ಹೊಸದಿಲ್ಲಿ,ಮೇ 16; ಲೋಕಸಭಾ ಚುನಾವಣೆಯ ನಂತರ ಪ್ರಧಾನಿ ಸ್ಥಾನ ಸಿಗದಿದ್ದರೂ ತೊಂದರೆಯಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಝಾದ್ ಹೇಳಿದರು. ಕಾಂಗ್ರೆಸೇತರ ಪ್ರಧಾನಿಯನ್ನು ಕಾಂಗ್ರೆಸ್ ವಿರೋಧಿಸುವುದಿಲ್ಲ. ಪಾಟ್ನದ ಸುದ್ದಿಗೋಷ್ಠಿಯಲ್ಲಿ ಗುಲಾಂ ನಬಿ ಆಝಾದ್ ನಿರ್ಣಾಯಕವೆನಿಸುವಂತಹ ಹೇಳಿಕೆ ನೀಡಿದರು.
ಬಿಜೆಪಿ ನೇತೃತ್ವದ ಎನ್ಡಿಎ ಸರಕಾರವನ್ನು ಕೆಳಗಿಳಿಸುವುದು ಕಾಂಗ್ರೆಸ್ನ ಪ್ರಥಮ ಗುರಿಯಾಗಿದೆ. ಪ್ರತಿಪಕ್ಷದಲ್ಲಿ ಸಹಮತವಿದ್ದರೆ ಕಾಂಗ್ರೆಸ್ಸಿನ ಪ್ರಧಾನಿಯಾಗುವರು. ಇನ್ನು ಯಾವತ್ತೂ ನರೇಂದ್ರ ಮೋದಿ ದೇಶದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ದೇಶಾದ್ಯಂತ ಚುನಾವಣಾ ಪ್ರಚಾರಕ್ಕೆ ಸಂಚರಿಸಿದಾಗ ಜನರ ಮನೋಭಾವ ಇದನ್ನು ಸ್ಪಷ್ಟವಾಗಿ ಸೂಚಿಸಿದೆ. ಪ್ರತಿಪಕ್ಷಗಳು ಕೆಲವು ಪಾರ್ಟಿಗಳ ನೇತೃತ್ವದಲ್ಲಿ ಸಖ್ಯಕ್ಕೆ ಯತ್ನಿಸುವಾಗ ಕಾಂಗ್ರೆಸ್ ಹೊಸ ವರಸೆ ಹೊರ ತೆಗೆಯಿತು. ಇದು ಪ್ರತಿಪಕ್ಷಗಳನ್ನು ಕಾಂಗ್ರೆಸ್ಸಿನ ಜತೆ ನಿಲ್ಲುವಂತಾಗಲು ಸಹಕರಿಸಬಹುದು ಎನ್ನಲಾಗಿದೆ.












