ಅಧಿಕಾರಕ್ಕೆ ಬಂದರೆ ಗೃಹಿಣಿಯರಿಗೆ ತಿಂಗಳ ಸಂಬಳ: ಕಮಲ್ ಹಾಸನ್

0
508

ಸನ್ಮಾರ್ಗ ವಾರ್ತೆ

ಚೆನ್ನೈ: ತಮಿಳುನಾಡಿನಲ್ಲಿ ತನ್ನ ಪಕ್ಷವು ಅಧಿಕಾರಕ್ಕೆ ಬಂದರೆ ಮನೆಯಲ್ಲಿಯೇ ಕೆಲಸ ಮಾಡುತ್ತಾ ಕುಟುಂಬ‌ ಪೋಷಣೆ ಮಾಡುವ ಗೃಹಿಣಿಯರಿಗೆ ಖಾಯಂ ಆಗಿ ತಿಂಗಳ ಸಂಬಳ ಕೊಡುವೆ ಎಂದು ನೂತನ ಮಕ್ಕಳ್ ಮಯ್ಯಂ ಪಕ್ಷದ ಅಧ್ಯಕ್ಷ ಹಾಗೂ ಚಲನಚಿತ್ರ ನಟ ಕಮಲ್ ಹಾಸನ್ ಘೋಷಿಸಿದ್ದಾರೆ.

ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುವೆ ಎಂದಿರುವ ಅವರು, ರಜನೀಕಾಂತ್‍ ರ ಜೊತೆಗೆ ಸಖ್ಯ ಮಾಡಿಕೊಳ್ಳುವ ವಿಷಯದಲ್ಲಿ ಸರಿಯಾದ ಸಮಯದಲ್ಲಿ ಹೇಳುವೆ. ಆದರೆ ದ್ರಾವಿಡ ಪಾರ್ಟಿಗಳೊಂದಿಗೆ ಸಖ್ಯ ಮಾಡಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು.

ಎಂಜಿ ರಾಮಚಂದ್ರನ್‍ರ ಪರಂಪರೆ ಹೇಳಿಕೊಳ್ಳಬಹುದಾದವರು ಯಾರೂ ಅಣ್ಣಾ ಡಿಎಂಕೆಯಲ್ಲಿಲ್ಲ ಎಂದು ತಿಳಿಸಿರುವ ಕಮಲ್ ಹಾಸನ್, ನಾಳೆ ನಮ್ಮದೇ ಎಂಬುದು ನಮ್ಮ ಘೋಷಣೆಯಾಗಿದೆ. ಮಹಾತ್ಮ ಗಾಂಧಿ, ಎಂಜಿ ಆರ್, ಪೆರಿಯಾರ್, ಅಂಬೇಡ್ಕರ್ ನಮ್ಮ ಜನರಿಗೆ ನೇತೃತ್ವ ನೀಡಿದವರು ಎಂದು ಅವರು ಹೇಳಿದರು.

ಈ ನಡುವೆ ಕಮಲ್‍ರ ಮಕ್ಕಳ್ ನೀತಿ ಮಯ್ಯದೊಂದಿಗೆ ಸಹಕರಿಸುವುದಾಗಿ ಆಮ್ ಅದ್ಮಿ ಪಾರ್ಟಿ ತಿಳಿಸಿದೆ. ಎರಡು ಪಾರ್ಟಿಗಳು ಪರಸ್ಪರ ಚರ್ಚೆ ಮಾಡಿದುದಾಗಿ ಆಮ್ ಆದ್ಮಿ ತಮಿಳ್ನಾಡು ಘಟಕ ಹೇಳಿದೆ.