ಕಣ್ವರು ಯಾತ್ರೆ: 18 ಹಿಂಸಾತ್ಮಕ ಘಟನೆಗಳನ್ನು ಉಲ್ಲೇಖಿಸಿದ ಎಪಿಸಿಆರ್

0
204

ಸನ್ಮಾರ್ಗ ವಾರ್ತೆ

ತಿಂಗಳ ಹಿಂದೆ ನಡೆದ ಕನ್ವರ್ ಯಾತ್ರೆಯ 13 ದಿನಗಳ ಅವಧಿಯಲ್ಲಿ ಹಿಂಸಾಚಾರ ಬಲವಂತ ತಾರತಮ್ಯದ ಕ್ರಮಗಳ ನಡವಳಿಕೆಯನ್ನು ಒಳಗೊಂಡ ಕನಿಷ್ಠ 18 ಘಟನೆಗಳು ವರದಿಯಾಗಿವೆ ಎಂದು ಎಪಿಸಿಆರ್ ವರದಿ ಮಾಡಿದೆ.

ಉತ್ತರ ಪ್ರದೇಶ ಉತ್ತರಾಖಂಡ ಮಧ್ಯಪ್ರದೇಶ ದೆಹಲಿ ಮತ್ತು ಬಿಹಾರದಾದ್ಯಂತ ವರದಿಯಾದ ಘಟನೆಗಳು ದೈಹಿಕ ಅಥವಾ ಬಲವಂತದ ಹಿಂಸಾಚಾರವನ್ನು ಒಳಗೊಂಡ 9 ಪ್ರಕರಣಗಳು, ಆಹಾರ ಮತ್ತು ವ್ಯವಹಾರಗಳನ್ನು ಗುರಿಯಾಗಿಸಿಕೊಂಡ ಕನಿಷ್ಠ ನಾಲ್ಕು ಬಹಿಷ್ಕಾರ ಅಥವಾ ತಾರತಮ್ಯದ ಕ್ರಮಗಳು ಮತ್ತು ಅಶ್ಲೀಲ ನಡವಳಿಕೆಯನ್ನು ಒಳಗೊಂಡ ಕನಿಷ್ಠ ಐದು ವರದಿಯಾದ ಅಥವಾ ವೈರಲ್ ಉಲ್ಲೇಖಗಳನ್ನು ಈ ವರದಿ ಉಲ್ಲೇಖಿಸಿದೆ.

ಮುಸ್ಲಿಂ ವ್ಯಕ್ತಿಗಳು ಮತ್ತು ಮುಸ್ಲಿಂ ಒಡೆತನದ ವ್ಯವಹಾರಗಳ ಮೇಲೆ ನಡೆದಿರುವ ಹಲವಾರು ದಾಖಲಿತ ಘಟನೆಗಳು ಹಲ್ಲೆಗಳು ಬಲವಂತ ಮಾಂಸಾಹಾರಿ ಆಹಾರ ಮಾರಾಟದ ಮೇಲಿನ ನಿರ್ಬಂಧಗಳು ಮತ್ತು ತಿನಿಸುಗಳ ವಿರುದ್ಧ ಕ್ರಮ ಸೇರಿದಂತೆ ವರದಿಯಲ್ಲಿ ಹಲವು ವಿಷಯಗಳನ್ನು ಉಲ್ಲೇಖಿಸಲಾಗಿದೆ.

ಕನ್ವರ್ ಯಾತ್ರೆಯು ಜುಲೈ 30 ರಿಂದ ಆಗಸ್ಟ್ 11ರವರೆಗೆ ನಡೆದಿದೆ.

24 ವರ್ಷದ ಟ್ರಕ್ ಚಾಲಕ ಅಜೀಮ್ ಅಲಿ, ಇಮ್ರಾನ್ ಮತ್ತು ಇನ್ನಿತರದ ಮೇಲೆ ಕಣ್ವರಿಗಳು ನಡೆಸಿದ ಹಲ್ಲೆ ಹಿಂಸೆಯ ಬಗ್ಗೆ ವರದಿಯಲ್ಲಿ ಉಲ್ಲೇಖ ಇದೆ.