ಸೌದಿ ಅರೇಬಿಯಾ: ಕಾರ್ಮಿಕ ವಿಸಾ ಸ್ಟ್ಯಾಂಪಿಂಗ್ ಗೆ ಬೆರಳಚ್ಚು ಕಡ್ಡಾಯ

0
284

ಸನ್ಮಾರ್ಗ ವಾರ್ತೆ

ಸೌದಿ ಅರೇಬಿಯಾಕ್ಕೆ ಕಾರ್ಮಿಕ ವಿಸಾ ಸ್ಟ್ಯಾಂಪಿಂಗ್ ಮಾಡುವುದಕ್ಕೂ ಬೆರಳ ದಾಖಲೆ ಕಡ್ಡಾಯ ಮಾಡಲಾಗಿದೆ. ಮೇ 29 ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ.

ಇನ್ನು ಮುಂದೆ ಸೌದಿಯಿಂದ ಯಾವ ವೀಸಾ ಲಭಿಸಿದರೂ ಅಗತ್ಯ ದಾಖಲೆಗಳೊಂದಿಗೆ ಭಾರತದ ವಿ ಎಫ್ ಎಸ್ ಕಚೇರಿಗೆ ನೇರವಾಗಿ ಬೆರಳಚ್ಚು ನೀಡಬೇಕಾಗಿದೆ. ಮುಂಬೈ ಸೌದಿ ಕಾನ್ಸಲೆಟ್ ಈ ಕುರಿತಂತೆ ಮಾಹಿತಿಯನ್ನು ಟ್ರಾವೆಲ್ ಏಜೆನ್ಸಿಗಳಿಗೆ ರವಾನಿಸಿದೆ. ವೀಸಾ ಸ್ತ್ಯಾಂಪಿಂಗ್ ನ ಬೆರಳಚ್ಚು ನೀಡದವರ ದಾಖಲೆಗಳನ್ನು ಪರಿಗಣಿಸಲಾಗದು ಎಂದು ತಿಳಿಸಿದೆ. ವಿಸಿಟಿಂಗ್ ವೀಸಾ ಬಯಸುವವರಿಗೆ ಈ ಮೊದಲೇ ಈ ನಿಯಮ ಅನ್ವಯವಾಗಿತ್ತು.

ಕಾರ್ಮಿಕ ವಿಸಕ್ಕಾಗಿಯೂ ಕಚೇರಿಗೆ ನೇರವಾಗಿ ಬರಬೇಕೆಂದು ಹೇಳುವಾಗ ಇಲ್ಲಿ ಜನಸಂದಣಿ ಹೆಚ್ಚಾಗಲಿದೆ. ವಿಸಿಟಿಂಗ್ ವೀಸಾದವರಿಗೆ ಈ ನಿಯಮ ಅನ್ವಯಿಸಿದಾಗಲೂ ಈ ಜನಸಂದಣಿ ಸಮಸ್ಯೆಯಾಗಿತ್ತು. ಆದ್ದರಿಂದ ಕಾರ್ಮಿಕ ವಿಸಾದವರಿಗೂ ಈ ನಿಯಮ ಅನ್ವಯಿಸಿದಾಗ ಜನಸಂದಣಿ ದುಪ್ಪಟ್ಟಾಗಲಿದೆ ಎಂದು ಹೇಳಲಾಗಿದ್ದು ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸೌದಿ ವಿದೇಶಾಂಗ ಸಚಿವರಿಗೆ ಈ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.