ಮಧ್ಯಪ್ರದೇಶ: ಕಮಲ್‍ನಾಥ್‍ರನ್ನು ಹುಚ್ಚ ಎಂದ ಬಿಜೆಪಿ ಅಭ್ಯರ್ಥಿ

0
363

ಸನ್ಮಾರ್ಗ ವಾರ್ತೆ

ಭೋಪಾಲ, ಅ.27: ರಾಜಕೀಯ ವಿರೋಧಿಯನ್ನು ಹುಚ್ಚ ಎಂದು ಕರೆದ ಘಟನೆಯಲ್ಲಿ ಮಧ್ಯಪ್ರದೇಶದ ಬಿಜೆಪಿ ಅಭ್ಯರ್ಥಿ ಉಮಾರ್ತಿ ದೇವಿಗೆ ಚುನಾವಣಾ ಆಯೋಗ ನೋಟಿಸು ಜಾರಿ ಮಾಡಿದೆ. ನೋಟಿಸಿಗೆ 48 ಗಂಟೆಗಳೊಳಗೆ ಉತ್ತರಿಸಬೇಕೆಂದು ಚುನಾವಣಾ ಆಯೋಗ ಆದೇಶಿಸಿದೆ. ಮುಖ್ಯಮಂತ್ರಿಯಾಗಲು ಇಲ್ಲಿಗೆ ಬಂದ ಬಂಗಾಳಿ ಅವರು. ಅವರಿಗೆ ಮಾತಾಡಲು ತಿಳಿಯುವುದಿಲ್ಲ. ಮುಖ್ಯಮಂತ್ರಿಯ ಸೀಟಿನಿಂದ ತೆಗೆದುಹಾಕಿದ ಬಳಿಕ ಅವರು ಹುಚ್ಚರಾಗಿಬಿಟ್ಟಿದ್ದಾರೆ. ಮನೋಸ್ಥಿತಿಮಿತ ಕೆಟ್ಟಿದೆ. ಅವರ ಬಗ್ಗೆ ಏನೂ ಹೇಳುವುದಿಲ್ಲ ಎಂದು ಉಮಾರ್ತಿ ದೇವಿ ಹೇಳಿದ್ದರೆಂದು ಚುನಾವಣಾ ಆಯೋಗ ತಿಳಿಸಿದೆ.

ಉಮಾರ್ತಿ ದೇವಿಯನ್ನು ಮಧ್ಯಪ್ರದೇಶ ಕಾಂಗ್ರೆಸ್ ನಾಯಕ ಕಮಲ್‍ನಾಥ್ ಐಟಂ ಎಂದು ಕರೆದದ್ದು ವಿವಾದವಾಗಿತ್ತು. ಈ ವಿಷಯದಲ್ಲಿ ನಿಲುವ ವ್ಯಕ್ತಪಡಿಸುವಂತೆ ಕಮಲನಾಥ್‍ರಿಗೂ ಚುನಾವಣಾ ಆಯೋಗ ನೋಟಿಸು ಜಾರಿ ಮಾಡಿತ್ತು. ಕಮಲನಾಥರ ವಿವರಣೆ ಸಿಕ್ಕಿದೊಡನೆ ಬಹಿರಂಗವಾಗಿ ಮಾತಾಡುವಾಗ ಅಂತಹ ಶಬ್ದ ಬಳಸಬಾರದೆಂದು ಚುನಾವಣಾ ಆಯೋಗ ಸೂಚಿಸಿತ್ತು. ಸೆಪ್ಟಂಬರ್ 29ರಿಂದ ಮಧ್ಯಪ್ರದೇಶದಲ್ಲಿ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದೆ.

ಓದುಗರೇ, sanmarga ಫೇಸ್ ಬುಕ್ ಪುಟವನ್ನು like ಮಾಡಿ ನಮ್ಮನ್ನು ಬೆಂಬಲಿಸಿ.