ಕಲ್ಲಡ್ಕ ಅನುಗ್ರಹ ಕಾಲೇಜು; ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಾಗಾರ

0
166

ಸನ್ಮಾರ್ಗ ವಾರ್ತೆ

ಕಲ್ಲಡ್ಕ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಕುರಿತು ಕಾರ್ಯಾಗಾರವನ್ನು ಮೇ ೨೦ ರಂದು ಹಮ್ಮಿಕೊಳ್ಳಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಎಸ್.ಡಿ.ಎಂ ಕಾಲೇಜು ಉಜಿರೆಯ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಗಣರಾಜ.ಕೆ ಆಗಮಿಸಿ ರಾಷ್ಟ್ರೀಯ ಶಿಕ್ಷಣ ನೀತಿಯ ಮಹತ್ವದ ಕುರಿತು ಸವಿಸ್ತಾರವಾದ ಮಾಹಿತಿಯನ್ನು ನೀಡಿದರು ಹಾಗೂ ಪ್ರಶ್ನೋತ್ತರ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಯಾಸಿನ್ ಬೇಗ್, ಪ್ರಾಂಶುಪಾಲೆ ಹೇಮಲತಾ ಬಿಡಿ, ಸಲಹಾ ಮಂಡಳಿಯ ಕಾರ್ಯದರ್ಶಿ ಮಮಿತಾ ಎಸ್ ರೈ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ ಮೇಲ್ವಿಚಾರಕರಾದ ಕು. ವಸುಧಾ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ವಾಣಿಜ್ಯ ವಿಭಾಗದ ಉಪನ್ಯಾಸಕಿ ನವ್ಯ ಸ್ವಾಗತಿಸಿ ಅತಿಥಿ ಪರಿಚಯ ಮಾಡಿದರು. ಕು. ನೆಫಿಸತ್ ರಿಶಾ ಕಿರಾತ್ ಪಠಿಸಿ, ಕು. ಮರಿಯಮ್ ರೈಸಾ ಕಾರ್ಯಕ್ರಮವ ನಿರೂಪಿಸಿ ಧನ್ಯವಾದವಿತ್ತರು.