿಲ್ ಕುಮಾರ್ ಶಾಸ್ತ್ರಿ, ಫಾತಿಮಾ ರಲಿಯಾ ಮತ್ತು ಧರ್ಮದರ್ಶಿ ಹರಿಕೃಷ್ಣ ಪುನರೂರು ಆತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಪ್ರಕಾಶನದ ಮುಖ್ಯಸ್ಥ ಸಾಹಿತಿ ಮಹೇಶ ಆರ್. ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.